Recent Posts

Monday, January 20, 2025
ರಾಜಕೀಯಸುದ್ದಿ

ಮುಖ್ಯಮಂತ್ರಿ ಮನೆಗೆ ಬಂದ ಹೊಸ ಅತಿಥಿಗಳು.!! ; ಗಿರಿ ತಳಿಯ ಒಂದು ಹಸು, ಒಂದು ಎತ್ತು ಹಾಗೂ ಕರುವನ್ನುನೀಡಿದ ಯಲಹಂಕ ಶಾಸಕ ವಿಶ್ವನಾಥ್ – ಕಹಳೆ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಹೊಸ ಅತಿಥಿಗಳು ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್.. ಯಲಹಂಕ ಶಾಸಕರಾದ ವಿಶ್ವನಾಥ್ ಅವರು ರಾಜ್ಯದ ಮುಖ್ಯಮಂತ್ರಿಗಳಿಗೆ ಗಿರಿ ತಳಿಯ ಒಂದು ಹಸು, ಒಂದು ಎತ್ತು ಹಾಗೂ ಕರುವನ್ನುನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ 5.45ಕ್ಕೆ ಮುಖ್ಯಮಂತ್ರಿಗಳೂ ಸೇರಿದಂತೆ ಅವರ ಕುಟುಂಬ ವರ್ಗದವರು ಹೊಸ ಅತಿಥಿಗಳನ್ನು ಬರಮಾಡಿಕೊಂಡರು. ಸದ್ಯ ಹೊಸ ಅತಿಥಿಗಳಾದ ಹಸುಗಳಿಗಾಗಿ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಸಿಎಂ ನಿವಾಸಕ್ಕೆ ಇದೇ ಹಸುವಿನಿಂದ ಹಾಲನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಗುಜರಾತಿನ ಈ ಗಿರ್ ತಳಿಯ ಹಸುವಿನ ಹಾಲು ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಸಚಿವರು ಸಹ ಗಿರ್ ತಳಿಯ ಹಸುಗಳ ಸಾಕಲು ಮುಂದಾಗಿದ್ದಾರೆ.

ಸಿಎಂ ಆಪ್ತಕಾರ್ಯದರ್ಶಿ ವಿಶ್ವನಾಥ್ ಕೂಡ ಎರಡು ಹಸು ಖರೀದಿಸಿದ್ದನ್ನು ನೋಡಿದ ಮುಖ್ಯಮಂತ್ರಿಗಳು ಒಲವು ಗಿರ್ ಹಸುಗಳ ಕಡೆ ಮೂಡಿದೆ ಎನ್ನಲಾಗಿದೆ.