ಬೆಂಗಳೂರು: ರಾಹುಲ್ ಗಾಂಧಿ ತಮ್ಮ 94 ವರ್ಷದ ಅಜ್ಜಿಗೆ ಸರ್ಪೈಸ್ ನೀಡುವ ಕಾರಣವಾಗಿ ನಿನ್ನೆಯೇ ಹೋಳಿ ಹಬ್ಬದ ಪ್ರಯುಕ್ತ ಇಟಲಿಗೆ ಹಾರಿದ್ದಾರೆ. ಆದರೆ ದೇಶದಲ್ಲಿ ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ 2 ರಾಜ್ಯಗಳಲ್ಲಿ ಧೂಳಿ ಪಟವಾದರೆ ಒಂದು ರಾಜ್ಯದಲ್ಲಿ ಅಲ್ಪ ಮಟ್ಟದ ಮಾನ ಉಳಿಸಿ ಸರ್ಕಾರ ರಚನೆಯತ್ತ ಮುಖ ಮಾಡಿದೆ.
ಇಟಲಿಯಲ್ಲಿ ಎಂಜಾಯ್ ಮೂಡಿನಲ್ಲಿ ಇರುವ ರಾಹುಲ್ ರವರಿಗೆ ಈ ಚುನಾವಣಾ ಫಲಿತಾಂಶ ಮೊದಲೇ ಗೊತ್ತಿತ್ತು ಎಂದಾದರೂ, ಸೋತ ಕಾರ್ಯಕರ್ತರಿಗೆ, ಮುಖಂಡರಿಗೆ ಜೊತೆಯಲ್ಲಿ ಇದ್ದು ಸಾಂತ್ವನ ಹೇಳಬೇಕಿದ್ದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಪಾಡಿಗೆ ತಾವು ಇಟಲಿಗೆ ಹಾರಿರುವುದು ಓರ್ವ ನಾಯಕನ ಗುಣ ಅಲ್ಲ ಎಂಬುದು ಇಲ್ಲಿನ ರಾಜಕೀಯ ವಿಮರ್ಶಾತ್ಮಕರ ಮಾತುಗಳು.
ಒಟ್ಟಾರೆ 2 ರಾಜ್ಯಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗಿದ್ರೆ, ಅತ್ತ ಇಟಲಿಯಲ್ಲಿ ರಾಹುಲ್ ಗಾಂಧಿ ಹೋಳಿ ಆಟದ ಸಂಭ್ರಮದಲ್ಲಿ ತೊಡಗಿದ್ದಾರೆ. 2018ರ ಈ ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಮತ್ತು ದಕ್ಷಿಣ ರಾಜ್ಯಗಳಲ್ಲಿ ಇನ್ನೇನು ಪ್ರಾರಂಭವಾಗಲಿರುವ ಚುನಾವಣಾ ಪ್ರಕ್ರಿಯೆ 2019 ರ ಚುನಾವಣಾ ದಿಕ್ಕುಸೂಚಿಯಾಗಿದ್ದು, ಪರಾಜಯ ಅನುಭವಿಸುತ್ತಿರುವ ಕಾಲದಲ್ಲಿಯೂ ಎಂಜಾಯ್ ಮೂಡಿನಲ್ಲಿ ರಾಹುಲ್ ಇರೋದು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಹುದಾದ ವಾತಾವರಣ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಂತಾಗಬಹುದು ಎಂಬುವುದು ರಾಜಕೀಯ ಪಡಸಾಲೆಯ ಗುಸುಗುಸು.