Friday, November 22, 2024
ಸುದ್ದಿ

ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸೆನೆಟ್‌ಗೆ ಹಿಂದೂ ಮಹಿಳೆ ಆಯ್ಕೆ

ಪಾಕಿಸ್ತಾನ : ಸಿಂಧ್ ಪ್ರಾಂತ್ಯದಿಂದ , ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯಿಂದ ಸೆನೆಟ್‌ಗೆ ಹಿಂದೂ ಮಹಿಳೆ ಕೃಷ್ಣ ಕುಮಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಈ ಮೂಲಕ ಕೃಷ್ಣ ಕುಮಾರಿ ಪಾಕ್ ಸೆನೆಟರ್ ಆದ ಮೊದಲ ಹಿಂದೂ ದಲಿತ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಸಿಂಧ್‌ ಪ್ರಾಂತ್ಯದ ನಾಗಾರ್‌ಪರ್ಕರ್‌ ಜಿಲ್ಲೆಯಲ್ಲಿ 1979ರಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಕೃಷ್ಣ ಕುಮಾರಿ 2013ರಲ್ಲಿ ಸಿಂಧ್‌ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.39ರ ಹರೆಯದ ಕೊಲ್ಹಿ ಸಿಂಧ್ ಪ್ರಾಂತ್ಯದ ಥಾರ್ ಜಿಲ್ಲೆಯ ನಗರ್‌ಪಾರ್ಕರ್ ಹಳ್ಳಿಯವರಾಗಿದ್ದು, ಬಿಲಾವಲ್ ಭುಟ್ಟೊ ಝರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸದಸ್ಯೆಯಾಗಿದ್ದಾರೆ. ತಮ್ಮ 16 ರ ಹರೆಯದಲ್ಲಿ ವಿವಾಹವಾಗಿದ್ದ ಕೃಷ್ಣ ಕುಮಾರಿಗೆ ಪಿಪಿಪಿ ಸೆನೆಟ್ ಟಿಕೆಟ್ ನೀಡಿತ್ತು. ಸಿಂಧ್‌ನ ಅಲ್ಪಸಂಖ್ಯಾತ ಕೋಟಾದಡಿ ಸೆನೆಟರ್ ಆಗಿ ಕೊಲ್ಹಿ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು