Friday, September 20, 2024
ಸುದ್ದಿ

Exclusive : ಸಂಘ ಪರಿವಾರದ ಕಟ್ಟಾಳು ಕಿಶೋರ್ ಕುಮಾರ್ ಅವರಿಗೆ ಯಾಕೆ ಟಿಕೆಟ್ ನೀಡಬೇಕು? ವೈರಲ್ ಆಯಿತು ಸಂತೋಷ್ ರೈ ಕೈಕಾರ ಅವರ ಪೋಸ್ಟ್!

ಪುತ್ತೂರು : ಭಾರತೀಯ ಜನತಾಪಕ್ಷದ ಭದ್ರಕೋಟೆ ಪುತ್ತೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹತ್ತಾರು, ಪ್ರಮುಖವಾಗಿ ಹಾಲಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಯುವ ಉದ್ಯಮಿ ಅಶೋಕ್ ರೈ, ಅರುಣ್ ಪುತ್ತಿಲ ಪ್ರಬಲ ಆಕಾಂಕ್ಷಿಗಳು. ಅದರಲ್ಲೂ ಕೆಲವರ ಪರ ಬಿಜೆಪಿ ನಾಯಕರೂ ಬ್ಯಾಂಟಿಗ್ ಆರಂಭಿಸಿದ್ದಾರೆ.

ಈ ಹಿಂದಿನ ಚುನಾವಣಾ ಸಂದರ್ಭದಲ್ಲಿಯೂ, ಈ ಭಾರಿಯೂ ಸಂಘ ಪರಿವಾರದ ಕಾರ್ಯಕರ್ತರು ಭಲವಾಗಿ ಬೆಂಬಿಲಿಸುವ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ದೊರಕಿದೆ. ವಿದ್ಯಾರ್ಥಿ ಪರಿಷತ್ತಿನ ಮೂಲಕ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿದ್ದ ಸಂತೋಷ್ ರೈ ಕೈಕಾರ ಕಿಶೋರ್ ಕುಮಾರ್ ಪರ ಭರ್ಜರಿ ಬ್ಯಾಂಟಿಗ್ ಮಾಡಿದ್ದಾರೆ. ಕಿಶೋರ್ ಅವರಿಗೆ ಯಾಕೆ ಟಿಕೆಟ್ ಕೊಡಬೇಕು ಎಂಬುದಾಗಿ ಅವರು ಬರೆದ ಲೇಖನ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಈಗ ತೀರ್ವ ಚರ್ಚೆಗೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಆಕಾಂಕ್ಷಿ ಅಲ್ಲ! – ಕಿಶೋರ್ ಕುಮಾರ್ ಪುತ್ತೂರು

ಜಾಹೀರಾತು
Kishor Kumar Puttur

ಪ್ರತಿಕಾಗೋಷ್ಠಿಯೊಂದರಲ್ಲಿ ಈ ಹಿಂದೆ ಮಾನಡಿದ್ದ ಕಿಶೋರ್ ಪತ್ರಕರ್ತರು ನೀವೂ ಆಕಾಂಕ್ಷಿಯೇ ಎಂದು ಕೇಳಿದ ಪ್ರಶ್ನೆಗೆ ನಾನು ಆಕಾಂಕ್ಷಿಯಲ್ಲ, ನಾನು ಸಾಮಾನ್ಯ ಕಾರ್ಯಕರ್ತರ ಎಂದು ಹೇಳಿದ್ದು ಅಚ್ಚರಿ ಮೂಡಿಸಿತ್ತು. ಆದರೆ, ಈಗ ಕಾರ್ಯಕರ್ತರು ಮತ್ತು ಸಂಘ ಪರಿವಾರದ ಹಿರಿಯ ಕಾರ್ಯಕರ್ತರು ಸೇರಿದಂತೆ ಹಲವರು ಕಿಶೋರ್ ಕುಮಾರ್ ಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿರುವುದು, ಪಕ್ಷದ ವರಿಷ್ಠರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆಶೋಕ್ ರೈ, ಸಂಜೀವ ಮಠಂದೂರು, ಪುತ್ತಿಲ ಜೊತೆ ಈಗ ಕಿಶೋರ್ ಕುಮಾರ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿರುವದು ಸಹಜವಾಗಿಯೇ ಪಕ್ಷಕ್ಕೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಸಂತೋಷ್ ಕುಮಾರ್ ಕೈಕಾರ ಅವರ ಸಂದೇಶ :

ಬಿ.ಎಸ್. ಯಡಿಯೂರಪ್ಪನವರೊಂದಿಗಿರುವ ಸಂತೋಶ್ ರೈ ಕೈಕಾರ

ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಯಾಕೆ ಟಿಕೆಟ್ ಕೊಡಬೇಕು ಎಂಬುದರ ಬಗ್ಗೆ ನನ್ನ ವಿಮರ್ಶೆ :

ಕಿಶೋರ್ ಯಾವುದೇ ಪ್ರಭಲವಾದ ಜಾತಿಯ ಹಿನ್ನಲೆಯಿಂದ ಬಂದ ವ್ಯಕ್ತಿ ಅಲ್ಲ. ಕಿಶೋರ್ ಗೆ ಯಾವುದೇ ಗಾಡ್ ಫಾದರ್ ಅಥವಾ ಪ್ರಭಾವಿ ವ್ಯಕ್ತಿಯ ಬೆಂಬಲವಿಲ್ಲ. ಕಡು ಬಡವ ಕೃಷಿಕ ಕುಟುಂಬದಲ್ಲಿ ಜನಿಸಿ ತಾನು ಒಂದು ಸಾಮಾನ್ಯ ವರ್ಗದಿಂದ ಬೆಳೆದು ಬಂದು ಉನ್ನತ ಹುದ್ದೆಗೆ ಏರಿದರೂ ಸಂಘ ಪರಿವಾರದ ಕೆಳಮಟ್ಟದ ಕಾರ್ಯಕರ್ತರಲ್ಲಿ ಹುಮ್ಮಸ್ಸನ್ನು ಹುರಿದುಂಭಿಸಿ ಅವರನ್ನು ಮುಂದಕ್ಕೆ ಕರೆದುಕೊಂಡು ಹೋಗುವ ವ್ಯಕ್ತಿ ಎಂದರೆ ನಮ್ಮ ಕಿಶೋರ್ . 1998ರ ಇಸವಿಯಲ್ಲಿ ಸೌಮ್ಯ ಭಟ್ ಪ್ರಕರಣದ ಬಳಿಕ ಸಂಘ ಪರಿವಾರದ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ದಬ್ಬಾಳಿಕೆಯನ್ನು ಅನುಭವಿಸಿ ವಿವಿಧ ಕೇಸುಗಳನ್ನು ತಮ್ಮ ಮೈ ಮೇಲೆ ಎಳೆದುಕೊಂಡು ಜೈಲು ಸೇರಿದಾಗ ಪರಿವಾರದಿಂದ ಹೇಳಿಕೊಳ್ಳುವಂತಹ ನಾಯಕರು ಇಲ್ಲದಿದ್ದ ಸಂದರ್ಭದಲ್ಲಿ ಯುವಕರ ಜೊತೆ ಸೇರಿಕೊಂಡು ತನ್ನ ಮೇಲೆ ಕೂಡ ಕೇಸು ಬಂದಾಗ ಅದಕ್ಕೆ ಅಂಜದೆ ನನ್ನ ಜೊತೆಗೆ ಸಂಘಟನೆಯ ಮುಖ್ಯ ಕೆಲಸವನ್ನು ಮಾಡಿಕೊಂಡು ಹಿಂದುತ್ವವನ್ನು ಎತ್ತಿ ಹಿಡಿದ ವ್ಯಕ್ತಿ ಈ ಕಿಶೋರ್. ಅವನಿಂದ ಪುತ್ತೂರು ಪರಿಸರದದಲ್ಲಿ ತೊಂದರೆ ಆಗುತ್ತದೆ ಎಂದು ಮನಗಂಡ ಅವನ ಅಣ್ಣ (ಸರಕಾರೀ ಉಧ್ಯೋಗಿ) ಅವನನ್ನು ಮಂಗಳೂರಿಗೆ ಕರೆಸಿ ಖಾಸಗಿ ಕಂಪೆನಿಯಲ್ಲಿ ಉಧ್ಯೋಗ ತೆಗೆಸಿಕೊಟ್ಟರೂ ಅಣ್ಣನಿಗೆ ತಿಳಿಯದಂತೆ ಕೆಲವೇ ತಿಂಗಳಿನಲ್ಲಿ ಅದನ್ನು ತ್ಯಜಿಸಿ, ಕೇವಲ ಪುತ್ತೂರಿಗೆ ಸೀಮಿತವಾಗಿದ್ದ ತನ್ನ ಸಂಘಟನಾ ವ್ಯಾಪ್ತಿಯನ್ನು ಮಂಗಳೂರಿನಲ್ಲಿ ಕೂಡ ಮುಂದುವರಿಸಿ ಆಗ ಭಜರಂಗದಳದ ವಿಭಾಗ ಸಂಚಾಲಕರಾಗಿದ್ದ ಪ್ರವೀಣ್ ವಾಲ್ಕೆ ಅವರೊಂದಿಗೆ ಕೈ ಜೋಡಿಸಿ ಸಹ ಸಂಚಾಲಕನಾಗಿ ಜಿಲ್ಲೆಯಲ್ಲಿ ಹಿಂದೂ ಸಂಘಟನೆಯನ್ನು ಬಲಪಡಿಸಲು ಶುರು ಮಾಡಿದರು. ಮಂಗಳೂರಿನಲ್ಲಿ ಆ ಸಮಯ ಗೋ ಕಳ್ಳ ಸಾಗಣೆ ಮಾಮೂಲು ಕೃತ್ಯ ಎಂದಾಗಿತ್ತು. ಅವಾಗ ಅದನ್ನು ಸಂಪೂರ್ಣ ನಿಲ್ಲಿಸಲು ಪಣತೊಟ್ಟ ಗೆಳೆಯ ಕಿಶೋರ್ ಒಂದು ನವ ಯುವಕರ ಪಡೆಯನ್ನು ಕಟ್ಟಿ ಎಲ್ಲೆಲ್ಲಿ ಗೋ ಸಾಗಣೆ ಆಗುತ್ತದೆ ಅದರ ಮಾಹಿತಿಯನ್ನು ಸಂಗ್ರಹಿಸಿ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ರೀತಿ ಹೊರರಾಜ್ಯಗಳಿಂದ ಮಂಗಳೂರಿಗೆ ಬರುತ್ತಿದ್ದ ಗೋವುಗಳನ್ನು ರಕ್ಷಿಸುವಲ್ಲಿ ಸಫಾಲರಾಗಿದ್ದರು. ಗೋ ಕಳ್ಳರಿಗೆ ಕಿಶೋರ್ ಸಿಂಹಸ್ವಪ್ನರಾಗಿದ್ದರು. ಮಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾದ ಹಿರಿಮೆಯನ್ನು ಎತ್ತಿ ಹಿಡಿದ ಕೀರ್ತಿ ನನ್ನ ಮಿತ್ರ ಕಿಶೋರ್ ಕುಮಾರ್ ಪುತ್ತೂರು ಗೆ ಸೇರುತ್ತದೆ. ಏಕೆಂದರೆ ಎರಡು ಬಾರಿ ಜಿಲ್ಲೆಯ ಅಧ್ಯಕ್ಷನಾಗಿದ್ದಾಗ ಕಿಶೋರ್ ಇಡೀ ಜಿಲ್ಲೆಯ ಪ್ರವಾಸ ಮಾಡಿ ಎಲ್ಲಾ ಯುವಸಮುದಾಯವನ್ನು ಭೇಟಿ ಮಾಡಿ ಅವರಲ್ಲಿನ ದೇಶಪ್ರೇಮವನ್ನು ಹುರಿದುಂಭಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಮೊರ್ಚಾವನ್ನು ಪ್ರಭಲವಾಗಿ ನೆಲೆವೂರುವಂತೆ ಮಾಡಿದ್ದು ಕಿಶೋರ್ ಕುಮಾರ್. ಇದನ್ನು ನೋಡಿ ಭಾರತೀಯ ಜನತಾ ಪಕ್ಷದ ಮುಖಂಡರು ಕಿಶೋರ್ ಅವರನ್ನು ರಾಜ್ಯ ಯುವ ಮೋರ್ಚಾದ ಉಪಾಧ್ಯಕ್ಷನಾಗಿ ನೇಮಕ ಮಾಡಿದರು.ಕಳೆದ ಕರ್ನಾಟಕದ ವಿಧಾನಸಭೆಯ ಚುನಾವಣೆಯಲ್ಲಿ ಕಿಶೋರ್ ಕುಮಾರ್ ಗೆ ಸೀಟು ಸಿಗದಿದ್ದಾಗ ಶಕುಂತಲಾ ಶೆಟ್ಟಿ ಅವರು ತಮ್ಮ ಜೊತೆ ಸೇರಿಕೊಳ್ಳಲು ಹೇಳಿದಾಗ ಅದನ್ನು ನಯವಾಗಿ ತಿರಸ್ಕರಿಸಿದ ಕಿಶೋರ್ “ಅಕ್ಕಾ, ನಾನು ಹುಟ್ಟಿದ್ದು ಹಿಂದುತ್ವಕ್ಕಾಗಿ, ಬಿಜೆಪಿ ಎಂದರೆ ಹಿಂದುತ್ವ, ಯಾವುದೇ ಕಾರಣಕ್ಕೂ ನಾನು ನನ್ನ ಧರ್ಮಕ್ಕೆ ಮೋಸ ಮಾಡಲಾರೆ” ಎಂದು ಬಿಜೆಪಿ ಪರವಾಗಿ ನಿಂತು ಪ್ರಚಾರ ಮಾಡಿದಾಗ ನನ್ನ ಗೆಳೆಯನ ಮೇಲಿನ ಅಭಿಮಾನ ನನಗೆ ತುಂಬಾ ಹೆಚ್ಚಾಯಿತು, ಅದರಂತೆ ಈ ಬಾರಿ ಪುತ್ತೂರಿನಲ್ಲಿ ನನ್ನ ಗೆಳೆಯ ಕಿಶೋರ್ ಏಕೆ ಬರಬೇಕು ಎಂದರೆ ಈತನಿಗೆ ಯಾವುದೇ ಪ್ರಭಾವಿ ವ್ಯಕ್ತಿಯ ಬೆಂಬಲ ಇಲ್ಲ. ಹಣಬಲವಂತು ಇಲ್ಲವೇ ಇಲ್ಲ, ಇವೆರಡು ಇಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರುವುದು ಅಸಾಧ್ಯ. ಆದರೆ ಪುತ್ತೂರಿನಲ್ಲಿ ಈಗ ನಡೆಯುತ್ತಿರುವ ಜಾತಿ ರಾಜಕೀಯದಿಂದ ಭಾರತೀಯ ಜನತಾ ಪಾರ್ಟಿಗೆ ಅತ್ಯಂತ ದೊಡ್ಡ ಹೊಡೆತ ಬೀಳುತ್ತದೆ. ಇದನ್ನು ಗಮನದಲ್ಲಿ ಇಟ್ಟರೆ ಕಿಶೋರ್ ಎಲ್ಲಾ ಜಾತಿಯ ಭಾಂದವರ ಜೊತೆಗೆ ಒಳ್ಳೆಯ ಒಡನಾಟದಲ್ಲಿದ್ದು ಎಲ್ಲರ ಜೊತೆಗೆ ಆತ್ಮೀಯತೆಯನ್ನು ಹೊಂದಿದ್ದಾರೆ. ಜೊತೆಗೆ ಹಿಂದುತ್ವದ ಧ್ಯೋತಕ ಕೂಡ ಹೌದು. ಆದುದರಿಂದ ನನ್ನ ಮತ್ತು ನನ್ನಂತ ಯುವಕರ ಆಶಯ ಏನೆಂದರೆ ಈ ಬಾರಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಯಾವುದೇ ಜಾತಿ ಮತ ಮುಖ ನೋಡದೆ ಹಿಂದುತ್ವದ ಧ್ಯೋತಕವಾಗಿ ಕಿಶೋರ್ ಕುಮಾರ್ ಗೆ ಟಿಕೆಟ್ ಕೊಟ್ಟು ಅವರನ್ನು ಗೆಲ್ಲಿಸಲು ಮುಂದೆ ಬರಬೇಕು ಎನ್ನುವುದು ನನ್ನ ಅನಿಸಿಕೆ.

– ಸಂತೋಷ್ ರೈ ಕೈಕಾರ

ವರದಿ : ರಮೇಶ್ ಚಂದ್ರ, ರಾಜಕೀಯ ವಿಭಾಗ, ಕಹಳೆ ನ್ಯೂಸ್