ಪುತ್ತೂರಿನ ಬಿಜೆಪಿ ಜನಸುರಕ್ಷಾ ಯಾತ್ರೆಯಲ್ಲಿ ಸಚಿವ ರಮಾನಾಥ ರೈ ಅಹಂಕಾರ ಪ್ರದರ್ಶನ | ಸಾವಿರಾರು ಬಿಜೆಪಿ ಕಾರ್ಯಕರ್ತರ ಮಧ್ಯೆ ಕಾರು ನುಗ್ಗಿಸಿ ಧರ್ಪ ತೋರಿಸಿದ ರೈ – ಕಹಳೆ ನ್ಯೂಸ್
ಪುತ್ತೂರು : ಬಿಜೆಪಿ ಆಯೋಜಿಸಿದ್ದ ಜನಸುರಕ್ಷಾ ಪಾದಯಾತ್ರೆಯ ಮಧ್ಯದಲ್ಲೇ ಉದ್ದೇಶಪೂರ್ವಕವಾಗಿ ತಮ್ಮ ಕಾರು ನುಗ್ಗಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಹಂಕಾರ ಮೆರೆದಿದ್ದಾರೆ.
ಪುತ್ತೂರಿನಲ್ಲಿ ಈ ಯಾತ್ರೆ ಸಂಚರಿಸುವ ರಸ್ತೆಗಳು ಮೊದಲೇ ನಿಗದಿಯಾಗುತ್ತು ಅದೇ ಪ್ರಕಾರ ಪೋಲೀಸರು ಟ್ರಾಫಿಕ್ ನಿರ್ವಹಣೆ ಮಾಡಿದ್ದರು. ಇನ್ನೇನು ದರ್ಭೆ ವೃತ್ತದ ಬಳಿಯಲ್ಲಿ ಪಾದಾಯಾತ್ರೆ ಆಗಮಿಸಬೇಕು, ಅದರ ನಿರೀಕ್ಷೆಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮೋದಿಪರ ಘೋಷಣೆ ಕೂಗುತ್ತಾ ಕಾದು ಕುಳಿತ್ತಿದ್ದರು. ಈ ಸಂದರ್ಭದಲ್ಲಿ ಸುಳ್ಯ ಕಡೆಯಿಂದ ಆಗಮಿಸಿದ ಸಚಿವ ರೈ ಕಾರು ಮಂಗಳೂರು ಕಡೆಗೆ ಹೋಗುತ್ತಿತ್ತು. ದರ್ಭೆ ಬಳಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಸೇರಿದ್ದ ಕಾರಣಕ್ಕಾಗಿ ಪೇಟೆ ಒಳಗಿಂದ ವಾಹನಗಳು ಸಂಚರಿಸುತ್ತಿತ್ತು. ಆದರೆ, ಪೇಟೆಯ ಒಳಗೆ ಸ್ವಲ್ಪ ಮುಂದೆ ಸಾಗಿದ ಕಾರು ಏಕಾಏಕಿ ಪೇಟೆಯ ಬದಲಾಗಿ ಕಾರ್ಯಕರ್ತರ ಜಮಾಯಿಸಿದ್ದ ಸ್ಥಳದಲ್ಲೇ ( ಆಶೋಕ್ ರೈ ಕಛೇರಿ ಬಳಿ) ಬೈಪಾಸ್ಸಾಗೆ ಕಾರ್ಯಕರ್ತರ ಮಧ್ಯದಿಂದಲೇ ನುಗ್ಗತ್ತಾ ಕಾರು ಚಲಾಯಿಸುವಂತೆ ಸೂಚಿಸಿದ್ದಾರೆ. ಅಂತೆಯೇ ಕಾರು ಕಾರ್ಯಕರ್ತರ ಮಧ್ಯೆಯೇ ನುಗ್ಗುತ್ತಾ ಬಂದಿದೆ. ಸಚಿವ ರೈ ಚಾಲಕನಿಗೆ ಕಾರ್ಯಕರ್ತರ ಮಧ್ಯೆ ಕಾರು ಚಲಾಯಿಸಲು ಹೇಳಿ ಅಹಂಕಾರ ಮರೆದಿದ್ದಾರೆ.
ವಿಡಿಯೋ
https://youtu.be/MXyUIro6q78
ವರದಿ : ಕಹಳೆ ನ್ಯೂಸ್