Wednesday, January 22, 2025
ಸುದ್ದಿ

” ಯಾಕೋ ರವಿಪ್ರಸಾದ ವೈದ್ಯರ ಮೇಲೆ ನಿನ್ನ ಪ್ರತಾಪ..? ” – ಪುತ್ತೂರಾಯರು ಆಯ್ತು ಈಗ ಡಾ. ದೀಪಕ್ ರೈ ; ಈ ರವಿ ಪ್ರಸಾದನಿಗೆ ವೈದ್ಯರೇ ಟಾರ್ಗೆಟ್ – ಪೋಲೀಸರಿಗೆ ಮತ್ತೆ ನ್ಯಾಯಾಲಯದ ನಿರ್ದೇಶನ ದೂರು ಆದರಿಸಿ FIR ಮಾಡಿ – ಕಹಳೆ ನ್ಯೂಸ್

ಪುತ್ತೂರು : ಕಳೆದ ಕೆಲ ವಾರಗಳ ಮೊದಲು ಪುತ್ತೂರಿನ ಪ್ರತಿಷ್ಠಿತ ವೈದ್ಯ ಡಾ.ಸುರೇಶ್ ಪುತ್ತೂರಾಯರ ವಿರುದ್ಧವಾಗಿ ವಾಟ್ಸಾಪ್ ನಲ್ಲಿ ಅಪಮಾನಕಾರಿ ಸಂದೇಶ ರವಾನೆ ಮಾಡಿದ್ದ, ಆರೋಪಿ ಕಾಂಗ್ರೆಸ್ ನಾಯಕರ ಪರಮಾಪ್ತ ಮತ್ತೆ ತನ್ನ ಬಾಲ ಹರಿಬಿಟ್ಟಿದ್ದಾನೆ. ಲಾಕ್ ಡೌನ್ ಸಮಯದಲ್ಲಿ ವೈದ್ಯರು ತಮ್ಮ ಜೀವದ ಹಂಗುತೊರೆದು ಕೆಲಸಮಾಡುತ್ತಿದ್ದಾರೆ, ಅವರನ್ನು ದೇಶದ ಪ್ರಧಾನಿ ಸೇರಿದಂತೆ ಜಗತ್ತು ಗೌರವಿಸುತ್ತಿರುವ ಈ ಹೊತ್ತಿನಲ್ಲಿ ಪುತ್ತೂರಿನಲ್ಲಿ ಇಂತಹದ್ದೊಂದು ಘಟನೆ ನಡೆದದ್ದು, ನಿಜಕ್ಕೂ ಬೇಸರದ ಸಂಗತಿ. ಆದರೆ, ಈಗ ಮತ್ತೆ ಕುರಿತು ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ.

ಘಟನೆ ಏನು : ಪುತ್ತೂರಿನ ಮಹಾವೀರ ಆಸ್ಪತ್ರೆಯ ಹೃದ್ರೋಗ ತಜ್ಞ, ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯರು ತಮ್ಮ ವಾಟ್ಸಾಪ್ ಸ್ಟೇಟಸ್ ಒಂದನ್ನು ಹಾಕಿದ್ದು, ಅದನ್ನು ತಿರುಚಿ ಒಂದು ಕಾಲದಲ್ಲಿ ಪುತ್ತೂರಿನ ರವಿ ಪ್ರಸಾದ್ ಶೆಟ್ಟಿ ಎಂಬ ವ್ಯಕ್ತಿ ಸಂದೇಶವನ್ನು ಎಲ್ಲಾ ಗ್ರೂಪ್ ಗಳಿಗೆ ರವಾನೆ ಮಾಡಿದ್ದು, ವೈದ್ಯರ ತೇಜೋವಧೆಗೆ ಯತ್ನಿಸಿದ್ದ ಘಟನೆ ನಡೆಯಿತುದಿತ್ತು. ಇದರಿಂದ ಮನನೊಂದ ಸುರೇಶ್ ಅವರು ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದರು, ಆದರೆ ನ್ಯಾಯಾಲಯದ ನಿರ್ದೇಶನ ವಿಲ್ಲದೆ, FIR ಮಾಡಲು ಸಾಧ್ಯವಿಲ್ಲ ‌ಎಂದು ಪೋಲೀಸರು ತಿಳಿಸಿದ್ದರು. ಇದರಂತೆ ಖ್ಯಾತ ನ್ಯಾಯವಾದಿ ಮಹೇಶ್ ಕಜೆಯವರ ಮುಖೇನ ನ್ಯಾಯಾಲಯದ ಮಟ್ಟಿಲೇರಿದ್ದರು, ವೈದ್ಯ ಪುತ್ತೂರಾಯರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಪೋಲೀಸರಿಗೆ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸುವಂತೆ ನಿರ್ದೇಶನ ಮಾಡಿ ಆದೇಶ ನೀಡಿತ್ತು, ಅದರಂತೆ ತನಿಖೆ ನಡೆದಿತ್ತು, ಆದರೆ, ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ, ಆ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ‌..

ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತೆ ಬಾಲ ಹರಿಬಿಟ್ಟ ರವಿಪ್ರಸಾದ…! ; ಮತ್ತೊಬ್ಬ ವೈದ್ಯರ ಬಗ್ಗೆ ಅವಹೇಳನಾಕಾರಿ ಲೇಖನ :

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್, ಈ ರವಿ ಪ್ರಸಾದ್ ಗೆ ಸಂದೇಶಗಳನ್ನು ವಾಟ್ಸಾಪ್ ನಲ್ಲಿ ತಿರುಚಿ ಹರಿಬಿಡುವುದು ಚಾಲಿಯಾಗಿದೆ. ಇದೀಗ ಪುತ್ತೂರಿನ ಮೊತ್ತೊಬ್ಬ ವೈದ್ಯರ ಬಗ್ಗೆ ಈತ ಅವಹೇಳನಾಕಾರಿ ಫೋಸ್ಟ್ ಹಾಕಿದ್ದಾನೆ. ಪುತ್ತೂರಿ‌ನ ಸರಕಾರಿ ವೈದ್ಯ ದೀಪಕ್ ರೈಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು ಹಾಗೂ ಮಂಗಳೂರಿನಲ್ಲಿ ಕಾನೂನು ಉಲ್ಲಂಘನೆ ಬಗ್ಗೆ ಎಚ್ಚರಿಸಿದ್ದರು. ಆದರೆ, ಅವರ ಈ ಸಂದೇಶವನ್ನು ತಿರುಚಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈತ ಅವಹೇಳನಾಕಾರಿಯಾಗಿ ಪೋಸ್ಟ್ ಮಾಡಿದ್ದ, ಇದರಿಂದ ಮನನೊಂದ ವೈದ್ಯರು, ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೋಲೀಸರಿಗೆ ಆದೇಶಿಸಿದೆ.

ಇತ್ತ ಒಂದು ಪ್ರಕರಣದಲ್ಲಿ ಜಾಮೀನು ಲಭಿಸುತ್ತಿದ್ದಂತೆ ಮತ್ತೊಂದು ಪ್ರಕರಣ ಈತನ ಮೇಲೆ ದಾಖಲಾಗಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಇಂತಹ ವ್ಯಕ್ತಗಳ ವಿರುದ್ಧ ಕಠಿಣಕ್ರಮದ ಅವಶ್ಯಕತೆ ಇದೆ.