Friday, November 29, 2024
ಸುದ್ದಿ

ಕೊರೊನಾ ವಾರಿಯರ್‌, ಪುತ್ತೂರಿನ ಸರಕಾರಿ ವೈದ್ಯ ಡಾ. ದೀಪಕ್ ರೈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಮಾನಕಾರಿ ಸಂದೇಶ ರವಾನೆ ಪ್ರಕರಣ : ಆರೋಪಿ ರವಿಪ್ರಸಾದ್ ಶೆಟ್ಟಿ ಹೆಡೆಮುರಿಕಟ್ಟಿದ ಪುತ್ತೂರು ಪೋಲೀಸರು ; ಜಾಮೀನಿನಲ್ಲಿ ಶೆಟ್ಟಿ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು, ಮೇ 16 : ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯ ಡಾ. ದೀಪಕ್ ರೈ ಅವರು ರವಾನಿಸಿದ ಸಂದೇಶವೊಂದನ್ನು ತಿರುಚಿ, ಅವರ ವಿರುದ್ಧ ಸಮುದಾಯವೊಂದನ್ನು ಎತ್ತಿಕಟ್ಟಿದ ಆರೋಪಿ ರವಿಪ್ರಸಾದ್ ಶೆಟ್ಟಿಯನ್ನು ಪುತ್ತೂರು ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಘಟನೆ ಹಿನ್ನಲೆ : ಡಾ ಸುರೇಶ್ ಪುತ್ತೂರಾಯರ ಮೇಲೆ ಈ ಹಿಂದೆ ಅಪಮಾನಕಾರಿ ಸಂದೇಶ ರವಾನಿಸಿ ಮಧ್ಯಂತ್ತರ ಜಾಮೀನು ಪಡೆದಿದ್ದ ರವಿಪ್ರಸಾದ್ ಶೆಟ್ಟಿ, ಪುತ್ತೂರಿನ ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಕೋವಿಡ್ ವಾರಿಯರ್ ಆಗಿರುವ ಡಾ. ದೀಪಕ್ ರೈಯವರು ಕುರಿತು ಮತ್ತದೇ ರೀತಿ ಸಂದೇಶ ರವಾನಿಸಿದ ಆರೋಪ ಎದುರಿಸುತ್ತಿದ್ದು, ದೀಪಕ್ ರೈ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದು, ವಾಟ್ಸಾಪ್‌ನಲ್ಲಿ ಪಾರ್ವಡ್ ಮಾಡಿದ ಮೆಸೇಜುನ್ನು ತಿರುಚಿ ಫೇಸ್‌ಬುಕ್‌ನಲ್ಲಿ ಫಾವರ್ಡ್ ಮಾಡಿದ್ದಾರೆ ಎಂದು ರವಿಪ್ರಸಾದ್ ಶೆಟ್ಟಿ ವಿರುದ್ದ ಆರೋಪಿಸಿದ್ದರು.
ದೂರಿನ ವಿಚಾರಣೆ ನಡೆಸಿದ ನ್ಯಾಯಲಯವೂ ರವಿಪ್ರಸಾದ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಅದೇಶ ನೀಡಿತ್ತು. ಡಾ. ದೀಪಕ್ ರೈ ಅವರ ಪರ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಠಾಣೆ ಪೊಲೀಸರು ಮೇ.15 ರಂದು ಸಂಜೆ ರವಿಪ್ರಸಾದ್ ಶೆಟ್ಟಿಯನ್ನು ಬಂಧಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ವೈದ್ಯಕೀಯ ಸಂಘ ಪುತ್ತೂರು ವಿಭಾಗ ವೈದ್ಯರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧನ ಮಾಡುವಂತೆ ಪೋಲೀಸ್ ಇಲಾಖೆಗೆ ಮನವಿ ಮಾಡಿತ್ತು.


2020ರ ಮಾರ್ಚ್ ತಿಂಗಳಲ್ಲಿ ಡಾ.ದೀಪಕ್ ರೈ ಯವರ ಮೊಬೈಲ್ ಗೆ ಬಂದ ಸಂದೇಶವೊಂದನ್ನು ಕೆಲವು ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿದ್ದರು.

ಮಾ. 21ರಂದು ಡಾ. ದೀಪಕ್ ರೈ ಅವರು ಸಂಜೆ ಕರ್ತವ್ಯದಲ್ಲಿರುವಾಗ ವಿದೇಶದಿಂದ ಬೆದರಿಕೆ ಕರೆ ಬರಲು ಪ್ರಾರಂಭವಾಗಿತ್ತು. ಕರೆಗಳು ಜಾಸ್ತಿಯಾದಗ ದೀಪಕ್ ರೈಯವರು ಪೊಲೀಸರಿಗೆ ದೂರು ನೀಡಿದ್ದರು. ಆದರೇ ನ್ಯಾಯಲಯದ ಮೂಲಕ ಪ್ರಕರಣ ದಾಖಲಿಸುವಂತೆ ಪೊಲೀಸರು ಸೂಚಿಸಿದ್ದರು.

ಅದರಂತೇ ಡಾ.ದೀಪಕ್ ರೈ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು.

ಈ ಸಂಬಂಧ ಇಂದು ಆರೋಪಿ ರವಿಪ್ರಸಾದ್ ಶೆಟ್ಟಿ ಬಂಧನವಾಗಿದ್ದು, ಆರೋಪಿ ಪರವಾಗಿ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಆರೋಪಿಯನ್ನು ನ್ಯಾಯದೀಶರ ಮನೆಗೆ ಕರೆದುಕೊಂಡು ಬಂದಾಗ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನು ಮಂಜೂರು‌ ಮಾಡಿ ನ್ಯಾಯಾಲಯ ಆದೇಶ ಹೊರಡಿತ್ತು. ನಂತರ ಆರೋಪಿಯನ್ನು‌ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.