Wednesday, January 22, 2025
ಸುದ್ದಿ

ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿಸುತ್ತಿರುವ ಪುತ್ತೂರಿನ ‘ಪ್ರಗತಿ ಸ್ಟಡಿ ಸೆಂಟರ್’ – ಕಹಳೆ ನ್ಯೂಸ್

ಪುತ್ತೂರು: ಜೀವನದಲ್ಲಿ ಸೋಲೆಂಬುದು ಹಲವಾರು ಕಾರಣಗಳಿಂದ ಬರಬಹುದು. ಆದರೆ ಅದನ್ನು ಗುರುತಿಸಿ ಸರಿಪಡಿಸಿ, ಮುನ್ನಡೆಸುವವರು ನಮ್ಮೊಂದಿಗೆ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ರೀತಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಸಿ ಅವರ ಭವಿಷ್ಯಕ್ಕೆ ಬೆಳಕು ಬೀರುತ್ತಿರುವ ಸಂಸ್ಥೆ ಅಂದ್ರೆ ಅದು ಕರ್ನಾಟಕದಲ್ಲಿ ಮನೆ ಮಾತಾಗಿರುವ ಪುತ್ತೂರಿನ ‘ಪ್ರಗತಿ ಸ್ಟಡಿ ಸೆಂಟರ್’.

ಜಾಹೀರಾತು
ಜಾಹೀರಾತು
ಜಾಹೀರಾತು

9ನೇ ತರಗತಿಯಿಂದ 10ನೇ ತರಗತಿಗೆ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಮೇ 10, 2020 ಆದಿತ್ಯವಾರದಿಂದ ಸೇತುಬಂಧ (ಬ್ರಿಡ್ಚ್ ಕೋರ್ಸ್) ತರಗತಿಗಳು ಆನ್‍ಲೈನ್ ಮೂಲಕ ಆರಂಭಗೊಳ್ಳಲಿರುವುದು. ನುರಿತ ಶಿಕ್ಷಕರಿಂದ 4 ವಿಷಯಗಳ ಪಠ್ಯವನ್ನು ನಡೆಸಲಾಗುವುದು.

 

ಆಸಕ್ತ ವಿದ್ಯಾರ್ಥಿಗಳು ಈ ಉತ್ತಮ ಅವಕಾಶವನ್ನು ಬಳಸಿಕೊಳ್ಳಬಹುದು ಹಾಗೆಯೇ ಶೈಕ್ಷಣಿಕ ವರ್ಷ 2020ರಲ್ಲಿ ಪರೀಕ್ಷೆ ಬರೆಯುವ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕಳೆದ 21 ದಿನಗಳಿಂದ ಸುಮಾರು 563 ವಿದ್ಯಾರ್ಥಿಗಳಿಗೆ ಆನ್‍ ಲೈನ್ ಮೂಲಕ ಉಚಿತವಾಗಿ ತರಗತಿಗಳನ್ನು ರಾಜ್ಯದಲ್ಲಿ ಪ್ರಪ್ರಥಮವಾಗಿ ನಡೆಸಿದ ಹೆಗ್ಗಳಿಕೆ ಪ್ರಗತಿ ಸ್ಟಡಿ ಸೆಂಟರ್‍ಗೆ ಸಲ್ಲುತ್ತದೆ. ಎಸ್.ಎಸ್.ಎಲ್.ಸಿ ಬೋರ್ಡ್ ಮುಂದೆ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ ಮರು ದಿನದಿಂದಲೇ ಆನ್‍ಲೈನ್ ಮೂಲಕವೇ ಉಚಿತವಾಗಿ ಪುನರ್ ಮನನ ತರಗತಿಗಳನ್ನು ನಡೆಸಲಿರುವುದು.

ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಆನ್‍ಲೈನ್ ತರಗತಿ:

ಪ್ರಥಮ ಪಿಯುಸಿ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಪ್ರಥಮ ಪಿಯುಸಿ, ವಿಜ್ಞಾನ , ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ, ಪೂರಕ ಪರೀಕ್ಷೆಗೆ ತಯಾರಾಗಲೂ ಆನ್‍ಲೈನ್ ಮೂಲಕ ಮೇ 15, 2020 ಶುಕ್ರವಾರದಿಂದ ತರಗತಿಗಳು ಆರಂಭಗೊಳ್ಳಲಿದೆ.

ಅಂತೆಯೇ ಉತ್ತೀರ್ಣಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೂ ಮುಂದಿನ ದ್ವಿತೀಯ ಪಿಯುಸಿಯ ಪಠ್ಯವನ್ನು ಸೇತುಬಂಧ ತರಗತಿಗಳನ್ನು ಆನ್‍ಲೈನ್ ಮೂಲಕವೇ ಮೇ 15, 2020 ಶುಕ್ರವಾರದಿಂದ ನಡೆಸಲಾಗುವುದು.

ಬೆಳಗ್ಗೆ 9:30ರಿಂದ ಸಂಜೆ 3:30ರ ವರೆಗೆ ತರಗತಿಗಳು ನಡೆಯಲಿರುವುದು. ಈ ಆನ್‍ಲೈನ್ ತರಗತಿಗಳನ್ನು ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದು.

ವಿದ್ಯಾರ್ಥಿಗಳು ಪ್ರಗತಿಯತ್ತ ಸಾಗಲು ಸೌಕರ್ಯಗಳು:

ಪ್ರಗತಿ ವಿದ್ಯಾ ಸಂಸ್ಥೆಯು ಪುತ್ತೂರಿನ ಧರ್ಮಸ್ಥಳ ಬಿಲ್ಡಿಂಗ್ ಮತ್ತು ಮಾಣಿ-ಮೈಸೂರು ಹೆದ್ದಾರಿಯಲ್ಲಿರುವ ಪೋಳ್ಯ ವೆಂಕಟರಮಣ ದೇವಸ್ಥಾನದ ಎದುರು, 2 ಎಕರೆ ವಿಸ್ತೀರ್ಣದಲ್ಲಿ ವಿಶಾಲವಾದ ಕ್ಯಾಂಪಸ್ ಮತ್ತು ಸುಸಜ್ಜಿತ 4 ಅಂತಸ್ತಿನ ‘ತತ್ವಮಸಿ’ ತರಗತಿ ಕೊಠಡಿಗಳನ್ನು ಹೊಂದಿರುತ್ತದೆ. ಹಚ್ಚ ಹಸುರಿನ ವಾತಾವರಣ ಹೊಂದಿರುವ ಈ ಪರಿಸರದಲ್ಲಿ ಹೊರ ಊರಿನ ಸುಮಾರು 200 ವಿದ್ಯಾರ್ಥಿಗಳಿಗೆ ನೂತನ ಹಾಗೂ ಎಲ್ಲಾ ಸೌಕರ್ಯಗಳನ್ನು ಹೊಂದಿರುವಂತಹ ‘ಕೌಸ್ತುಭಂ’ ವಿದ್ಯಾರ್ಥಿ ನಿಲಯದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು. ಇಲ್ಲಿ ದಿನದ 24 ಗಂಟೆಗಳಲ್ಲಿಯೂ ಲಭ್ಯವಿರುವ ಬೋಧಕ-ಬೋಧಕೇತರ ವೃಂದ, ಮಕ್ಕಳ ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಕೆ, ಕಂಪ್ಯೂಟರ್ ಲ್ಯಾಬ್,

ವಿಶಾಲವಾದ ಅಡುಗೆ ಕೋಣೆ, ಅನ್ನಪೂರ್ಣ ಉಪಹಾರ ಗೃಹ, ಜನರೇಟರ್ ಸೇವೆ, ಲೈಬ್ರೇರಿ, ಸ್ಟೇಷನರಿ, ಆಟದ ಮೈದಾನ, ಪ್ರತ್ಯೇಕ ವೈದ್ಯರ ಭೇಟಿ ಕೊಠಡಿ, ಪ್ರಾಯೋಗಿಕ ಕಲಿಕಾ ಕೊಠಡಿಗಳು ಜೊತೆಗೆ ಜೀವನ ಹಾಗೂ ಮಾನವೀಯ ಮೌಲ್ಯ ಮತ್ತು ಶಿಸ್ತನ್ನು ಕಲಿಯಲು ಸಂಸ್ಥೆಯು ತರಬೇತಿ ಒದಗಿಸುತ್ತಿದೆ. ಇಡೀ ಪ್ರಪಂಚವೇ ಎದುರಿಸುತ್ತಿರುವ ಕೊರೊನಾ ವೈರಸನ್ನು ದೂರವಿಡಲು ಸಂಸ್ಥೆಯು ವಿದ್ಯಾರ್ಥಿಗಳಿಗೆ ರಕ್ಷಣಾ ಕ್ರಮಗಳ ಮಾಹಿತಿಯನ್ನು ನೀಡಲಿರುವುದು. ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.

“ಸೋತೆನೆಂದು ದಿಕ್ಕು ತೋಚದೇ ಕುಳಿತ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಕೈ ಹಿಡಿದು ನಡೆಸಿದ ಗುರು ಪ್ರಗತಿ ಸ್ಟಡಿ ಸೆಂಟರ್”, ಎಂಬುದು ಇಲ್ಲಿ ಕಲಿತ ಹಲವು ವಿದ್ಯಾರ್ಥಿಗಳ ಹಾಗು ಅವರ ಪೋಷಕರ ಕೃತಜ್ಞತೆಯ ನುಡಿಗಳು. ಹೇಗೆ ನದಿಯೊಂದರ ಹುಟ್ಟು ಚಿಕ್ಕದಾಗಿರುತ್ತದೆಯೋ ಅದೇ ರೀತಿ ಪುಟ್ಟದಾಗಿ ಪ್ರಾರಂಭಗೊಂಡು ಬೆಳೆಯುತ್ತಾ, ಚಿಕ್ಕದೊಂದು ಮೈಲಿಗಲ್ಲನ್ನು ಸಾಧಿಸಿ ಪ್ರಗತಿಯ ಪಥದಲ್ಲಿ ಸಾಗುತ್ತಿರುವ ಸಂಸ್ಥೆ 12 ವರುಷ ಪೂರ್ಣಗೊಳಿಸಿ, ಇದೀಗ 13ನೇ ವರುಷಕ್ಕೆ ಕಾಲಿಟ್ಟಿದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳ ಜೀವನದ ಆಶಾಕಿರಣ ಈ ಪ್ರಗತಿ ಸ್ಟಡಿ ಸೆಂಟರ್.

ಪ್ರಗತಿಯೊಂದಿಗೆ ಕೈಜೋಡಿಸಿ, ಪ್ರಗತಿಯ ಪಥದಲ್ಲಿ ಸಾಗಿ, ಜೀವನದಲ್ಲಿ ಪ್ರಗತಿಯನ್ನು ಸಾಧಿಸಿ ಎಂಬುವುದೇ ನಮ್ಮ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ.