Recent Posts

Monday, January 20, 2025
ಸುದ್ದಿ

ಉಡುಪಿ ಜಿಲ್ಲೆಯಲ್ಲಿ ದಿನಸಿ ವಸ್ತು ಖರೀದಿಗೆ ಸಮಯ ವಿಸ್ತರಣೆ ; ಜಿಲ್ಲೆಯಲ್ಲಿ ಯಾವುದಕ್ಕೆಲ್ಲಾ ಅನುಮತಿ ಇದೆ..? – ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿಕೆ – ಕಹಳೆ ನ್ಯೂಸ್

ಉಡುಪಿ : ಜಿಲ್ಲೆಯಲ್ಲಿ ಪ್ರಸ್ತುತ ದಿನಬಳಕೆ ವಸ್ತು ಖರೀದಿಗೆ ನೀಡಿರುವ ಸಮಯವನ್ನು ಬೆಳಗ್ಗೆ 7ರಿಂದ ಅಪರಾಹ್ನ 1 ರವರೆಗೆ ವಿಸ್ತರಿಸಲಾಗಿದ್ದು, ಸಂಜೆ 5ರಿಂದ 7 ರವರೆಗೆ ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರು ಮನೆಗೆ ತೆರಳಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಜಿಲ್ಲೆಯೊಳಗಿನ ಬಸ್ ಸಂಚಾರವನ್ನು ಇನ್ನೂ ಒಂದು ವಾರ ಕಾಲ ಆರಂಭಿಸುವುದಿಲ್ಲ. ಅದೇ ರೀತಿ ಸಲೂನ್, ಸ್ಪಾಗಳನ್ನೂ ಸಹ ಇನ್ನೂ ಒಂದು ವಾರ ತೆರೆಯಲು ಅವಕಾಶವಿಲ್ಲ. ರಿಕ್ಷಾಗಳಲ್ಲಿ ಒಬ್ಬ ಗ್ರಾಹಕರನ್ನು ಮಾತ್ರ ಕರೆದೊಯ್ಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂತರ ಜಿಲ್ಲಾ ಪ್ರವಾಸಕ್ಕೆ ಅನುಮತಿ ಇಲ್ಲವಾಗಿದ್ದು, ವೈದ್ಯಕೀಯ ಕಾರಣ ಹೊರತುಪಡಿಸಿ ಇತರೆ ಕಾರಣಕ್ಕೆ ಪಾಸ್‌ಗಳನ್ನು ನೀಡುವುದಿಲ್ಲ. ಪಾಸ್ ಇಲ್ಲದೇ ಅಕ್ರಮ ಪ್ರವೇಶಿಸುವವರನ್ನು ಕಡ್ಡಾಯವಾಗಿ ಸರಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊರರಾಜ್ಯಗಳಿಗೆ ತೆರಳಬೇಕಾದವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಹೊರರಾಜ್ಯ ಗಳಿಗೆ ತೆರಳುವವರನ್ನು ಬೀಡಿನಗುಡ್ಡೆ ಮೈದಾನದಲ್ಲಿ ಪರೀಕ್ಷಿಸಿ, ಅನುಮತಿ ಬಂದ ನಂತರ ಕಳುಹಿಸುವ ವ್ಯವಸ್ಥೆ ಮಾಡಲಾಗು ವುದು. ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರನ್ನು ನಾಳೆ ರಾತ್ರಿಯೊಳಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ತಹಶೀಲ್ದಾರ್‌ಗಳಿಗೆ ಅವರು ಸೂಚಿಸಿದರು.