Wednesday, January 22, 2025
ಸಿನಿಮಾಸುದ್ದಿ

ಉದಯೋನ್ಮುಖ ನಿರ್ದೇಶಕಿ ‌ನವ್ಯಾ ನಾಯಕ್ ಮೊದಲ ಪ್ರಯತ್ನಕ್ಕೆ ಪ್ರೇಕ್ಷಕರು ಫೀದಾ ; ” ನಿಗೂಢ ಮೌನ ಪಾಲಿಸಿ ” ಕಿರುಚಿತ್ರಕ್ಕೆ ಉತ್ತಮ ಪ್ರಶಂಸೆ – ಕಹಳೆ ನ್ಯೂಸ್

ನಮ್ಮದು ವೈವಿಧ್ಯತೆಯಿಂದ ಕೂಡಿದ ದೇಶ. ಜಗತ್ತಿನಲ್ಲಿ ವಿವಿಧ ಸಂಸ್ಕೃತಿಗಳನ್ನು ಹೊಂದಿರುವ ಏಕೈಕ ದೇಶ ಎಂಬ ಹೆಗ್ಗಳಿಕೆ ನಮ್ಮದು. ಅನೇಕತೆಯಲ್ಲಿ ಏಕತೆ ಇದ್ದರೂ ಹಲವಾರು ನ್ಯೂನತೆಗಳು ಲೋಪದೋಷಗಳು , ನಿರ್ಧಾರ ಮನೋಭಾವ ನಮ್ಮಲ್ಲಿ ಇದೆ. ಉದಯೋನ್ಮುಖ ನಿರ್ದೇಶಕಿ ನವ್ಯಾ ನಾಯಕ್ ನಿರ್ದೇಶನದಲ್ಲಿ “ನಿಗೂಢ ಮೌನ ಪಾಲಿಸಿ” ಕನ್ನಡ ಕಿರುಚಿತ್ರ ನಮ್ಮ ಮುಂದಿದೆ. ಈ ಚಿತ್ರದಲ್ಲಿ
ಸಮಾಜದಲ್ಲಿನ ಒಂದು ವರ್ಗಕ್ಕೆ ಇರುವ ಅಸಮಾನತೆ , ನಮಗಿಂತ ಸ್ವಲ್ಪ ಭಿನ್ನವಾಗಿರುವ ಜನರನ್ನು ಕೀಳಾಗಿ ಕಾಣುವ ಮನೊಪ್ರವೃತ್ತಿಯನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಈ ಕತೆಯು ಒಬ್ಬ ಇಂತಹುದೇ ಒಂದು ವರ್ಗಕ್ಕೆ ಸೇರಿದ ವ್ಯಕ್ತಿಯ ಸಮಸ್ಯೆಯನ್ನು ಆಧರಿಸಿದೆ. ಆಕೆ ಹೇಗೆ ತನ್ನ ಒಡಲಾಳದ ಬಯಕೆ ಭಾವನೆಗಳನ್ನು ತನ್ನೊಳಗೆ
ಬಚ್ಚಿ ಇಡಲಾಗದೆ ತನ್ನ ಹೆಣ್ತನವನ್ನು ತೋರಲು ಹೇಗೆ ಹೆಣಗುತ್ತಾಳೆ,ತನ್ನ ಹೆತ್ತವರಿಂದ ಬೀದಿ ಪಾಲಾಗಿ, ತನ್ನಲ್ಲಿರುವ ತಾಯ್ತನಕ್ಕೆ ಅವಮಾನವಾಗದ ಹಾಗೇ ಇರಲು ತನ್ನ ಮಾತನ್ನು ತ್ಯಾಗ ಮಾಡುತ್ತಾ ಳೆ. ಮೌನವನ್ನು ಆವರಿಸುತ್ತಾಳೆ ಎಂಬುದಾಗಿದೆ.

ಮೂಲತಃ ಉಡುಪಿಯವವರಾದ ನವ್ಯಾ ನಾಯಕ್ ಅವರು ಈ ಕನ್ನಡ ಕಿರುಚಿತ್ರ ನಿರ್ದೇಶಕಿ. ಇದು ಇವರ ಪ್ರಪ್ರಥಮ ಕಿರುಚಿತ್ರ. ಇವರು ಸಮಾಜದ ಬಗ್ಗೆ ಒಳ್ಳೆಯ ಕಳ ಕಳಿಯನ್ನು ಇಟ್ಟು ಕೊಂಡಿದ್ದಾರೆ ತನ್ಮೂಲಕ ಒಂದು ವಿನೂತನ ಬದಲಾವಣೆ ಈ ಸಮಾಜದಲ್ಲಿ ಬರಲಿ ಎಂದು ನಾಲ್ಕೈದು ವರ್ಷಗಳಿಂದ ಒಂದು ಸಮುದಾಯದ ಬದುಕು ಹಾಗೂ ಜೀವನ ಶೈಲಿಯ ಬಗ್ಗೆ ರೀಸರ್ಚ್ ಮಾಡಿ ಅದನ್ನು ಈ ಕಿರುಚಿತ್ರದ ಮೂಲಕ ಸಮಾಜಕ್ಕೆ ಒಂದು ವಿಶೇಷ , ಸೂಕ್ಷ್ಮ, ಒಳ್ಳೆಯ ಸಂದೇಶವೊಂದನ್ನು ಕೊಟ್ಟಿದ್ದಾರೆ. ಈ ಕಿರುಚಿತ್ರ ಸಹಜವಾಗಿ ಮೂಡಿ ಬರಲು ಇನ್ನೊಂದು ಮುಖ್ಯ ಕಾರಣ ಈ ಚಿತ್ರದ ನಾಯಕಿ ನಟಿಯ ಆಯ್ಕೆ. ಈ ಚಿತ್ರಕ್ಕೆ ನಿರ್ದೇಶಕಿ ನವ್ಯಾ ನಾಯಕ್ ಈ ಸಮುದಾಯದ 50 ಕ್ಕೂ ಹೆಚ್ಚು ವ್ಯಕ್ತಿಗಳ ಆಡಿಶನ್ಗಳನ್ನು ಮಾಡಿದ್ದಾರೆ. ಈ ಚಿತ್ರಕ್ಕೆ ಹಾಡು ಸಾಹಿತ್ಯ, ರಾಗ ಸಂಯೋಜನೆ, ಸಂಭಾಷಣೆ, ಸಬ್ ಟೈಟಲ್ ಕೂಡ ಮಾಡಿದ ಕೀರ್ತಿ ನವ್ಯಾರವರಿಗೆ ಸಲ್ಲುತ್ತದೆ. “ನಿಗೂಢ ಮೌನ ಪಾಲಿಸಿ” ಎಂಬ ಈ ಚಿತ್ರದ ಹಾಡಂತೂ ಜನರ ಮನಸ್ಸು ಹೃದಯ ಮೀಟಿ ಕಂಗಳಲ್ಲಿ ಕಂಬನಿ ಮಿಡಿಸಿದೆ. ಈ ಕಿರು ಚಿತ್ರ ಅವರ ಹೋಂ ಪ್ರೊಡಕ್ಷನ್ ಆಗಿರುವ ನಾಯಕ್ ಬ್ರದರ್ಸ್ ಎಂಬ ಸೋಶಿಯಲ್ ಐಸ್ ಮೂಲಕ ಮೂಡಿ ಬಂದಿದೆ…. ,”ಇವೆಲ್ಲ ಸಾಯಿ ಬಾಬಾ ಮತ್ತು ಶನಿ ದೇವರ ಆಶೀರ್ವಾದ ನನ್ನ ತಾಯಿ ಹಾಗೂ ನನ್ನ ಯಜಮಾನರಾದ ಜನಾರ್ದನ ನಾಯಕ್ ಅವರ ಅತ್ಯುತ್ತಮ ಸಹಕಾರದಿಂದ ಮತ್ತೆ ಒಳ್ಳೆಯ ತಂಡ ಸಿಕ್ಕಿರೋದ್ರಿಂದ ಚಿತ್ರ ಮಾಡಲು ಸಾಧ್ಯವಾಯಿತು ಅಂತಾರೆ ಇವರು. ಇವರ ಪ್ರಯತ್ನಕ್ಕೆ ನಮ್ಮ ಕಡೆಯಿಂದ ಒಂದು ಶುಭಾಷಯ.

ಜಾಹೀರಾತು
ಜಾಹೀರಾತು
ಜಾಹೀರಾತು

– ಸಿನಿ ಕಹಳೆ

ಜಾಹೀರಾತು
ಜಾಹೀರಾತು
ಜಾಹೀರಾತು