Thursday, January 23, 2025
ಸುದ್ದಿ

Breaking News : ಆರೆಂಜ್ ಝೋನ್ ನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ರೆಡ್ ಝೋನ್ ಪಟ್ಟಿಯಲ್ಲಿ..! – ಕಹಳೆ ನ್ಯೂಸ್

ಮಂಗಳೂರು, ಏ 30 : ರಾಜ್ಯ ಆರೋಗ್ಯ ಇಲಾಖೆ ಹೊಸ ಮಾನದಂಡಗಳೊಂದಿಗೆ ಜಿಲ್ಲಾವಾರು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯವನ್ನು ಪಟ್ಟಿಮಾಡಿದ್ದು ರಾಜ್ಯದ 15 ಜಿಲ್ಲೆಗಳನ್ನು ಕೆಂಪು ವಲಯಗಳನ್ನಾಗಿ ಘೋಷಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೆಡ್ ಝೋನ್ ಪಟ್ಟಿಯಲ್ಲಿ ಈ ಮೊದಲು ಆರೆಂಜ್ ಝೋನ್ ನಲ್ಲಿದ್ದ ದಕ್ಷಿಣ ಕನ್ನಡವೂ ಸೇರಿಕೊಂಡಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ವೈರಸ್ ಸೋಂಕು ಪ್ರಕರಣಗಳನ್ನು ಆಧರಿಸಿ ಈ ವಲಯಗಳನ್ನು ಗುರುತಿಸಲಾಗಿದೆ. ಕಳೆದ 14 ದಿನಗಳಲ್ಲಿ ಸೋಂಕು ದೃಢಪಟ್ಟ ಜಿಲ್ಲೆಯನ್ನು ‘ಕೆಂಪು ವಲಯವಾಗಿ, ಕಳೆದ 14 ದಿನಗಳಲ್ಲಿ ಯಾವುದೇ ಪ್ರಕರಣ ದಾಖಲಾಗದೆ, 15 ರಿಂದ 28 ದಿನಗಳಲ್ಲಿ ಸೋಂಕು ಪ್ರಕರಣ ದೃಢಪಟ್ಟ ಜಿಲ್ಲೆಯನ್ನು ಕಿತ್ತಳೆ ವಲಯವಾಗಿ, ಕಳೆದ 28 ದಿನಗಳಲ್ಲಿ ಯಾವುದೇ ಸೋಂಕು ಪ್ರಕರಣ ದೃಢಪಡದ ಜಿಲ್ಲೆಯನ್ನು ಹಸಿರು ವಲಯವಾಗಿ ಗುರುತಿಸಲಾಗಿದೆ. ಬುಧವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಾಜ್ಯದ 15 ಜಿಲ್ಲೆಗಳು ಕೆಂಪು ವಲಯದಲ್ಲಿದ್ದರೆ, 3 ಜಿಲ್ಲೆಗಳು ಕಿತ್ತಳೆ ವಲಯದಲ್ಲಿ 12 ಜಿಲ್ಲೆಗಳು ಹಸಿರು ವಲಯದಲ್ಲಿವೆ.

ಉಡುಪಿ ಜಿಲ್ಲೆ ಗ್ರೀನ್ ಝೋನ್ ನ ಅರ್ಹತೆ ಗಳಿಸಿದ್ದು, ಅಧಿಕೃತವಾಗಿ ಘೋಷಣೆಯಾಗಲು ಬಾಕಿ ಇದೆ.