Sunday, January 19, 2025
ಸುದ್ದಿ

Breaking News : ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ, ಮುತ್ತಪ್ಪ ರೈ ಆರೋಗ್ಯ ಸ್ಥೀತಿ‌ ಚಿಂತಾಜನಕ..! ಸುಧಾರಣೆ ಡೌಟ್ ಎಂದ ವೈದ್ಯರು – ಕಹಳೆ ನ್ಯೂಸ್

ಮುತ್ತಪ್ಪ ರೈ ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದು , ಮಣಿಪಾಲ್ ಆಸ್ಪತ್ರೆಗೆ ದಾಖಳಾಗಿದ್ದಾರೆ, ಜಯ ಕರ್ನಾಟಕದ ಹಲವಾರು ಕಾರ್ಯಕರ್ತರು ಅವರು ಬೇಗನೆ ಗುಣಮುಖವಾಗಲಿ ಎಂದು ಕೋರುತ್ತಿದ್ದಾರೆ.

ಮಾಜಿ ಭೂಗತ ದೊರೆ ಡಾನ್ ಮುತ್ತಪ್ಪ ರೈ ಅವರು ಆರೋಗ್ಯದಲ್ಲಿ ಏರುಪೇರಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಎರಡು ವರ್ಷದಿಂದ ಕ್ಯಾನ್ಸರ್​ನಿಂದ ಬಳಲುತ್ತಿರುವ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ಗಂಭೀರವಾಗಿತ್ತು. ಸಾವು ನೋವಿನ ಮಧ್ಯೆ ಹೋರಾಡುತ್ತಿರುವ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವು ವರ್ಷಗಳ ಹಿಂದೆ ಕುಕ್ಕೆಗೆ ಹೋಗುವ ಸಂದರ್ಭದಲ್ಲಿ ಬೆನ್ನು ನೋವು‌ ಕಾಣಿಸಿಕೊಂಡು. ನಂತರದಲ್ಲಿ ಪರೀಕ್ಷೆ ಮಾಡಲಾಗಿ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ದೆಹಲಿಯ ಮ್ಯಾಕ್ಸ್, ಚೆನ್ಮೈನ ಅಪೋಲೊ , ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ’ ಎಂದು ಅವರು ಮಾಧ್ಯಮ್ ಹೊಂಡಕ್ಕೆ ಸಂದರ್ಶನ ಕೊಟ್ಟಿದ್ದನ್ನು ನಾವಿಲ್ಲಿ ನೆನೆಯಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುತ್ತಪ್ಪ ರೈ ಅವರು ಒನ್ಸ್ ಆಪ್ ಆನ್ ಎ ಟೈಮ್ ಭೂಗತ ಲೋಕವನ್ನು ಮುಷ್ಠಿಯಲ್ಲಿ ಹಿಡಿದ ಖತರ್ನಾಕ್ ಡಾನ್, ಆದರೂ  ಹಲವು ವರ್ಷಗಳಿಂದ ಅವೆಲ್ಲವನ್ನೂ ತ್ಯಜಿಸಿ ಸಮಾಜ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಜಯ ಕರ್ನಾಟಕ ಸಂಘಟನೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

2013ರಲ್ಲಿ ಇವರ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದರು, 2018ರಲ್ಲಿ ರೈ ಅವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಆದರೆ ಕ್ಯಾನ್ಸರ್ ಗೆ ಕ್ಯಾರೆ ಅನ್ನದ ರೈ ಅವರು ಯಾವತ್ತೂ ದೃತಿಗೆಟ್ಟವರಲ್ಲ, ಅದಕ್ಕೆ ಅಂಜಿದವರಲ್ಲ…  ತಮ್ಮ ವಿಲ್ ಪವರ್​ನಿಂದಲೇ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡುತ್ತಾ ಬಂದವರು ಅವರು.

ದೇಹಕ್ಕೆ ಐದು ಬುಲೆಟ್ ಬಿದ್ದರೂ ಹೆದರಿರಲಿಲ್ಲ. ಈಗ ಈ ಕ್ಯಾನ್ಸರ್​ಗೆ ಹೆದರುತ್ತೇನೆಯೇ ಎಂದು ಅವರು ಹೇಳಿದ್ದ ಮಾತುಗಳು ನಾವಿಲ್ಲಿ ನೆನೆಯ ಬಹುದು, ಅಂತೆಯೇ, ಅವರು ತಮ್ಮ ಕೊನೆಯ ಉಸಿರುವವರೆಗೂ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿಯೇ ತೀರುತ್ತೇನೆ ಎಂದಿದ್ದರು. ಈಗಲೂ ಅದೇ ಹೋರಾಟದಲ್ಲಿದ್ಧಾರೆ.

ಸದ್ಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಅವರು ಬೇಗನೆ ಗುಣಮುಖವಾಗಿ ಬರಲಿ ಎಂದು ಅವರ ಜಯ ಕರ್ನಾಟಕ ಸಂಘಟನೆಯ ಹಲವಾರು ಕಾರ್ಯಕರ್ತರು ಕೋರುತ್ತಿದ್ದಾರೆ.