Big Breaking : ದತ್ತ ಪೀಠ ಹಿಂದೂಗಳದ್ದು, ಮುಜರಾಯಿ ಇಲಾಖೆ ಆಸ್ತಿ | ನ್ಯಾ.ನಾಗಮೋಹನ್‌ದಾಸ್ ವರದಿಗೆ ರಾಜ್ಯ ಸಚಿವ ಸಂಪುಟ ಅಸ್ತು – ಕಹಳೆ ನ್ಯೂಸ್
ಬೆಂಗಳೂರು / ಚಿಕ್ಕಮಂಗಳೂರು : ಬಾಬಾ ಬುಡನ್‌ಗಿರಿ ದತ್ತ ಪೀಠ ಆಸ್ತಿ ವಿಚಾರದಲ್ಲಿ ನ್ಯಾ.ನಾಗಮೋಹನ್‌ದಾಸ್ ನೀಡಿದ್ದ ವರದಿಯನ್ನು ಸರ್ಕಾರ ಒಪ್ಪಿದ್ದು, ದತ್ತ ಪೀಠ ಆಸ್ತಿ ವಕ್ಫ್ಗೆ ಸೇರಿದ್ದಲ್ಲ, ಮುಜರಾಯಿ ಇಲಾಖೆಗೆ ಸೇರಿದ್ದು, ಆದ್ದರಿಂದ ದತ್ತಪೀಠ ಹಿಂದೂಗಳಿಗೆ ಸೇರಿದ ಜಾಗ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ನ್ಯಾ.ನಾಗಮೋಹನ್‌ದಾಸ್ ಸಮಿತಿ ವರದಿಗೆ ಶನಿವಾರ ನಡೆದ ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ನೀಡಲಾಯಿತು. ಏಪ್ರಿಲ್ 6 ರಂದು ಸುಪ್ರೀಂಕೋರ್ಟ್ ಮುಂದೆ ದತ್ತ ಪೀಠಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಗೆ ಬರಲಿದ್ದು ಆಗ ವರದಿಯನ್ನು ಸುಪ್ರೀಂಕೋರ್ಟ್‌ಗೂ ಸಲ್ಲಿಸಲಾಗುವುದು ಎಂದು ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
1940ರಿಂದ ದತ್ತ ಪೀಠದಲ್ಲಿ ನಡೆಯುತ್ತಿರುವ ಧಾರ್ಮಿಕ ವಿಧಿ ವಿಧಾನಗಳನ್ನು ಮುಂದುವರಿಸುವುದು ಹಾಗೂ ಪೂಜಾ ಕಾರ್ಯದಲ್ಲಿ ಮಾಡುವುದು ವರದಿಯಲ್ಲಿ ಸೇರಿದೆ. ವರದಿಯಲ್ಲಿನ ಎಲ್ಲ ಅಂಶಗಳನ್ನು ಸರ್ಕಾರ ಯಥಾಸ್ಥಿತಿಯಲ್ಲಿ ಒಪ್ಪಿದೆ ಎಂದು ಹೇಳಿದರು.