Recent Posts

Monday, January 20, 2025
ಸುದ್ದಿ

ಕೊರೊನಾ ಲಾಕ್‌ಡೌನ್‌ ; ವಿದೇಶದಲ್ಲಿರುವ ಕರಾವಳಿಗರನ್ನು ವಾಪಾಸ್‌ ಕರೆತರುವ ಪ್ರಕ್ರಿಯೆ ಆರಂಭ – ಕಹಳೆ ನ್ಯೂಸ್

ಮಂಗಳೂರು, ಮೇ 03  : ಕೊರೊನಾ ಲಾಕ್‌ಡೌನ್‌ ಪರಿಣಾಮ ವಿದೇಶದಲ್ಲೇ ಬಾಕಿಯಾಗಿರುವ ಕರಾವಳಿ ಜಿಲ್ಲೆಯ ಉದ್ಯೋಗಿಗಳು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌ ಕರೆತರುವ ಪ್ರಕ್ರಿಯೆ ಆರಂಭವಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೂರ್ವಭಾವಿ ತಯಾರಿ ನಡೆಸಲು ಕೇಂದ್ರ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲು ಕರ್ನಾಟಕ್ಕೆ ವಾಪಾಸ್‌ ಆಗುವ 6,100 ರಲ್ಲಿ ನಾಲ್ಕು ಸಾವಿರ ಮಂದಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು ಅವರನ್ನು ಕ್ವಾರಂಟೈನ್‌ ಮಾಡುವ ತಯಾರಿಯು ನಡೆಯುತ್ತಿದೆ. ಆದರೆ ಅಷ್ಟು ಮಂದಿಗೆ ಮಂಗಳೂರು ವಿಮಾನ ನಿಲ್ಧಾಣದಲ್ಲೇ ಕ್ವಾರಂಟೈನ್‌ ಮಾಡಲು ಕಷ್ಟವಾದ್ದರಿಂದ ಉಡುಪಿ, ಕೊಡಗು ಸೇಏರಿದಂತೆ ಇತರ ಜಿಲ್ಲೆಯವರನ್ನು ನೇರವಾಗಿ ಅವರ ಜಿಲ್ಲೆಗೆ ಕಳುಹಿಸಿ ಅಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಇತರ ಜನಪ್ರತಿನಿಧಿಗಳು ಕೋರಿದ್ದಾರೆ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಡಗುಗಳ ಮೂಲಕವು 557 ಸಿಬ್ಬಂದಿ ಸಹಿತ ಕೆಲವರು ಬರಲಿದ್ದು ಆ ಹಿನ್ನಲೆಯಲ್ಲಿ ಮಂಗಳೂರು ಹಾಗೂ ಕಾರವಾರ ಬಂದರುಗಳಲ್ಲಿ ಸೂಕ್ತ ಸಿದ್ಧತೆ ನಡೆಸಲು ಕೇಂದ್ರ ಸರ್ಕಾರ ದ.ಕ. ಹಾಗೂ ಉ.ಕ. ಜಿಲ್ಲಾಡಳಿಗಳಿಗೂ ಸೂಚಿಸಿದೆ.

ಏತನ್ಮಧ್ಯೆ ವಿದೇಶದಿಂದ ಬಂದವರು ನೇರವಾಗಿ ಮನೆಗೆ ತೆರಳುವಂತಿಲ್ಲ. ಅವರನ್ನು ಮೂರು ವಿಭಾಗಗಳಲ್ಲಿ ವರ್ಗಿಕರಿಸಬೇಕೆಂದು ತಿಳಿಸಲಾಗಿದೆ.

ತಪಾಸಣೆ ನಡೆಸುವ ಸಂದರ್ಭದಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ‘ಎ’ ಕ್ಯಾಟೆಗರಿ ಎಂದು ಗುರುತಿಸಿ ಅವರ ಗಂಟಲ ದ್ಯವ ಮಾಡರಿಯನ್ನು ಪರೀಕ್ಷೆ ನಡೆಸಿ ಪಾಸಿಟಿವ್‌ ಆದಲ್ಲಿ ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಬೇಕು.

ಕೊರೊನಾದ ಯಾವುದೇ ಲಕ್ಷಣಗಳು ಇಲ್ಲದಿದ್ದಲ್ಲಿ ಹಾಗೂ ಅನಾರೋಗ್ಯ ಇರುವ 60 ವರ್ಷಕ್ಕಿಂತ ಮೇಲ್ಪಟ್ಟವರು ‘ಬಿ’ ಕ್ಯಾಟೆಗರಿಯಾಗಿದ್ದು ಅವರನ್ನು ವೈದ್ಯಕೀಯ ನಿಗಾದೊಂದಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.

ಇನ್ನು ಆರೋಗ್ಯವಾಗಿರುವ 60 ವರ್ಷಕ್ಕಿಂತ ಕೆಳಗಿನವರನ್ನು ‘ಸಿ’ ಕ್ಯಾಟೆಗರಿಗೆ ಒಳಪಡುತ್ತಾರೆ. ಅವರನ್ನು ಕೋವಿಡ್‌ ಕೇರ್‌ ಸೆಂಟರ್‌ (ಹೊಟೇಲ್‌ ಅಥವಾ ಹಾಸ್ಟಲ್‌) ಗಳಲ್ಲಿ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಸೂಚಿಸಲಾಗಿದೆ.

ಹಾಗೆಯೇ ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣ, ಕಾರವಾರ ಮತ್ತು ಮಂಗಳೂರು ಬಂದರು ಹೊರತುಪಡಿಸಿ ದೇಶದ ಇತರ ಬಂದರಿಗೆ ವಿದೇಶದಿಂದ ಆಗಮಿಸಿದ ಬಳಿಕ ರಸ್ತೆ ಮೂಲಕ ಕರ್ನಾಟಕಕ್ಕೆ ಬರುವವರನ್ನೂ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಟಿಸಬೇಕೆಂದು ತಿಳಿಸಲಾಗಿದೆ.

ಮೊದಲು ಕರ್ನಾಟಕಕ್ಕೆ ಕೆನಡದಿಂದ 528, ಯುಎಇಯಿಂದ 2575, ಖತರ್‌ನಿಂದ 414, ಸೌದಿ ಅರೇಬಿಯಾದಿಂದ 927 ಹಾಗೂ ಯುಎಸ್‌ಎಯಿಂದ 927 ಮಂದಿ ಕರೆತರಲು ನಿರ್ಧಾರ ಮಾಡಲಾಗಿದೆ.