Recent Posts

Sunday, January 19, 2025
ಸುದ್ದಿ

ರಾಜ್ಯದಲ್ಲಿ ನೂತನ ಮರಳು ನೀತಿ ಜಾರಿ ; ಪುತ್ತೂರಿನ ಶಾಸಕ ಸಂಜೀವ ಮಠಂದೂರು ಮನವಿಗೆ ಸ್ಪಂದಿಸಿ ರಾಜ್ಯ ಸಚಿವ ಸಂಪುಟದಿಂದ ಒಪ್ಪಿಗೆ ” ಶಾಹಬ್ಬಾಸ್ ಸಂಜೀವಣ್ಣ ” – ಕಹಳೆ ನ್ಯೂಸ್

ಬೆಂಗಳೂರು, ಮೇ.02 : ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ವಿಧಾನ ಸಭೆಯಲ್ಲಿ ನೂತನ ಮರಳು ನೀತಿಯ ಬಗ್ಗೆ ಪ್ರಸ್ತಾಪಿಸಿದ್ದು, ಮತ್ತು ಅಕ್ರಮ ಮರಳುಗಾರಿಕೆ ಕುರಿತು ಧ್ವನಿ ಎತ್ತಿದ್ದರ ಪರಿಣಾಮ, ಅವರ ಮನವಿಗೆ ಸರಕಾರ ಸ್ಪಂದಿಸಿದೆ.

ಶಾಸಕ ಸಂಜೀವ ಮಠಂದೂರು ಮನವಿಯಂತೆ ಪಟ್ಟಾಭೂಮಿ, ಕೆರೆ, ಗ್ರಾಮೀಣ ಭಾಗದ ಹಳ್ಳ, ತಗ್ಗು ಪ್ರದೇಶಗಳಲ್ಲಿ ಮರಳು ತೆಗೆಯಲು ಅವಕಾಶ ಕೊಡುವ ನೂತನ ಮರಳು ನೀತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಅಕ್ರಮ ಮರಳು ದಂಧೆಗೂ ಕಡಿವಾಣ ಬೀಳಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಚಿವ ಸಂಪುಟದ ಬಳಿಕ ಮಾತನಾಡಿದ ಅವರು, ಇಲ್ಲಿಯವರೆಗೂ ನದಿ ಮಾತ್ರಗಳಲ್ಲಿ ಕೆಲವು ಮರಳು ಬ್ಲಾಕ್‌ ಗುರುತಿಸಿ ಹರಾಜು ಹಾಕಲು ಅವಕಾಶವಿತ್ತು. ಪಟ್ಟಾಭೂಮಿ, ಕೆರೆ, ಗ್ರಾಮೀಣ ಭಾಗದ ಹಳ್ಳ, ತಗ್ಗು ಪ್ರದೇಶಗಳಲ್ಲೂ ಮರಳು ತೆಗೆಯಲು ಅವಕಾಶ ಕಲ್ಲಿಸಲಾಗಿದೆ. ಅಲ್ಲದೇ, ಇದರ ಜೊತೆ ಅಕ್ರಮ ಮರಳು ದಂಧೆಗೂ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಯಾ ತಾಲೂಕಿನ ದಂಡಾಧಿಕಾರಿಗಳಾಗಿರುವ ತಹಶೀಲ್ದಾರ್‌ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಮರಳು ತೆಗೆಯುವ ಪ್ರದೇಶವನ್ನು ಗುರುತಿಸಿ ಗ್ರಾಮ ಪಂಚಾಯತ್‌ ಒಪ್ಪಿಗೆಯೊಂದಿಗೆ ಅನುಮತಿ ನೀಡಲಿದ್ದಾರೆ.

ಸ್ಥಳೀಯವಾಗಿ ಜನತಾ ಮನೆ, ಸಣ್ಣ ಪುಟ್ಟ ಕಾಮಗಾರಿಗೆ ಮರಳನ್ನು ಉಪಯೋಗಿಸಬಹದು. ಅಲ್ಲದೇ, ಪ್ರತೀ ಮೆಟ್ರಿಕ್‌ ಟನ್‌ಗೆ 700 ರೂ.ವರೆಗೆ ಬೆಲೆ ನಿಗದಿ ಮಾಡಲಾಗುತ್ತದೆ. ದಂಡಾಧಿಕಾರಿಗಳಿಗೆ ಬೆಲೆ ನಿಗದಿಯಲ್ಲೂ ಅಧಿಕಾರ ಇರಲಿದೆ ಎಂದು ಜೆ.ಸಿ. ಮಾಧುಸ್ವಾಮಿ ಅವರು ಹೇಳಿದ್ದಾರೆ.

ನೂತನ ಮರಳು ನೀತಿ ಜಾರಿಗೊಳಿಸುವಲ್ಲಿ, ಶ್ರಮಿಸಿದ ಶಾಸಕರಿಗೆ ರಾಜ್ಯದ ಜನ ಧನ್ಯವಾದ ಸಲ್ಲಿಸಿದ್ದಾರೆ.

ಹೊಸ ಮರಳು ನೀತಿ ಸಿದ್ದ: 

ಹೊಸ ಮರಳು ನೀತಿ ಜಾರಿಗೆ ತರುವ ಬಗ್ಗೆ ವಿಧಾನ ಸಭೆಯಲ್ಲಿ ನಾನು ಪ್ರಸ್ತಾಪ ಮಾಡಿದ್ದೆ. ಇದರ ಬಗ್ಗೆ ಚರ್ಚೆಯೂ ನಡೆದಿದೆ. ಆಗ ಸಚಿವರು ಹೊಸ ಮರಳು ನೀತಿಯನ್ನು ಜಾರಿಗೆ ತರುವ ಬಗ್ಗೆ ಉಲ್ಲೇಖಿಸಿದ್ದರು. ಆ ನೆಲೆಯಲ್ಲಿ ಈಗಾಗಲೇ ಹೊಸ ಮರಳು ನೀತಿಯನ್ನು ಜಾರಿಗೆ ತಂದಿದ್ದಾರೆ. ಕ್ಯಾಬಿನಟ್ಟಿನಲ್ಲೂ ಅದು ಪಾಸ್ ಆಗಿದೆ. ಮುಖ್ಯ ಮಂತ್ರಿಗಳ ಸಹಿ ಆಗಿ ಸರಕಾರದ ಆದೇಶ ಆಗುವ ಹಂತದಲ್ಲಿದೆ. ಇದು ಆದ ಮೇಲೆ ಅದರಲ್ಲಿರುವ ಎಲ್ಲಾ ವಿಚಾರಗಳನ್ನು ಮಾಧ್ಯಮದ ಮುಂದಿಡಲು ಇಚ್ಚೆ ಪಡುತ್ತೇನೆ. ನಾವೇನು ಉಲ್ಲೇಖಿಸಿದೆವೂ ಅವೆಲ್ಲವನ್ನೂ ಹೊಸ ಮರಳು ನೀತಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಇದಕ್ಕಾಗಿ ಗಣಿ ಸಚಿವರು ಮತ್ತು ಮುಖ್ಯ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎರಡು ಮೂರು ದಿವಸದಲ್ಲಿ ಸರಕಾರದ ಆದೇಶ ಆಗಬಹುದು. ಕರಾವಳಿ ಶಾಸಕರ ಮತ್ತು ಸಂಸದರ ಪ್ರಯತ್ನದಿಂದ ಈ ಮರಳು ನೀತಿಗೆ ಕಾರಣವಾಗಿದೆ.

– ಸಂಜೀವ ಮಠಂದೂರು, ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ