ಬಂಟ್ವಾಳದಲ್ಲಿ ಗೋವುಗಳ ಹತ್ಯೆ ಗೈದು ವಿಕೃತಿ ಮೆರೆದ ಪಾಪಿಗಳು ; ಜಿಹಾದಿಗಳ ಕೃತ್ಯಕ್ಕೆ ಹಿಂದೂ ಸಂಘಟನೆಗಳ ಆಕ್ರೋಶ – ಕಹಳೆ ನ್ಯೂಸ್
ಬಂಟ್ವಾಳ : ತಾಲೂಕು ಮಣಿನಾಲ್ಕೂರು ಮತ್ತು ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮವನ್ನು ಸಂಪರ್ಕಿಸುವ ನೇತ್ರಾವತಿ ನದಿಕಿನಾರೆಯ ಕೂಟೇಲು ಎಂಬಲ್ಲಿ ಹತ್ಯೆಗೈದ ಗೋವಿನ ತ್ಯಾಜ ವಸ್ತುಗಳನ್ನು ಸೇತುವೆ ಯಿಂದ ನದಿಗೆ ಹಾಕಿರುವ ಘಟನೆ ನಡೆದಿದೆ.
ನೇತ್ರಾವತಿ ನೀರು ಕಲುಷಿತವಾಗುತಿದ್ದೆ, ಪರಿಸರ ಗಬ್ಬೆದ್ದು ನಾರುತ್ತಿದೆ ಅಲ್ಲದೆ ಮಂಗಳೂರುನಲ್ಲಿ ಕುಡಿಯಲು ಉಪಯೋಗ ಮಾಡುತಿದ್ದರೆ.
ಗೋವಿನ ತ್ಯಾಜಗಳನ್ನೂ ನೀರಿಗೆ ಎಸೆದು ಪರಾರಿಯಾಗಿದ್ದಾರೆ ಮೇ. 11 ರ ಸಂಜೆ ಸೇತುವೆ ಮೇಲೆ ಹಾದು ಹೋಗುವ ಸಾರ್ವಜನಿಕರಿಗೆ ವಾಸನೆ ಬಡಿದಾಗ ಶೋಧಿಸಿದ್ದಾರೆ.
ಈ ಸಂದರ್ಭದಲ್ಲಿ ಕಡಿದ ದನದ ಕಾಲು, ಕೆಚ್ಚಲು ಹಾಗು ತ್ಯಾಜಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.
ಸರಪಾಡಿ ಅಶೋಕ ಶೆಟ್ಟಿ ಹಾಗು ಸಂಘಟನೆ ಕಾರ್ಯಕರ್ತರು ತಕ್ಷಣ ಉಪ್ಪಿನಂಗಡಿ ಹಾಗು ಬಂಟ್ವಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಎರಡು ಠಾಣೆಗಳ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.
ಗೋಹತ್ಯೆ ಯನ್ನು ವಿರೋಧಿಸಿದ ಕಾರ್ಯಕರರು ಕೂಟೇಲು ಎಂಬ ಪ್ರದೇಶ ಎರಡು ತಾಲೂಕಿನ ಗಡಿಭಾಗವಾಗಿದ್ದು ಈ ಭಾಗದಲ್ಲಿ ಇದರಿಂದ ಮೊದಲು ಈ ರೀತಿಯ ಘಟನೆ ನಡೆಯುತ್ತಿದೆ.
ಗೋ ಹತ್ಯೆ ಮಾಡಿ ಮಾಂಸ ಮಾಡುವ ದಂಧೆ ನಡೆಸಿದ ಪಾತಕಿಗಳನ್ನು ತಕ್ಷಣ ಬಂಧಿಸಬೇಕು, ಈ ಸೇತುವೆ ಗೋಹತ್ಯೆ ಮಾಡಿ ತ್ಯಾಜ ಎಸೆಯಲು ಹೇಳಿಮಾಡಿಸಿದಂತಾಗಿದೆ, ಗೋಹತ್ಯೆ ಮಾಡಿ ಇಲ್ಲಿ ತಂದು ಹಾಕುತ್ತಿದ್ದಾರೆ, ಎಂದು ಸಂಘದ ಕಾರ್ಯಕರ್ತರು ಆರೋಪಿಸಿದರು.
ಈ ರೀತಿ ಅಕ್ರಮ ಗೋಹತ್ಯೆ ತಡೆಯಬೇಕು, ಗೋರಕ್ಷಣೆ ಆಗಬೇಕು,
ಈ ಭಾಗದಲ್ಲಿ ಸಿ. ಸಿ. ಕ್ಯಾಮರಾ ಅಳವಡಿಸಬೇಕು ಈ ವಿಚಾರವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.