Wednesday, January 22, 2025
ಸುದ್ದಿ

ಬಕ್ಸರ್ ಕಾಂಗ್ರೆಸ್‌ ಶಾಸಕ ಸಂಜಯ್‌ ತಿವಾರಿ ಕಾರಿನಲ್ಲಿ ಮದ್ಯ ಸಾಗಾಟ ; ಶಾಸಕ ಸೇರಿದಂತೆ ಐವರ ವಿರುದ್ದ ಎಫ್‌ಐಆರ್‌ ದಾಖಲು

ಪಾಟ್ನಾ, ಮೇ 14  : ಬಕ್ಸರ್‌ ಶಾಸಕ ಸಂಜಯ್‌ ಕೆ.ಆರ್‌ ತಿವಾರಿ ಅವರ ಕಾರನ್ನು ಪೊಲೀಸರು ತಪಾಸಣೆ ಮಾಡಿದ್ದು, ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದು, ಶಾಸಕರು ಸೇರಿದಂತೆ ಐದು ಮಂದಿಯ ವಿರುದ್ದ ಎಫ್‌ಐಆರ್‌ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಲ್ಕು ಜನರಿದ್ದ ಕಾರಣನ್ನು ತಪಾಸಣೆ ಮಾಡಿದ್ದೇವೆ. ವಾಹನ್‌ ಆ್ಯಪ್‌ ಪರಿಶೀಲಿಸಿದ ನಂತರ ಶಾಸಕರ ಕಾರು ಎಂದು ತಿಳಿದು ಬಂದಿದ್ದು, ಶಾಸಕರ ಸಹಿತ ಐದು ಮಂದಿಯ ವಿರುದ್ದ ಎಫ್‌ಐಆರ್‌ ದಾಖಲಿಸಿದ್ದೇವೆ ಎಂದು ಬಕ್ಸೂರ್‌ ಎಸ್ಪಿ ಉಪೇಂದ್ರನಾಥ್‌ ಶರ್ಮಾ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಸಂಜಯ್‌ ತಿವಾರಿ ಅವರು, ನನ್ನ ಕಾರಿನಲ್ಲಿದ್ದ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಜಗದೀಶ್‌ಪುರದಲ್ಲಿ ಪಡಿತರ ವಿತರಣೆ ಮಾಡಲು ಕಾರನ್ನು ತೆಗೆದುಕೊಂಡು ಹೋಗಲಾಗಿತ್ತು. ಕಾರಿನಲ್ಲಿ ಮದ್ಯೆ ಪತ್ತೆಯಾಗಿರುವುದು ನನಗೂ ಆಶ್ಚರ್ಯವಾಗಿದೆ. ಪಡಿತರ ವಿತರಣೆ ಮಾಡಲು ಹೋದ ಕಾರ್ಮಿಕರನ್ನು ಇನ್ನಷ್ಟೇ ವಿಚಾರಿಸುತ್ತೇನೆ ಎಂದು ತಿಳಿಸಿದ್ದಾರೆ.