Wednesday, January 22, 2025
ಸಿನಿಮಾಸುದ್ದಿ

ಮುಂಬೈನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ಇಂದು ಬಾಲಿವುಡ್‍ನ ಸ್ಟಾರ್ ಬರಹಗಾರ್ತಿ – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್‍ನ ಖ್ಯಾತ ಬರಹಗಾರ್ತಿ ಒಬ್ಬರ ಕತೆ ಕೇಳಿದರೆ ಯಾವ ಸಿನಿಮಾ ಕತೆಗಳಿಗಿಂತಲೂ ಕಡಿಮೆಯಿಲ್ಲ ಎನಿಸುತ್ತೆ. ಆದರೆ ಇದು ಸಿನಿಮಾ ಕತೆಯಲ್ಲ ಖ್ಯಾತ ಬರಹಗಾರ್ತಿಯ ನಿಜ ಜೀವನದ ವ್ಯಥೆ. ಹಿಂದೆ ಜೀವನ ನಡೆಸಲು ಮುಂಬೈನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ಇಂದು ಬಾಲಿವುಡ್‍ನಲ್ಲಿ ತಮ್ಮ ಪ್ರತಿಭೆ ಮೂಲಕ ಖ್ಯಾತಿ ಗಳಿಸಿದ್ದಾರೆ. ಇವರು ಬರೆದ ಕತೆಗಳು ಇಂದು ಬಿಟೌನ್‍ನಲ್ಲಿ ಹಿಟ್ ಸಿನಿಮಾಗಳಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದು ಜೀವನ ನಿರ್ವಹಣೆಗಾಗಿ ವೇಶ್ಯೆ ಆಗಿದ್ದವರು ಇಂದು ಬಾಲಿವುಡ್‍ನಲ್ಲಿ ಖ್ಯಾತಿ ಗಳಿಸಿದವರ ಹೆಸರು ಶಗುಫ್ತಾ ರಫಿಕಿ. ಕುಟುಂಬ ನಿರ್ವಹಣೆಗಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಶಗುಫ್ತಾ ಇಂದು ಬಾಲಿವುಡ್‍ನ ಸ್ಟಾರ್ ಬರಹಗಾರ್ತಿ ಆಗಿದ್ದಾರೆ. ಇವರು ಬರೆದ ಕತೆಗಳು ಸಿನಿಮಾ ಆಗಿ ಬಾಕ್ಸ್ ಆಫೀಸ್‍ನಲ್ಲಿ ಕೋಟಿ-ಕೋಟಿ ಹಣ ಗಳಿಸಿದೆ. ಬಾಲಿವುಡ್‍ನ ಖ್ಯಾತ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಅವರು ನಿರ್ಮಿಸಿರುವ ಬಹುತೇಕ ಸಿನಿಮಾಗಳಿಗೆ ಶಗುಫ್ತಾ ಅವರೇ ಮುಖ್ಯ ಬರಹಗಾರ್ತಿ. ‘ವೋಹ್ ಲಮ್ಹೆ’, ‘ರಾಜ್2 ಮತ್ತು 3’, ಮ್ಯೂಸಿಕಲ್ ಹಿಟ್ ಸಿನಿಮಾ ‘ಆಶಿಕಿ 2’, ‘ಮರ್ಡರ್ 2′, ಅಂಕುರ್ ಅರೋರಾ ಮರ್ಡರ್ ಕೇಸ್’ ಹೀಗೆ ಸಾಕಷ್ಟು ಸಿನಿಮಾಗಳಿಗಾಗಿ ಶಗುಫ್ತಾ ಕೆಲಸ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಂದೆ-ತಾಯಿ ಬಗ್ಗೆ ತಿಳಿಯದ ಶಗುಫ್ತಾರನ್ನು ಚಿಕ್ಕ ವಯಸ್ಸಿನಿಂದಲೇ ಯಾವುದೋ ಮಹಿಳೆ ಸಾಕಿದರು. ಆ ಮಹಿಳೆಗೆ ಕೊಲ್ಕತ್ತದ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧವಿತ್ತು. ಆದರೆ ಆತ ಮೃತಪಟ್ಟ ಬಳಿಕ ಶಗುಫ್ತಾ ಮತ್ತು ಅವರ ಸಾಕು ತಾಯಿಯ ಜೀವನ ನಡೆಸಲು ಕಷ್ಟವಾಯ್ತು. ಹೀಗಾಗಿ ತಮ್ಮ 11 ವರ್ಷದ ವಯಸ್ಸಿನಲ್ಲಿಯೇ ಶಗುಫ್ತಾ ಡಾನ್ಸ್ ಬಾರ್ ನಲ್ಲಿ ಕುಣಿದು ರಂಜಿಸಿ ಹಣ ದುಡಿಯುತ್ತಿದ್ದರು. ಜೀವನ ನಡೆಸಲು ತಮ್ಮ 17ನೇ ವಯಸ್ಸಿನಲ್ಲಿಯೇ ಕಾರಣಾಂತರಗಳಿಂದ ಶಗುಫ್ತಾ ವೇಶ್ಯಾವಾಟಿಕೆಯಲ್ಲಿ ತೊಡಗಿಬಿಟ್ಟರು.

ಶಗುಫ್ತಾ ಮುಂಬೈನಲ್ಲಿ ವೇಶ್ಯಾವಾಟಿಕೆಯಿಂದ ಸ್ವಲ್ಪ ಹಣ ಗಳಿಸಿದಳು. ನಂತರ ಮುಂಬೈನಲ್ಲಿಯೇ ಕೆಲ ದಿನ ಡಾನ್ಸ್ ಬಾರ್ ನಲ್ಲಿ ದುಡಿದ ಶಗುಫ್ತಾ, ತನ್ನ 25ನೇ ವಯಸ್ಸಿನಲ್ಲಿ ವೇಶ್ಯಾವಾಟಿಕೆಗೆಂದೇ ದುಬೈಗೆ ಹಾರಿದ್ದರು. ಶಗುಫ್ತಾ ಹೊಟ್ಟೆಪಾಡಿಗಾಗಿ ಡಾನ್ಸ್ ಬಾರ್ ನಲ್ಲಿ ಕುಣಿಯುವುದನ್ನು ಮುಂದುವರೆಸಿದರು. ಈ ಮಧ್ಯೆಯೇ ಕತೆಗಳನ್ನು ಬರೆಯಲು ಆರಂಭಿಸಿದರು. ತಾವು ಕಂಡ ಕತ್ತಲ ಸಾಮ್ರಾಜ್ಯದ ಕತೆಗಳನ್ನು ಬರೆಯುತ್ತಿದ್ದರು.

ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಶಗುಫ್ತಾ ಪ್ರಯತ್ನಿಸುವಾಗ ವಿನೇಶ್ ಸ್ಟುಡಿಯೋಸ್‍ನ ಮಹೇಶ್ ಭಟ್ ಅವರು ಶಗುಫ್ತಾ ಅವರ ಪ್ರತಿಭೆ ಗುರುತಿಸಿ, ಕೆಲಸಕೊಟ್ಟರು. ಈವರೆಗೆ ಸುಮಾರು 19 ಸಿನಿಮಾಗಳಿಗೆ ಶಗುಫ್ತಾ ಕತೆ, ಚಿತ್ರಕತೆ ಬರೆದಿದ್ದಾರೆ. ಕತೆ ಬರೆಯುವುದು ಮಾತ್ರವಲ್ಲ ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪಂಜಾಬಿಯಲ್ಲಿ ‘ದುಶ್ಮನ್’, ಬಂಗಾಳಿ ಭಾಷೆಯಲ್ಲಿ ‘ಮೋನ್ ಜಾನೆ ನಾ’ ಸಿನಿಮಾ ನಿರ್ದೇಶಿಸಿದ್ದು, ಶಗುಫ್ತಾ ರಫಿಕಿ ಅವರ ನಿರ್ದೇಶನದ ‘ಸೆವೆನ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.