Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಪಾಸಿಟಿವ್ ; ಫಸ್ಟ್ ನ್ಯೂರೋ ಆಸ್ಪತ್ರೆಯ ರೋಗಿಯ ಸಂಪರ್ಕದಲ್ಲಿದ್ದ ಉಡುಪಿ ಮೂಲದ ಇಬ್ಬರಿಗೆ ಸೋಂಕು ದೃಢ – ಕಹಳೆ ನ್ಯೂಸ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಪಾಸಿಟಿವ್ ; ಫಸ್ಟ್ ನ್ಯೂರೋ ಆಸ್ಪತ್ರೆಯ ರೋಗಿಯ ಸಂಪರ್ಕದಲ್ಲಿದ್ದ ಉಡುಪಿ ಮೂಲದ ಇಬ್ಬರಿಗೆ ಸೋಂಕು ದೃಢ
ಮಂಗಳೂರು: ರಾಜ್ಯದಲ್ಲಿ 42 ಜನರಿಗೆ ಇಂದು ಸೋಂಕು ಪತ್ತೆಯಾಗಿದೆ.
ಅಮೂಲಕ ರಾಜ್ಯದಲ್ಲಿ ಒಟ್ಟು 904ಕ್ಕೆ ಕೊರೊನಾ ಪಾಸಿಟಿವ್ ಪ್ರಕರಣ ಏರಿಕೆಯಾಗಿದೆ .
ದ.ಕ ಜಿಲ್ಲೆಯಲ್ಲಿ ಫಸ್ಟ್ ನ್ಯೂರೋ ಸಂಪರ್ಕದಿಂದ ಉಡುಪಿಯ ಇಬ್ಬರಿಗೆ ಸೋಂಕು ದೃಢವಾದ ಬಗ್ಗೆ ಅಧಿಕೃತ ಮಾಹಿತಿ ಇಲಾಖೆ ನೀಡಿದೆ.
26 ವರ್ಷದ ಗಂಡಸಿಗೆ P- 507 ರ ಸಂಪರ್ಕ ದಿಂದ ಮತ್ತು 50 ವರ್ಷದ ಹೆಂಗಸಿಗೆ ಕೂಡಾ P 507 ರ ಸಂಪರ್ಕದಿಂದ ಕೊರೊನಾ ಪಾಸಿಟಿವ್ ದೃಡವಾಗಿದೆ.ಅವರು ಇಬ್ಬರು ಕೂಡ ಮಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದರು.ದ.ಕ ಜಿಲ್ಲೆಯಲ್ಲಿ ಕ್ವಾರೆಂಟೈನ್ ಆಗಿದ್ದ ಉಡುಪಿ ಮೂಲದ ಇಬ್ಬರು…ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಇಬ್ಬರು ರೋಗಿಗಳು. ಫಸ್ಟ್ ನ್ಯೂರೋ ಸೀಲ್ ಡೌನ್ ಬಳಿಕ ಮಂಗಳೂರಿನಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು.
ಹೀಗಾಗಿ ಉಡುಪಿ ಮೂಲದವರಾದರೂ ದ.ಕ ಜಿಲ್ಲೆಯ ಕೊರೋನಾ ಲಿಸ್ಟ್ ಗೆ ಸೇರ್ಪಡೆಯಾಗಿದ್ದಾರೆ.