Friday, January 24, 2025
ಸುದ್ದಿ

Breaking News : ಫಸ್ಟ್ ನ್ಯೂರೋ ಹೊಡೆತಕ್ಕೆ ನಲುಗಿದ ಕಡಲತಡಿ ಮಂಗಳೂರು ; ಬಂಟ್ವಾಳದಲ್ಲಿ ಮತ್ತೆ ಮೂರು ಜನರಿಗೆ ಕೊರೋನಾ ಪಾಸಿಟಿವ್ – ಕಹಳೆ ನ್ಯೂಸ್

ಮಂಗಳೂರು : ಫಸ್ಟ್ ನ್ಯೂರೋ ಹೊಡೆತಕ್ಕೆ ಕಡಲತಡಿ ಮಂಗಳೂರು ನಲುಗಿದೆ. ಬಂಟ್ವಾಳದಲ್ಲಿ ಮತ್ತೆ ಒಂದೇ ಕುಟುಂಬದ ಮೂವರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ.  ಇಬ್ಬರು ‌ಮಹಿಳೆಯರು ಮತ್ತು ಓರ್ವ ‌ಪುರುಷನಿಗೆ ಕೊರೊನಾ ಸೋಂಕು ತಗುಲಿದೆ.

ಮೇ.1ರಂದು ಕೊರೋನ ಪತ್ತೆಯಾಗಿದ್ದ 69 ವರ್ಷದ P-578 ವೃದ್ದನಿಂದ  ಸೋಂಕು ತಗುಲಿದತ್ತು. ಆದರೆ, ಈಗ ವೃದ್ದನ ಕುಟುಂಬದ ಮೂರು ಜನರಲ್ಲಿ ಸೋಂಕು ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಕಸಬಾದ ಮೃತ ಮಹಿಳೆಯ ಸಂಬಂಧಿಕರು ಮತ್ತು ನೆರೆಮನೆಯವರಾಗಿರುವ ವೃದ್ದನಿಗೆ ಸೋಂಕು ತಗುಲಿತ್ತು, ವೃದ್ದನಿಗೆ ಪಾಸಿಟಿವ್ ಹಿನ್ನೆಲೆ ಆ ಮನೆಯ 8 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಸದ್ಯ ಮೂವರಿಗೆ ಸೋಂಕು ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಫಸ್ಟ್ ನ್ಯೂರೋ ಸಂಪರ್ಕದಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆದ್ದು, ಸದ್ಯ ದ‌.ಕ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ. ದ.ಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 31 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಕೊರೋನಾದಿಂದ 3 ಜನ ಮೃತಪಟ್ಟಿದ್ದು,13 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.