Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ : ಉಳ್ಳಾಲ ಸೋಮೇಶ್ವರದ ಮಹಿಳೆಗೆ ಸೋಂಕು ದೃಢ – ಕಹಳೆ ನ್ಯೂಸ್
ಮಂಗಳೂರು: ಮಂಗಳೂರು ನಗರ ಅಕ್ಷರಶಃ ಕೊರೋನಾ ಬಲೆಯಲ್ಲಿ ಸಿಲುಕಿದೆ. ಮಂಗಳವಾರ ತಾಯಿ ಮಗನಿಗೆ ಕೊರೋನಾ ದೃಢ ಪಟ್ಟಿದ್ದರೆ ಬುಧವಾರ ಮತ್ತೊಂದು ಪಾಸಿಟಿವ್ ಕಂಡು ಬಂದಿದೆ.
ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಉಳ್ಳಾಲ ಸಮೀಪದಸೋಮೇಶ್ವರದ ಮಹಿಳೆಗೆ ಸೋಂಕು ದೃಢಪಟ್ಟಿದೆ.ಈ ಪ್ರಕರಣದೊಂದಿಗೆ ದ.ಕ ಜಿಲ್ಲೆಯಲ್ಲಿ 34 ಕೊರೋನಾ ಪ್ರಕರಣಗಳು ಪತ್ತೆಯಾದಂತಾಗಿದೆ.