ಬೆಂಗಳೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರೋ ಬಡವರು, ನಿರ್ಗತಿಕರಿಗೆ ಸೆಲೆಬ್ರಿಟಿಗಳು ಕೂಡಾ ಸಹಾಯ ಹಸ್ತ ಚಾಚಿದ್ದಾರೆ. ಇದೀಗ ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಕೂಡಾ ಹಲವಾರು ಬಡವರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂನಲ್ಲಿರುವ ಕಟ್ಟಡ ಕಾರ್ಮಿಕರು, ಕೊಳಚೆ ಪ್ರದೇಶದ ನಿವಾಸಿಗಳು, ಆಟೋ ಚಾಲಕರಿಗೆ ಪ್ರಣಿತಾ ಆಹಾರವನ್ನು ವಿತರಿಸುತ್ತಿದ್ದಾರೆ. ತಮ್ಮ ಪ್ರಣಿತಾ ಫೌಂಡೇಶನ್ನಿಂದ 1000 ಆಹಾರದ ಪ್ಯಾಕೆಟ್, ದಿನಸಿ ವಸ್ತುಗಳನ್ನು ಬಡ ಜನರಿಗೆ ಪ್ರಣೀತಾ ನಿತ್ಯವೂ ವಿತರಿಸುತ್ತಿದ್ದಾರೆ. ಈ ಮೂಲಕ ಬಡವರು ನಿರ್ಗತಿಕರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.