Friday, September 20, 2024
ಸುದ್ದಿ

ನೇಮದ ಕಾರಣ ನೀಡಿ ವೃದ್ಧರ ಹೆಣ ಸಾಗಿಸಲು ನಿರಾಕರಿಸಿದ ಗ್ರಾಮಸ್ಥರು | ಹೆಗಲು‌ಕೊಟ್ಟು ಮಾನವೀಯತೆ ಮರೆದ ಕಡಬ ಪೊಲೀಸರು..! ಏನಿದು ಸ್ಟೋರಿ ಅಂತೀರಾ? ವರದಿ ನೋಡಿ…

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿ ವೃದ್ಧರೋರ್ವರು ಗುಡ್ಡದ ಕಾಲ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಜಂಬದ ಹಳ್ಳಿ ನಿವಾಸಿ ಪಲನಿ ಸ್ವಾಮಿ ಎಂಬವರ ಪುತ್ರ ಅಸಲಪ್ಪ ( 80 ) ಎಂದು ಗುರುತಿಸಲಾಗಿದೆ. ಮೀನು ಹಿಡಿಯುವ ಕಾಯಕದ ಹಿನ್ನಲೆಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಕಡಬ ತಾಲೂಕಿನ ಕೊಯಿಲಕ್ಕೆ ಆಗಮಿಸಿದ ಇವರ ಪುತ್ರ ಸ್ಥಳಿಯ ಮಹಿಳೆಯನ್ನು ವಿವಾಹವಾಗಿದ್ದ ಎನ್ನಲಾಗಿತ್ತಿದೆ. ತನ್ನ ಮಗನ ಮನೆಗೆಂದು ಆಗಮಿಸಿದ್ದ ಮೃತರು ಶುಕ್ರವಾರ ಮನೆಗೆ ವಾಪಸ್ಸಾಗುವ ವೇಳೆ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೇಮದ ಕಾರಣ ನೀಡಿ ವೃದ್ಧರ ಹೆಣ ಸಾಗಿಸಲು ನಿರಾಕರಿಸಿದ ಗ್ರಾಮಸ್ಥರು :

ಜಾಹೀರಾತು

ತೀರಾ ಬಡಕುಟುಂಬದವರಾದುದರಿಂದ ಕುಟುಂಬಸ್ಥರೂ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಮತ್ತು ಗ್ರಾಮದಲ್ಲಿ ಭಾನುವಾರ ದೈವದ ನೇಮ ಇದ್ದುದರಿಂದ ಗ್ರಾಮದ ಜನ ಹೆಣ ಮುಟ್ಟಲು ಹಿಂಜರಿದಿದ್ದರಿಂದ ಮೃತದೇಹವನ್ನು ಸಾಗಿಸಲು ಜನವಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಮಾನವೀಯತೆ ಮೆರೆದ ಕಡಬ ಪೊಲೀಸರು :

ಘಟನೆಯನ್ನರಿತ ಕಡಬ ಪೊಲೀಸ್ ಠಾಣಾ ಸಬ್ ಇನ್ನ್ಪೆಕ್ಟರ್ ಪ್ರಕಾಶ್ ದೇವಾಡಿಗ, ಎ.ಎಸ್.ಐ. ರವಿ ಮತ್ತು ಪೇದೆ ಸಂದೇಶದ ಮೃತದೇಹಕ್ಕೆ ತಾವೇ ಹೆಗಲುಕೊಟ್ಟು ಮನೆತನಕ ಸಾಗಿಸಲು ನೆರವಾಗಿದ್ದಾರೆ. ಪೊಲೀಸ್ಸರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ವರದಿ : ಕಹಳೆ ನ್ಯೂಸ್