Saturday, November 23, 2024
ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಿಂದ ಎಲ್ಲಾ ಕಾರ್ಮಿಕರಿಗೆ ತವರಿಗೆ ಮರಳಲು ವ್ಯವಸ್ಥೆ ; ಅನಾವಶ್ಯಕ ಗೊಂದಲ ಬೇಡ – ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ – ಕಹಳೆ ನ್ಯೂಸ್‌

ಮಂಗಳೂರು, ಮೇ 13  : ಸರ್ಕಾರದಿಂದ ಆನ್‌ಲೈನ್‌ ಸೇವಾ ಸಿಂಧೂ ಮೂಲಕ ಅರ್ಜಿ ಸ್ವೀಕರಿಸಲಾಗುತ್ತಿದೆ. ಜಿಲ್ಲೆಯಿಂದ ಒಟ್ಟು 40510 ಅರ್ಜಿ ಸ್ವೀಕರಿಸಲಾಗಿದೆ. ಆ ಪೈಕಿ ಮೇ 9 ರಿಂದ ಹೊರ ರಾಜ್ಯಗಳಿಗೆ ರೈಲು ಸಂಪರ್ಕ ಆರಂಭವಾಗುತ್ತದೆ ಎಂದು ಮಂಗಳೂರಿನಲ್ಲಿ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಚ್ಚಿನ ಅರ್ಜಿ ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶದ ಕಡೆಗಳಿಗಿದೆ. ಈ ಪೈಕಿ ಹಂತ ಹಂತವಾಗಿ ಕಾರ್ಮಿಕರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಮಿಕರು ಯಾರೂ ಗೊಂದಲಗೊಳ್ಳುವ ಅಗತ್ಯವಿಲ್ಲ. ಎಲ್ಲರಿಗೂ ತಮ್ಮ ರಾಜ್ಯಗಳಿಗೆ ಹೋಗುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಜಿಲ್ಲೆಗೆ ಹೊರ ರಾಜ್ಯದಿಂದ ಬರುವವರಿಂದ ಈಗಾಗಲೇ 25 ಸಾವಿರ ಅರ್ಜಿ ಸ್ವೀಕರಿಸಲಾಗಿದೆ. ಈಗಾಗಲೆ ಜಿಲ್ಲೆಗೆ ಹೊರ ರಾಜ್ಯದಿಂದ 129 ಮಂದಿ ಬಂದಿದ್ದಾರೆ. ಈ ಪೈಕಿ 25 ಇನ್ಸ್ಟಿಟ್ಯೂಷನಲ್ ಕ್ವಾರೈಂಟೈನ್ ಆಗಿದ್ದಾರೆ. ಜಿಲ್ಲೆಗೆ ಹೊರ ರಾಜ್ಯದಿಂದ ಬರುವವರ ಪೈಕಿ ಹೆಚ್ಚಿನ ಅರ್ಜಿ ಮಹಾರಾಷ್ಟ್ರದಿಂದ ಬಂದಿದೆ ಎಂದು ತಿಳಿಸಿದರು.