Sunday, January 19, 2025
ಸಿನಿಮಾಸುದ್ದಿ

ಮಾಜಿ ಪೋರ್ನ್ ಸ್ಟಾರ್ ಆಗಿದ್ದರೂ ತಮ್ಮ ಸಮಾಜಮುಖಿ ಕೆಲಸಗಳಿಂದ ಎಲ್ಲರ ಮನ ಗೆದ್ದ ಮಾದಕ ಮದನಾರಿ ಸನ್ನಿ ಲಿಯೋನ್​ಗೆ ಇಂದು 39ನೇ ಹುಟ್ಟು ಹಬ್ಬದ ಸಂಭ್ರಮ – ಕಹಳೆ ನ್ಯೂಸ್

ಬಾಲಿವುಡ್​ನ ಮಾದಕ ಮದನಾರಿ ಸನ್ನಿ ಲಿಯೋನ್​ಗೆ ಇಂದು 39ನೇ ಹುಟ್ಟುಹಬ್ಬದ ಸಂಭ್ರಮ. ಮಕ್ಕಳೊಂದಿಗೆ ಯುಎಸ್​ಎನಲ್ಲಿರುವ ಸೇಸಮ್ಮ ನಿನ್ನೆಯಿಂದಲೇ ಶುಭಾಶಯದ ಮಹಾಪೂರ ಹರಿದು ಬರುತ್ತಿವೆ. ಹೊಸ ವಸಂತಕ್ಕೆ ಕಾಲಿಟ್ಟ ಪತ್ನಿಗೆ ಪತಿ ಡೇನಿಯಲ್ ವೆಬರ್ ವಿಶೇಷವಾಗಿ ವಿಶ್ ಮಾಡಿದ್ದು, ಸನ್ನಿ ಲಿಯೋನ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹಾಡಿ ಹೊಗಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ಪೋರ್ನ್ ಸ್ಟಾರ್ ಆಗಿದ್ದರೂ ಸನ್ನಿ ತಮ್ಮ ಸಮಾಜಮುಖಿ ಕೆಲಸಗಳಿಂದ ಎಲ್ಲರ ಮನ ಗೆದ್ದಿದ್ದಾರೆ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬೇಬಿ ಡಾಲ್‍ಗೆ ಪತಿ ಡೇನಿಯಲ್ ವೆಬರ್, ಸನ್ನಿ ನೀನು ಶ್ರೇಷ್ಠ ತಾಯಿ, ಪತ್ನಿ ಹಾಗೂ ಲವ್ವರ್. ಲಕ್ಷಾಂತರ ಮಂದಿಗೆ ನೀನು ಸ್ಪೂರ್ತಿ, ರೋಲ್ ಮಾಡೆಲ್. ನಿನ್ನ ಬಗ್ಗೆ ಸಾಕಷ್ಟು ಮಂದಿ ಕೆಟ್ಟದಾಗಿ ಮಾತನಾಡಿದರೂ ನೀನು ಅಂಜಲಿಲ್ಲ. ಯಾರೇ ಏನೇ ಹೇಳಿದರೂ ತಲೆಕೆಡಿಸಿಕೊಳ್ಳದೇ ನಿನ್ನ ಜೀವನದ ಹಾದಿಯಲ್ಲಿ ನೀನು ಸಾಗುತ್ತಿರುವೆ. ನಿನ್ನ ಮೇಲೆ ನನಗೆ ಹೆಮ್ಮೆ ಇದೆ. ಐ ಲವ್ ಯು ಸೋ ಮಚ್, ಲವ್ ಯು ಬೇಬಿ ಲವ್ ಎಂದು ಬರೆದು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡದಲ್ಲಿ ಸೇಸಮ್ಮಳಾಗಿ ಸೊಂಟ ಬಳುಕಿಸಿದ್ದ ಸನ್ನಿ ಅಮೆರಿಕಾದಿಂದಲೇ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನನ್ನ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದ. ನಾನು ನಿಮ್ಮೆಲ್ಲರ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದು ಸನ್ನಿ ಲಿಯೋನ್ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ.