Friday, November 29, 2024
ಸುದ್ದಿ

ಕರಾವಳಿಗೆ ಅಂಫಾನ್‌ ಚಂಡ ಮಾರುತ ಭೀತಿ, “ಯಲ್ಲೋ ಅಲರ್ಟ್‌’ ಘೋಷಣೆ ; ಗುಡುಗು, ಸಿಡಿಲು ಸಹಿತ ಭಾರೀ ಮಳೆ – ಹವಮಾನ ಇಲಾಖೆ ಎಚ್ಚರಿಕೆ – ಕಹಳೆ ನ್ಯೂಸ್

ಮಂಗಳೂರು, ಮೇ 16 : ಬೇಸಿಗೆಯ ಬಿಸಿಲು ಹಾಗೂ ಕೊರೊನಾ ಸಂಕ್ರಾಮಿಕ ರೋಗ ಕಂಗೆಟ್ಟಿರುವ ಕರಾವಳಿ ಪ್ರದೇಶಕ್ಕೆ ಇದೀಗ ಅಂಫಾನ್‌’ ಎಂಬ ಹೆಸರಿನ ಚಂಡ ಮಾರುತದ ಆತಂಕ ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ’ಅಂಫಾನ್‌’ ಎಂಬ ಹೆಸರಿನ ಚಂಡ ಮಾರುತ ಸೃಷ್ಟಿಯಾಗಿರುವುದರಿಂದ ಕರಾವಳಿ ಭಾಗದಲ್ಲಿ ಆತಂಕ ಉಂಟಾಗಿದೆ. ’ಅಂಫಾನ್‌’ ಚಂಡಮಾರುತವೂ ಮೇ 18ರಂದು ಚಂಡಮಾರುತ ತೀವ್ರ ಸ್ವರೂಪ ಪಡೆಯಲಿದೆ. ಈ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ “ಯಲ್ಲೋ ಅಲರ್ಟ್‌’ ಘೋಷಣೆ ಮಾಡಲಾಗಿದ್ದು, ಇದು ಮುಂದೆ ಬರುವ ಮುಂಗಾರು ಮಳೆ ಪ್ರವೇಶಕ್ಕೆ ಚಂಡಮಾರುತ ಪರಿಣಾಮ ಬೀರಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತದ ಉಂಟಾದರೆ, ಇನ್ನು ಅರಬ್ಬಿ ಸಮುದ್ರದಲ್ಲಿ ನಿಮ್ನ ಒತ್ತಡ (ಟ್ರಫ್‌) ನಿರ್ಮಾಣವಾಗಿದೆ. ಇದೇ ಕಾರಣದಿಂದ ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಒಳನಾಡು, ಕರಾ ವಳಿ ಭಾಗಕ್ಕೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.