ಜಾನುವಾರುಗಳನ್ನು ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ಅಬ್ದುಲ್ ರಝಾಕ್ ಹಾಗೂ ಅಬೂಬಕ್ಕರ್ ನನ್ನು ಹೆಡೆಮುರಿಕಟ್ಟಿ – ಕರುಗಳ ರಕ್ಷಣೆ ಮಾಡಿದ ಬಂಟ್ವಾಳ ಪೋಲೀಸರು – ಕಹಳೆ ನ್ಯೂಸ್
ಬಂಟ್ವಾಳ : ಕಡೇಶ್ವಾಲ್ಯ ಗ್ರಾಮದ ನಚ್ಚಿಬೆಟ್ಟು ಎಂಬಲ್ಲಿರುವ ಮನೆಯೊಂದರಲ್ಲಿ ಹಸುಗಳ ಸಹಿತ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಪ್ರಕರಣ ಪತ್ತೆಯಾಗಿದೆ. ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಚ್ಚಿಬೆಟ್ಟು ಎಂಬಲ್ಲಿ ಪ್ರಕರಣ ನಡೆದಿದೆ. ಅಲ್ಲಿನ ನಿವಾಸಿ ಅಬ್ದುಲ್ ರಝಾಕ್ ಹಾಗೂ ಅಬೂಬಕ್ಕರ್ ಬಂಧಿತ ಆರೋಪಿಗಳು. ಇವರಿಬ್ಬರು ಗೋಮಾಂಸ ಮಾರಾಟ ಮಾಡುತ್ತಿದ್ದುದಾಗಿ ಆರೋಪಿಸಲಾಗಿತ್ತು. ಈ ಕುರಿತು ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಹಾಗೂ ಸಿಬಂದಿ ದಾಳಿ ನಡೆಸಿದ್ದರು. ದಾಳಿಯ ವೇಳೆ ಆಟೋ ರಿಕ್ಷಾದಲ್ಲಿದ್ದ ೪೦ ಕೆಜಿ ಗೋಮಾಂಸ, ತೋಟದಲ್ಲಿ ಕಟ್ಟಿಹಾಕಿದ್ದ ೪ ಕರುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಸಿಬಂದಿ ಜನಾರ್ದನ, ಸುರೇಶ್, ವರ್ಗೀಸ್, ಬಸವರಾಜು, ವಿಶಾಲಾಕ್ಷಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.