Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ; ಬಂಟ್ವಾಳ ಹಾಗೂ ಬೋಳೂರಿನ ನಿವಾಸಿಗಳಿಗೆ ಕೊರೊನಾ ಸೋಂಕು ದೃಢ – ಕಹಳೆ ನ್ಯೂಸ್
ಮಂಗಳೂರು, ಮೇ 1 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬಂಟ್ವಾಳದ ೬೯ ವರ್ಷದ ವ್ಯಕ್ತಿಯಲ್ಲಿ ಹಾಗೂ ಮಂಗಳೂರಿನ ೬೨ ವರ್ಷದ ವ್ಯಕ್ತಿಯಲ್ಲಿ ಸೋಂಕು ಇರುವುದು ದೃಢವಾಗಿದೆ.
ಈ ಪೈಕಿ ಬಂಟ್ವಾಳ ಮೂಲದ ವ್ಯಕ್ತಿ ರೋಗಿ ಸಂಖ್ಯೆ ೩೯೦ ರ ದ್ವಿತೀಯ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದ್ದು, ಮತ್ತೊಬ್ಬರು ರೋಗಿ ಸಂಖ್ಯೆ ೫೩೬ ರ ನೇರ ಸಂಪರ್ಕ ಹೊಂದಿದ್ದರು.
ಇವರಿಬ್ಬರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.