Recent Posts

Sunday, January 19, 2025
ಸುದ್ದಿ

ಆರ್.ಎಸ್.ಎಸ್. ಮುಖಂಡ ಪ್ರಬಲ ಬ್ರಾಹ್ಮಣ ನೇತಾರ ‘ ದತ್ತಾತ್ರೇಯ ಹೊಸಬಾಳೆ ‘ ವಿರುದ್ಧ ತಿರುಗಿದ್ದ ಬ್ರಾಹ್ಮಣ ಸಮಾಜ, ದತ್ತಾ ಜೀ ಮಾಡಿದ ಅಂತಹ ತಪ್ಪು ಏನು ? ಈ ವರದಿ ಓದಿ….

Dattatray-Hosabale-
Dattatray Hosabale

ಬೆಂಗಳೂರು : ದತ್ತಾತ್ರೇಯ ಹೊಸಬಾಳೆಯವರ ವಿರುದ್ಧ ಅವಸ್ವರ, ಬೇಸರ, ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.

ಹೊಸಬಾಳೆಯವರ ಕುರಿತು ಸಾಮಾಜಿಕ ಜಾಲರಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಇಂತಿದೆ :

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸಬಾಳೆಯವರ ಕ್ಷಮಿಸಬಹುದೇ…???

ಜಾಹೀರಾತು
ಜಾಹೀರಾತು
ಜಾಹೀರಾತು

ನೇರ ವಿಷಯಕ್ಕೆ ಬರುತ್ತೇನೆ, ಶ್ರೀ ರಾಘವೇಶ್ವರರ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ಈಗ ವಜಾಗೊಂಡಿದೆ, ಆದರೆ ತನಿಖೆ ನೆಡೆಯುವ ಸಂದರ್ಭದಲ್ಲಿ ಶ್ರೀಗಳನ್ನು ಬಂಧಿಸಲೇ ಬೇಕು, ಸನ್ಯಾಸ ಕಳೆಯುವ ಪರೀಕ್ಷೆ ಮಾಡಲೇ ಬೇಕು ಎಂದು ತನಿಖಾ ಸಂಸ್ಥೆ ಶತಾಯಗತಾಯ ಪ್ರಯತ್ನಿಸಿ ಸೋತಿತು.

ರಾಘವೇಶ್ವರ ಭಾರತೀ ಸ್ವಾಮೀಜಿಯವರು

ತನಿಖಾಧಿಕಾರಿಗಳಿಗೇನು ಶ್ರೀಗಳ ಮೇಲೆ ದ್ವೇಷವಿರಲಿಲ್ಲ, ಆದರೆ ಅವರ ಮೇಲೆ ತೀವ್ರ ಒತ್ತಡವಿದ್ದಿದ್ದು ಸತ್ಯ, ಆಗಿನ ಗೃಹಸಚಿವರು Mr ಜಾರ್ಜ್, ಅವರೇನೋ ಕೃಶ್ಚಿಯನ್ನರು, ಪ್ರಭಾವಿ ಹಿಂದೂ ಸಂತರ ಮೇಲೆ ಆಪಾದನೆ ಬಂದರೆ, ಅವಕಾಶ ಬಿಡಲಾದೀತೆ …??? ಬಿಟ್ಟರೆ ಮಿಷನರಿಗಳು ಸಚಿವರ ಬಿಟ್ಟಾರೆಯೇ ..??? ಅವರೇನೋ ಮಿಷನರಿಗಳ ಅಣತಿಗೆ ತಕ್ಕ ಹೆಜ್ಜೆ ಹಾಕಿದರು,

ಅದಿರಲಿ, ಸಾಕ್ಷ್ಯವೇ ಇಲ್ಲದ ,ವಿಚಾರಣೆಗೂ ಅನರ್ಹ ಪ್ರಕರಣಕ್ಕೆ , ಸಮಾಜದ ಶಿಷ್ಯರು ಗುರುಗಳಿಗೆ ಸಂಪೂರ್ಣ ಬೆಂಬಲ ನೀಡಿದರು ಹಾಗೂ ಸೂಲಿಬೆಲೆ,ಪೇಜಾವರರು ಮತ್ತು ಕಲ್ಲಡ್ಕ ಭಟ್ಟರಂತವರು ಬೆಂಬಲಕ್ಕೆ ನಿಂತರು ಎಂಬ ಕಾರಣಕ್ಕೆ, ಕೇಂದ್ರ ಮಹಿಳಾ ಆಯೋಗ ಅಧ್ಯಕ್ಷೆ ಏನಕೇನವಾಗಿ ಮೂರು ಮೂರು ಬಾರಿ ಭೇಟಿ ನೀಡಿ, ಮಿಥ್ಯಾರೋಪವನ್ನು ರಾಷ್ಟ್ರ ಮಟ್ಟದಲ್ಲಿ ಸೆನ್ಸೇಶನಲ್ ನ್ಯೂಸ್ ಮಾಡಬೇಕೆಂದು ತಂತ್ರ ಹೂಡಿದವರು ಯಾವುದೋ ಮಿಷನರಿಗಳ ಬೆಂಬಲಿಗರಲ್ಲ …! ಇದು ದತ್ತಾತ್ರೇಯ ಹೊಸಬಾಳೆಯ ಕುತಂತ್ರ ಎಂಬುದು ಈಗ ಇಡೀ ಭಕ್ತ ಗಣಕ್ಕೆ ಸ್ಪಷ್ಟವಾಗಿ ಗೊತ್ತಿರುವುದೇ…!

ಅಲ್ಲಾ…ಈ ಹೊಸಬಾಳೆಗೆ ಶ್ರೀಗಳ ಮೇಲೆ ಅಸಹನೆ ಇದ್ದರೆ ಅದು ಅವರ ಹಣೆಬರಹ, ಆದರೆ ಸಂಘ ಕೊಡಮಾಡಿದ ಅಧಿಕಾರಗಳ ವೈಯಕ್ತಿಕ ತೆವಲಿಗೆ ದುರುಪಯೋಗಪಡಿಸಿಕೊಳ್ಳುವುದು ಎಷ್ಟು ಸರಿ…?? ಶ್ರೀಗಳ ಮೇಲಿನ ತಮ್ಮ ವೈಯಕ್ತಿಕ ದ್ವೇಷಕ್ಕೆ ಮಿಷನರಿಗಳೊಂದಿಗೆ ಕೈ ಜೋಡಿಸಿದರಲ್ಲ, ಇದು ಸಂಘದ ಸಿದ್ಧಾಂತದ ಕೊಲೆಯಲ್ಲದೇ ಇನ್ನೇನು? ??

ಸಾಮಾಜಿಕ ಜಾಲತಾಣಗಲ್ಲಿ ವ್ಯಕ್ತವಾಗಿರುವ ಆಕ್ರೋಶ

ಆದರೆ ಒಂದು ವಿಚಾರ ಒಪ್ಪಲೇ ಬೇಕು, ಹೊಸಬಾಳೆ ಸಿದ್ದಾಂತ ತೊರೆದರೂ, ಸ್ಥಳೀಯ ಸಂಘದ ಮುಖಂಡರು ಸಿದ್ದಾಂತ ಬಲಿಗೊಡಲಿಲ್ಲ, ಶ್ರೀಗಳೊಡನೆ ನಿಂತರು, ಹಲವು ಪೂರ್ಣಾವಧಿ ಕಾರ್ಯಕರ್ತರು ಬಹಿರಂಗವಾಗಿ ಅಲ್ಲದಿದ್ದರೂ, ಒಳಾಂತರದಲ್ಲಿ ಬೇಗುದಿ ತೋರಿದರು, ಹೊಸಬಾಳೆ RSS ಹೆಗಲ ಮೇಲೇ ಬಂದೂಕಿಟ್ಟು ಶ್ರೀಗಳೆಡೆಗೆ ಗುರಿಯಿಟ್ಟರೆ, ಬೇಗುದಿ ಸ್ಪೋಟವಾಗುವುದು ಇನ್ನೇನು ಖಚಿತ ಎಂಬುದು ಸ್ಪಷ್ಟವಾದಾಗ ,ಹೊಸಬಾಳೆ ತಣ್ಣಗಾಗುವುವುದು ಅನಿವಾರ್ಯ ಆಯಿತು. ಈಗ ಜಾರ್ಜ ಗೃಹಮಂತ್ರಿಯೂ ಅಲ್ಲ …ಹೊಸಬಾಳೆಗೆ ಗೌರವವೂ ಇಲ್ಲ…

ಬಾಕಿ ಉಳಿದಿರುವ ಪ್ರಶ್ನೆಯೆಂದರೆ, ಸಂಘದ ಸಿದ್ಧಾಂತವನ್ನೇ ಕೊಲೆ ಮಾಡಿ, ಮಿಷನರಿಗಳೊಂದಿಗೆ ಕೈ ಜೋಡಿಸಿದ ಹೊಸಬಾಳೆ , ಸಂಘಕ್ಕೆ ಅನಿವಾರ್ಯವೇ?? ಇಂಥ “ಜಯಚಂದ್ರ” ಸಂಘಕ್ಕೆ ಬೇಕೆ? ??

( ವರದಿಯನ್ನು ಸಾಮಾಜಿಕ ಜಾಲತಾಣಗಳ ಆಧಾರದಲ್ಲಿ ಮಾಡಲಾಗಿದೆ. )