Recent Posts

Sunday, January 19, 2025
ಸುದ್ದಿ

ಆರ್.ಎಸ್.ಎಸ್. ಗಣವೇಶತೊಟ್ಟು ಆಶೋಕ್ ಕುಮಾರ್ ರೈ ಮತ್ತು ಅವರ ಪುತ್ರ ಪ್ರಧಿಲ್ ರೈ ಪಥಸಂಚಲನದಲ್ಲಿ ಭಾಗಿ – ಕಹಳೆ ನ್ಯೂಸ್

ಪುತ್ತೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ಗ್ರಾಮಾಂತರ ಮಂಡಲ ವತಿಯಿಂದ ನಡೆದ ಪಥಸಂಚಲನದಲ್ಲಿ ಗಣವೇಷದಾರಿಯಾಗಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮತ್ತು ಅವರ ಪುತ್ರ ಪ್ರಧಿಲ್ ರೈಯವರು ಗಣವೇಶತೊಟ್ಟು ಭಾಗವಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾಕೆ ವಿಶೇಷ ?

ಜಾಹೀರಾತು
ಜಾಹೀರಾತು
ಜಾಹೀರಾತು

ರೈ ಆರ್.ಎಸ್.ಎಸ್. ಕಟ್ಟಾಳು ಅಲ್ಲ ಎಂಬ ಆರೋಪ ಭಲವಾಗಿ ಕೇಳಿಬರುತ್ತಿತ್ತು. ಆದರೆ, ಈಗ ರೈ ಭಾಗವಹಿಸಿರುವುದು ಆ ಎಲ್ಲಾ ಅಪವಾದಗಳಿಗೆ ತೆರೆ ಎಳೆದಂತಾಗಿದೆ. ಅಲ್ಲದೆ ರೈ ಆರ್.ಎಸ್.ಎಸ್. ಬಗ್ಗೆ ಒಲವು ಹೆಚ್ಚಾಗಿದ್ದ ಕಾರಣವೇ ಭಾರತೀಯ ಜನತಾ ಪಕ್ಷ ಸೇರಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಎಂಬ ಅವರ ಮಾತುಗಳನ್ನೂ ಎಂಬುದನ್ನು ಈ ಸಂದರ್ಭದಲ್ಲಿ ಮರೆಯುವಂತಿಲ್ಲ.

Ashok Kumar Rai Puttur

ಸಂಚಲನದ ನಂತರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ್ಯವಾಹ ಸುಭಾಶ್ಚಂದ್ರ ಕಳಂಜ ಬೌದ್ಧಿಕ್ ನೆರವೇರಿಸುದರು. ಗ್ರಾಮಾಂತರ ಸಂಘಚಾಲಕ್ ಸುಧಾಕರ್ ರೈ ಕುಂಜಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಘ ಪ್ರಮುಖರು ಅಚ್ಯುತ ನಾಯಕ್, ಶಿವಪ್ರಸಾದ್ ಇ. ಮತ್ತಿತರರು ಉಪಸ್ಥಿತರಿದ್ದರು.

ವರದಿ : ಕಹಳೆ ನ್ಯೂಸ್