Friday, January 24, 2025
ಸುದ್ದಿ

ಕೊರೊನಾ ವಿರುದ್ಧ ಹೋರಾಡಿದ ಕರಾವಳಿಯ ವೈದ್ಯ ಡಾ. ಅವಿನಾಶ್ ಅಡಿಗರಿಗೆ ಅಮೇರಿಕದಲ್ಲಿ ‘ಡ್ರೈವ್ ಆಫ್ ಆನರ್’ – ಕಹಳೆ ನ್ಯೂಸ್

ಅಮೇರಿಕ: ಸಂಕಷ್ಟದ ಸಂದರ್ಭದಲ್ಲಿ ಕೈ ಹಿಡಿಯುವ ಆ ದೇವರಿಗೂ ಕೊರೊನಾ ಬಿಸಿ ತಟ್ಟಿ, ಭಕ್ತರು ಕೂಡ ದರ್ಶನದಿಂದ ವಂಚಿತರಾಗಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಕೊರೊನಾದ ವಿರುದ್ಧ ಹೋರಾಡುತ್ತಿರುವ ವೈದ್ಯರೇ ದೇವರೆಂದರೆ ತಪ್ಪಾಗಲ್ಲ. ಹಗಲು ರಾತ್ರಿಯೆನ್ನದೆ ತಮ್ಮ ಕುಟುಂಬದಿಂದ ದೂರವಿದ್ದು, ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ನಾವೆಷ್ಟು ಧನ್ಯವಾದ ತಿಳಿಸಿದರೂ ಸಾಲದು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಹೌದು ಕೊರೊನಾ ವಿರುದ್ಧ ಹೋರಾಡಿದ ನಮ್ಮ ಕರಾವಳಿ ಮೂಲದ ವೈದ್ಯರೊಬ್ಬರಿಗೆ ಅಮೇರಿಕನ್ನರು ಪ್ರೀತಿಪೂರ್ವಕ ಗೌರವ ನೀಡಿದ ಘಟನೆ ನಡೆದಿದೆ.

ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಮ್ಮ ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಅಮೇರಿಕಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯ ಡಾ. ಅವಿನಾಶ್ ಅಡಿಗರಿಗೆ ಭರಪೂರ ಅಭಿನಂದನೆ ಸಿಕ್ಕಿದೆ. ಅಮೇರಿಕಾದಲ್ಲಿ ಕೊರೊನಾ ಸಂದರ್ಭದಲ್ಲಿ ಮೂರು ಆಸ್ಪತ್ರೆಗಳಲ್ಲಿ ಡಾ. ಅವಿನಾಶ್ ಅಡಿಗರು ಅವಿರತ ಸೇವೆ ಸಲ್ಲಿಸಿದ್ದಾರೆ. ಇದುವರೆಗೂ ಅಮೇರಿಕಾದ ಟಾಪ್ 10 ಆಸ್ಪತ್ರೆಯಲ್ಲಿ ಸುಮಾರು 1500 ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ. ಮನೆಯಲ್ಲಿ 1 ವರ್ಷದ ಮಗು ಇದ್ದರೂ ಕೂಡ ತನ್ನ ಕರ್ತವ್ಯ ಮರೆಯದೆ ಸೇವೆ ನೀಡಿದ್ದ ಹಿನ್ನಲೆಯಲ್ಲಿ ಮನೆ ಮುಂದೆ ಕಾರುಗಳ ರ್ಯಾಲಿ ಮೂಲಕ ‘ಡ್ರೈವ್ ಆಫ್ ಆನರ್’ ಗೌರವವನ್ನು ಅಮೇರಿಕನ್ನರು ನೀಡಿದ್ದಾರೆ. ಇನ್ನು ಮನೆಯ ಮುಂದೆ ನಿಂತು ಪ್ರೀತಿಯ ‘ಡ್ರೈವ್ ಆಫ್ ಆನರ್’ ಅನ್ನ ಡಾ.ಅವಿನಾಶ ಅಡಿಗರು ಸ್ವೀಕರಿಸಿದ್ದಾರೆ.