Recent Posts

Sunday, January 19, 2025
ಸುದ್ದಿ

ದಕ್ಷಿಣ ಕನ್ನಡದ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜದ ವಿವಿಧೆಡೆ ಕಳವು ನಡೆಸಿದ ಖದೀಮ, ಸರಣಿ ಕಳ್ಳತನ ನಡೆಸಿದ ಕುಖ್ಯಾತ ಕಳ್ಳ ಉಮ್ಮಾರ್ ಫಾರೂಕ್ ಅರೆಸ್ಟ್ – ಕಹಳೆ ನ್ಯೂಸ್

ಕಡಬ, ಏ 30 : ದಕ್ಷಿಣ ಕನ್ನಡದ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜದಲ್ಲಿ ಇತ್ತೀಚೆಗೆ ಎಸ್.ಬಿ.ಐ ಸೇವಾ ಕೇಂದ್ರ, ಮೊಬೈಲ್ ಅಂಗಡಿ, ಕಾಲೇಜು, ಪಂಚಾಯತ್‌ಗಳಲ್ಲಿ ಕಳ್ಳತನ ನಡೆಸಿದ ಅಲ್ಲದೆ ಕಡಬ ಸೇರಿದಂತೆ ವಿವಿಧ ಠಾಣೆಯಲ್ಲಿ ಒಟ್ಟು 16 ಪ್ರಕರಣ ದಾಖಲಾಗಿರುವ ಕುಖ್ಯಾತ ಕಳ್ಳನನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕಡಬ ಎಸ್.ಐ.ರುಕ್ಮ ನಾಯ್ಕ್ ನೇತೃತ್ವದ ತಂಡವು ಬಂಧಿಸಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತನನ್ನು ಮಂಗಳೂರಿನ ಬಂಟ್ವಾಳ ತಾಲೂಕು ಸಜಿಪನಡು ಪೆರುವ ಮನೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಉಮ್ಮಾರ್ ಫಾರೂಕ್(27) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಕೆಲವು ದಿನಗಳಿಂದ ಈತನ ಪತ್ತೆ ಕಾರ್ಯದಲ್ಲಿದ್ದ ಪೋಲೀಸರಿಗೆ ಆತೂರು ಬಸ್ ನಿಲ್ದಾಣದಲ್ಲಿ ಈತ ಸೆರೆ ಸಿಕ್ಕಿದ್ದಾನೆ. ಈತನಿಂದ ಕಳ್ಳತನಕ್ಕೆ ಬಳಸಿದ ರಾಡ್, ಅಲ್ಲದೆ ಕೆಲವು ಸಾಮಾಗ್ರಿಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ರಾಮಕುಂಜದಲ್ಲಿ ಎಸ್.ಬಿ.ಐ. ಗ್ರಾಹಕರ ಸೇವಾ ಕೇಂದ್ರ, ಮೊಬೈಲ್ ಅಂಗಡಿ, ಪಂಚಾಯತ್ ಹಾಗೂ ಕಾಲೇಜಿನ ಬೀಗ ಮುರಿದು ಕಳ್ಳತನ ನಡೆಸಿದ್ದು, ಈ ಕೃತ್ಯದಲ್ಲಿ ಈತ ಹಾಗೂ ಇನ್ನೋರ್ವ ಫಯಾನ್ ಎಂಬಾತ ಪಾಲ್ಗೋಂಡಿದ್ದು, ಫಯಾನ್ ನನ್ನು ಈಗಾಗಲೇ ಕೊಣಾಜೆ ಠಾಣೆಯ ಪೋಲಿಸರು ಬಂಧಿಸಿ ಆತ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಉಮ್ಮಾರ್ ಫಾರೂಕ್ ವಿರುದ್ದ ಈಗಾಗಲೇ ಕಡಬ ಠಾಣೆಯಲ್ಲಿ-4, ಉಪ್ಪಿನಂಗಡಿ ಠಾಣೆಯಲ್ಲಿ-2, ಬಂಟ್ವಾಳ ಠಾಣೆಯಲ್ಲಿ-3, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ-2, ಕೊಣಾಜೆ ಠಾಣೆಯಲ್ಲಿ-5 ಒಟ್ಟು 16 ಪ್ರಕರಣ ದಾಖಲಾಗಿದೆ.

ಹಣದ ಉದ್ದೇಶದಿಂದ ಕಳ್ಳತನಕ್ಕೆ ಸರಕಾರಿ ಕಛೇರಿ, ಮೊಬೈಲ್ ಅಂಗಡಿಗಳನ್ನೆ ಕಳ್ಳತನಕ್ಕೆ ಆಯ್ಕೆ ಮಾಡಿಕೊಳ್ಳುವ ಚಾಳಿ ಹೊಂದಿರುವುದಾಗಿ ತನಿಖೆಯ ವೇಳೆ ಪೋಲಿಸರಿಗೆ ತಿಳಿದು ಬಂದಿದೆ.

ಈಗಾಗಲೇ ಕೊರೋನಾದಿಂದ ಲಾಕ್‌ಡೌನ್ ಇರುವುದರಿಂದ ಈ ಮಧ್ಯೆ ಈ ಕುಖ್ಯಾತ ಕಳ್ಳನಿಗಾಗಿ ಹಲವು ದಿನಗಳಿಂದಲೇ ಪೋಲಿಸರು ಬಲೆ ಬೀಸಿದ್ದರು. ಈ ಮಧ್ಯೆ ಈ ಕುಖ್ಯಾತ ಕಳ್ಳನನ್ನು ಬಂಧಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ವಿಕ್ರಮ್ ಅಮ್ಟೆ, ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿಯವರ ಮಾರ್ಗದರ್ಶನದಲ್ಲಿ ಕಡಬ ಎಸ್.ಐ. ರುಕ್ಮ ನಾಯ್ಕ್, ಅಪರಾಧ ವಿಭಾಗದ ಎ.ಎಸ್,ಐ ಚಿದಾನಂದ ರೈ, ಹೆಡ್ ಕಾನ್ಸ್‌ಸ್ಟೇಬಲ್‌ಗಳಾದ ಸ್ಕರೀಯ, ವಸಂತ ಗೌಡ, ಕಾನ್ಸ್‌ಸ್ಟೇಬಲ್‌ಗಳಾದ ಭವಿತ್ ರೈ, ಮಹೇಶ್, ದೀಪು,ರಕ್ಷಿತ್ ರೈ ಕಾರ್‍ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.