Recent Posts

Sunday, January 19, 2025
ಸುದ್ದಿ

ದುಬೈನಿಂದ ಬಂದ ಅನಿವಾಸಿ ಭಾರತೀಯರನ್ನು ನಿರ್ಲಕ್ಷ್ಯ ಮಾಡಿಲ್ಲ, ಸರ್ಕಾರದ ನಿಯಮದ ಪ್ರಕಾರ ಕ್ರಮ ಕೈಗೊಂಡಿದ್ದೇವೆ ; ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ – ಕಹಳೆ ನ್ಯೂಸ್‌

ಮಂಗಳೂರು, ಮೇ 13  : ದುಬೈನಿಂದ ಬಂದ ಅನಿವಾಸಿ ಭಾರತೀಯರನ್ನು ನಿರ್ಲಕ್ಷ್ಯ ಮಾಡಿದ ಆರೋಪಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸ್ಪಷ್ಟನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾತನಾಡಿದ ಅವರು, ಸರ್ಕಾರದ ನಿಯಮದ ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಹೊಟೇಲ್‌ಗಳನ್ನು ಪ್ರಯಾಣಿಕರೇ ಆಯ್ಕೆ ಮಾಡಿದ್ದಾರೆ. ಹೊಟೇಲ್‌ಗಳ ರೇಟ್‌ಗಳನ್ನು ಮೊದಲೇ ಹೇಳಿದ್ದೇವೆ. ಎಲ್ಲಾ ಪ್ರಯಾಣಿಕರಿಗೂ ಮಾಹಿತಿ ನೀಡಿದ್ದೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಮಾನ ಲ್ಯಾಂಡ್‌ ಆದ ಬಳಿಕ ಪ್ರಕ್ರಿಯೆ ತಡವಾದ ಆರೋಪದ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ಈ ಸಮಯದಲ್ಲಿ ಏರ್ ಪೋರ್ಟ್ ಪ್ರಕ್ರಿಯೆಗಳು ತುಂಬಾ ತಡವಾಗುತ್ತದೆ. ವಿಮಾನ ಲ್ಯಾಂಡ್ ಆದ ಬಳಿಕ ಪ್ರಕ್ರಿಯೆ 3-4 ಗಂಟೆ ತಡ ಆಗುತ್ತದೆ. ವಿಮಾನದಿಂದ ಒಮ್ಮೆ 20 ಮಂದಿ ಮಾತ್ರ ಹೊರ ಬರಲು ಅವಕಾಶ ಈ ಸಂದರ್ಭ ಎಲ್ಲರ ಸ್ಕ್ರೀನಿಂಗ್ ಕೂಡಾ ನಡೆಯುತ್ತದೆ ಎಂದರು ತಿಳಿಸಿದರು.

ನಿನ್ನೆಯ ವಿಮಾನದಲ್ಲಿ 40 ಮಂದಿ ಗರ್ಭಿಣಿಯರಿದ್ದರು. ಎಲ್ಲರ ಆರೋಗ್ಯ ತಪಾಸಣೆ ಮಾಡಿದ್ದೇವೆ. ನಿನ್ನೆ ರಾತ್ರಿ ಮತ್ತು ಇವತ್ತು ಬೆಳಗ್ಗೆಯೂ ತಪಾಸಣೆ ಮಾಡಲಾಗಿದೆ. ಸರ್ಕಾರ ಅನಿವಾಸಿ ಭಾರತೀಯರ ವಿಚಾರ ನಿಯಮ ಸಡಿಲಿಕೆ ಮಾಡಿದೆ. ಗರ್ಭಿಣಿ, ಮಕ್ಕಳು,ಮಹಿಳೆಯರು, ವೃದ್ದರಿಗೆ ರಿಯಾಯಿತಿ ನೀಡಲಾಗಿದೆ. ಸ್ವಾಬ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದರೆ ಅವರನ್ನು ಹೋಮ್ ಕ್ವಾರಂಟೈನ್‌ ಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ