Thursday, January 23, 2025
ಸುದ್ದಿ

ಚಾರ್ಮಾಡಿಯಲ್ಲಿ ನಿರಾಶ್ರಿತರಿಗೆ ಆಶ್ರಯವಾದ ವಿಶ್ವಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು – ಕಹಳೆ ನ್ಯೂಸ್

ಉಜಿರೆ : ಚಾರ್ಮಾಡಿ ನಿವಾಸಿ ಪ್ರಸಾದ್ ಮತ್ತು ಅವರ ಕುಟುಂಬ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಟರ್ಪಲ್ ನಿಂದ ನಿರ್ಮಿಸಿದ ಮನೆಯಲ್ಲಿ ವಾಸವಿದ್ದರು, ಆದರೆ ಕೆಲವು ತಿಂಗಳ ಹಿಂದೆ ಅರಣ್ಯ ಇಲಾಖೆಯವರು ಅವರನ್ನು ಸ್ಥಳದಿಂದ ತೆರವುಗೊಳಿಸಿದರು ನಂತರ ತಮ್ಮ ಬಳಿ ಇದ್ದ ಅಲ್ಪ-ಸ್ವಲ್ಪ ಹಣದಿಂದ ಅವರು ಒಂದು ಸ್ಥಳವನ್ನು ಖರೀದಿಸಿದರು ಮತ್ತು ಟರ್ಪಲ್ ನಿಂದ ನಿರ್ಮಿಸಿದ ಸಣ್ಣ ಶೆಡ್ ನಲ್ಲಿ ಮಳೆ ಬಿಸಿಲು ಎನ್ನದೆ ತೀರಾ ಕಷ್ಟದಿಂದ ವಾಸಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಅವರ ನೆರವಿಗೆ ಬಂದ ಚಾರ್ಮಾಡಿ ವಿಶ್ವಹಿಂದೂ ಪರಿಷತ್ ಬಜರಂಗದಳದ ಯುವಕರು ಅವರು ಖರೀದಿಸಿದ ಸ್ಥಳದಲ್ಲಿ ಹೊಸತಾದ ಮನೆಯನ್ನು ಕಟ್ಟಿಸಿ ಕೊಡಲು ಮುಂದಾಗಿದ್ದಾರೆ.
ಈಗಾಗಲೇ ಯುವಕರು ಶ್ರಮದಾನದ ಮೂಲಕ ಸಮೂಹವು ಮನೆಯ ಅಡಿಪಾಯವನ್ನು ನಿರ್ಮಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವಹಿಂದೂ ಪರಿಷತ್ ಜೊತೆಗೆ ಊರ ದಾನಿಗಳು ಧನಸಹಾಯ ನೀಡಿದ್ದಾರೆ.