Wednesday, January 22, 2025
ಸುದ್ದಿ

ದೇಶದ ಬಹುತೇಕ ಜಿಲ್ಲೆಗಳಲ್ಲಿ ಮೇ.4ರಿಂದ ಲಾಕ್‌ಡೌನ್ ಸಡಿಲ, ಶೀಘ್ರವೇ ಹೊಸ ಮಾರ್ಗಸೂಚಿ ಬಿಡುಗಡೆ – ಕೇಂದ್ರ ಗೃಹ ಸಚಿವಾಲಯ – ಕಹಳೆ ನ್ಯೂಸ್

ನವದೆಹಲಿ, ಎ.30  : ಕೊರೊನಾ ನಿಯಂತ್ರಣಕ್ಕಾಗಿ ಮಾಡಲಾಗಿರುವ 2ನೇ ಹಂತದ ಲಾಕ್’ಡೌನ್ ಮೇ.3ರಂದು ಮುಕ್ತಾಯಗೊಳ್ಳಲಿದ್ದು ಈ ಕಾರಣದಿಂದಾಗಿ ಮೇ.4ರಿಂದ ದೇಶದ ಬಹುತೇಕ ಜಿಲ್ಲೆಗಳಲ್ಲಿ ಮೇ.4ರಿಂದ ಲಾಕ್’ಡೌನ್ ಸಡಿಲ ಮಾಡಲಾಗುತ್ತದೆ ಹಾಗೂ ಹೊಸ ಮಾರ್ಗಸೂಚಿಗಳು ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತಾಗಿ ಟ್ವೀಟ್‌ ಮಾಡಿರುವ ಕೇಂದ್ರ ಗೃಹ ಸಚಿವಾಲಯದೇಶದಲ್ಲಿ ಪ್ರಸ್ತುತ ಇರುವ ಲಾಕ್‌ಡೌನ್ ಕುರಿತಾಗಿ ಸಮಗ್ರ ವಿಮರ್ಶನಾ ಸಭೆ ನಡೆಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಈವರೆಗೆ ಅಪಾರ ಲಾಭ ಮತ್ತು ಸುಧಾರಣೆಗಳು ಕಂಡುಬಂದಿವೆ. ಈ ಲಾಭವನ್ನು ಹಾಳು ಮಾಡದಂತೆ ನೋಡಿಕೊಳ್ಳಲು, ಲಾಕ್‌ಡೌನ್ ಮಾರ್ಗಸೂಚಿಗಳನ್ನು ಮೇ 3 ರವರೆಗೆ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಈ ಪ್ರಕಾರವಾಗಿ ಮೇ ಮೂವರ ಬಳಿಕ ಹಲವು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಿ ಹಾಟ್‌ಸ್ಪಾಟ್‌ಗಳಲ್ಲಿ ಯಥಾಸ್ಥಿತಿ ಮುಂದುವರೆಸುವ ಸಾಧ್ಯತೆಗಳು ಹೆಚ್ಚಾಗಿದೆ