ಹತ್ತೂರಿನ ಜನರ ಫೇವರೇಟ್ ಡಾಕ್ಟರ್ ಸುರೇಶ್ ಪುತ್ತೂರಾಯರ ಕುರಿತು ವಾಟ್ಸಾಪ್ ನಲ್ಲಿ ಅಪಮಾನಕಾರಿ ಸಂದೇಶ ರವಾನೆ ಮೂಲಕ ಸಾಲು ಸಾಲು ಅರಬ್ ರಾಷ್ಟ್ರಗಳಿಂದ ಕೊಲೆ ಬೆದರಿಕೆ ಕಾರಣನಾದ ವ್ಯಕ್ತಿ ವಿರುದ್ಧ ದೂರು ಆದರಿಸಿ ಕೇಸು ದಾಖಲಿಸಿ ಪೋಲೀಸರಿಗೆ ನ್ಯಾಯಾಲಯ ನಿರ್ದೇಶನ – ಕಹಳೆ ನ್ಯೂಸ್
ಪುತ್ತೂರು : ಕಳೆದ ಕೆಲ ವಾರಗಳ ಮೊದಲು ಪುತ್ತೂರಿನ ಪ್ರತಿಷ್ಠಿತ ವೈದ್ಯ ಡಾ.ಸುರೇಶ್ ಪುತ್ತೂರಾಯರ ವಿರುದ್ಧವಾಗಿ ವಾಟ್ಸಾಪ್ ನಲ್ಲಿ ಅಪಮಾನಕಾರಿ ಸಂದೇಶ ರವಾನೆಯಾಗುತ್ತಿತ್ತು. ಲಾಕ್ ಡೌನ್ ಸಮಯದಲ್ಲಿ ವೈದ್ಯರು ತಮ್ಮ ಜೀವದ ಹಂಗುತೊರೆದು ಕೆಲಸಮಾಡುತ್ತಿದ್ದಾರೆ, ಅವರನ್ನು ದೇಶದ ಪ್ರಧಾನಿ ಸೇರಿದಂತೆ ಜಗತ್ತು ಗೌರವಿಸುತ್ತಿರುವ ಈ ಹೊತ್ತಿನಲ್ಲಿ ಪುತ್ತೂರಿನಲ್ಲಿ ಇಂತಹದ್ದೊಂದು ಘಟನೆ ನಡೆದದ್ದು, ನಿಜಕ್ಕೂ ಬೇಸರದ ಸಂಗತಿ. ಆದರೆ, ಈಗ ಈ ಕುರಿತು ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ.
ಘಟನೆ ಏನು : ಪುತ್ತೂರಿನ ಮಹಾವೀರ ಆಸ್ಪತ್ರೆಯ ಹೃದ್ರೋಗ ತಜ್ಞ, ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯರು ತಮ್ಮ ವಾಟ್ಸಾಪ್ ಸ್ಟೇಟಸ್ ಒಂದನ್ನು ಹಾಕಿದ್ದು, ಅದನ್ನು ತಿರುಚಿ ಒಂದು ಕಾಲದಲ್ಲಿ ಪುತ್ತೂರಿನ ಮಾಜಿ ಶಾಸಕರ ಪರಮಾತ್ತನಾಗಿದ್ದ, ರವಿ ಪ್ರಸಾದ್ ಶೆಟ್ಟಿ ಎಂಬ ವ್ಯಕ್ತಿ ಸಂದೇಶವನ್ನು ಎಲ್ಲಾ ಗ್ರೂಪ್ ಗಳಿಗೆ ರವಾನೆ ಮಾಡಿದ್ದು, ವೈದ್ಯರ ತೇಜೋವಧೆಗೆ ಯತ್ನಿಸಿದ್ದಾನೆ. ಇದರಿಂದ ಮನನೊಂದ ಸುರೇಶ್ ಅವರು ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದರು, ಆದರೆ ನ್ಯಾಯಾಲಯದ ನಿರ್ದೇಶನ ವಿಲ್ಲದೆ, FIR ಮಾಡಲು ಸಾಧ್ಯವಿಲ್ಲ ಎಂದು ಪೋಲೀಸರು ತಿಳಿಸಿದ್ದರು. ಇದರಂತೆ ಖ್ಯಾತ ನ್ಯಾಯವಾದಿ ಮಹೇಶ್ ಕಜೆಯವರ ಮುಖೇನ ನ್ಯಾಯಾಲಯದ ಮಟ್ಟಿಲೇರಿದ್ದರು, ವೈದ್ಯ ಪುತ್ತೂರಾಯರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಪೋಲೀಸರಿಗೆ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸುವಂತೆ ನಿರ್ದೇಶನ ಮಾಡಿ ಆದೇಶ ನೀಡಿದೆ.
ಪುತ್ತೂರಾಯರಿಗೆ ಬರುತ್ತಿತ್ತು ಸಾಲು ಸಾಲು ಕೊಲೆ ಬೆದರಿಕೆ :
ಎಸ್, ಈ ರವಿ ಪ್ರಸಾದ್ ಸಂದೇಶಗಳನ್ನು ವಾಟ್ಸಾಪ್ ನಲ್ಲಿ ತಿರುಚಿ ಹರಿಬಿಡುತ್ತಿದ್ದಂತೆ, ಕೋಮು ಸಂಘರ್ಷಕ್ಕೆ ಕಾಯುತ್ತಿದ್ದ ಜಿಹಾದಿಗಳು ಸಾಲು ಸಾಲು ಕೊಲೆ ಬೆದರಿಕೆ ಕರೆಗಳನ್ನು ಮಾಡಿ ಪುತ್ತೂರಾಯರಿಗೆ ಮಾನಸಿಕ ಕಿರುಕುಳು ನೀಡುತ್ತಿದ್ದರು.
ನ್ಯಾಯಕ್ಕೆ ಯಾವತ್ತೂ ಮನ್ನಣೆ – ಡಾ. ಪುತ್ತೂರಾಯ
ಕಹಳೆನ್ಯೂಸ್ ಗೆ ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯರು ನ್ಯಾಯಾಲಯವು ನ್ಯಾಯಕ್ಕೆ ಮನ್ನಣೆ ನೀಡಿದೆ. ಸತ್ಯಕ್ಕೆ ಜಯ ಯಾವತ್ತೂ ಇದೆ. ಸಮಾಜದ ಸ್ವಸ್ಥ್ಯ ಹಾಳು ಮಾಡುವ ರವಿಪ್ರಸಾದ್ ನಂತವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದರು.