Wednesday, January 22, 2025
ಸಿನಿಮಾಸುದ್ದಿ

ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್‌ ನಿಧನ – ಕಹಳೆ ನ್ಯೂಸ್

ಮುಂಬೈ, ಎ.30 : ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್‌ ನಿಧನ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ.

67 ವರ್ಷದವರಾದ ರಿಷಿ ಕಪೂರ್‌ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಉಸಿರಾಟದ ತೊಂದರೆ ಸಹ ಕಾಣಿಸಿಕೊಂಡ ಕಾರಣ ಬುಧವಾರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಒಂದು ವರ್ಷಗಳ ಕಾಲ ಅಮೆರಿಕಾದಲ್ಲಿ ಕ್ಯಾನ್ಸರ್‌ಗಾಗಿ ಚಿಕಿತ್ಸೆ ಪಡೆದಿದ್ದು ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ವಾಪಾಸಾಗಿದ್ದರು. ಫೆಬ್ರವರಿ ತಿಂಗಳಲ್ಲಿ ಅನಾರೋಗ್ಯದಿಂದಾಗಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲು ತಮ್ಮ ಕುಟುಂಬದ ಕಾರ್ಯಕ್ರಮಕ್ಕಾಗಿ ದೆಹಲಿಗೆ ತೆರಳಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದು ತಾವು ಇಂಫೆಕ್ಷನ್‌ನಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು. ಬಳಿಕ ಮುಂಬೈಗೆ ಹಿಂದಿರುಗಿದ ಅವರು ಜ್ವರದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಶೀಘ್ರವೇ ಬಿಡುಗಡೆಯಾಗಿದ್ದರು.

ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟನೆ, ನಿರ್ದೇಶನ, ನಿರ್ಮಾಪನ ಮಾಡಿರುವ ಅವರು ಹಾಲಿವುಡ್‌ನ ಸಿನಿಮಾ ಇಂಟರ್ನ್‌ನ್ನು ಬಾಲಿವುಡ್‌ಗೆ ರಿಮೇಕ್‌ ಮಾಡುವುದಾಗಿ ಘೋಷಿಸಿದ್ದರು.