Monday, April 7, 2025
ವಾಣಿಜ್ಯಸುದ್ದಿ

ಉದ್ಯಮಿ ಬಿ.ಆರ್. ಶೆಟ್ಟಿ ನೇತೃತ್ವದ ಎನ್.ಎಮ್.ಸಿ ಟ್ರೇಡಿಂಗ್ ಕಂಪೆನಿಯ 300ಕ್ಕೂ ಅಧಿಕ ಸಿಬ್ಬಂದಿ ಕೆಲಸದಿಂದ ವಜಾ – ಕಹಳೆ ನ್ಯೂಸ್

ಯುಎಇ: ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿ ಯುಎಇ ಯಲ್ಲಿ ನಡೆಸುತ್ತಿದ್ದ ಎನ್.ಎಮ್.ಸಿ ಹೆಲ್ತ್ ಕೇರ್ ಒಡೆತನದ ಎನ್.ಎಮ್.ಸಿ ಟ್ರೇಡಿಂಗ್ ಕಂಪೆನಿ 300ಕ್ಕೂ ಅಧಿಕ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಿಟನ್ ಹೈಕೋರ್ಟ್ ನಿಂದ ನೇಮಿಸಲ್ಪಟ್ಟಿರುವ ಆಡಳಿತಗಾರರು ಕಂಪೆನಿಯ ನಿಯಂತ್ರಣವನ್ನು ವಹಿಸಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎನ್.ಎಮ್.ಸಿ ಟ್ರೇಡ್, ಎನ್.ಎಮ್.ಸಿ ಹೆಲ್ತ್ ನ ವೈದ್ಯಕೀಯ ಉಪಕರಣಗಳು ಮತ್ತು ಪರ್ಸನಲ್ ಕೇರ್ ಬ್ರಾಂಡ್ ಗಳನ್ನು ವಿತರಿಸುವ ಜವಾಬ್ದಾರಿಯನ್ನು ಹೊತ್ತಿದೆ.

ಎನ್.ಎಮ್.ಸಿ ಟ್ರೇಡಿಂಗ್ ನಲ್ಲಿ 1,500ಕ್ಕೂ ಅಧಿಕ ಸಿಬ್ಬಂದಿಯಿದ್ದರು. ಬ್ರಿಟನ್ ಹೈಕೋರ್ಟ್ ನ ಆದೇಶದಂತೆ ಅಬುಧಾಬಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಎನ್.ಎಮ್.ಸಿ ಹೆಲ್ತ್ ನ ಆಡಳಿತವನ್ನು ಎಪ್ರಿಲ್ 9ರಂದು ಆಡಳಿತಾಧಿಕಾರಿ ವಹಿಸಿಕೊಂಡಿದ್ದಾರೆ.

ಕಂಪೆನಿಗೆ ಅತ್ಯಧಿಕ ಸಾಲವನ್ನು ನೀಡಿರುವ ಯುಎಇಯ ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ ಎಡಿಸಿಬಿ ಸಲ್ಲಿಸಿದ ಮನವಿಯಂತೆ ಬ್ರಿಟನ್ ಹೈಕೋರ್ಟ್ ಈ ಆದೇಶವನ್ನು ನೀಡಿತ್ತು.

ಅಬುಧಾಬಿ ಕಮರ್ಶಿಯಲ್ ಬ್ಯಾಂಕ್ ಎನ್.ಎಮ್.ಸಿ ಹೆಲ್ತ್ ಗೆ ನೀಡಿರುವ ಸುಮಾರು 6,183 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಲ ವಸೂಲಾಗಿಲ್ಲ.

ಪ್ರಸ್ತುತ ಬಿ ಆರ್ ಶೆಟ್ಟಿ ಅವರು ಭಾರತದಲ್ಲಿ ನೆಲೆಸಿದ್ದಾರೆ. ಎನ್ಎಂಸಿ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ