Friday, September 20, 2024
ಸುದ್ದಿ

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ; ಬೌದ್ಧರು ಮತ್ತು ಮುಸ್ಲಿಂ ನಡುವೆ ಸಂಘರ್ಷ – ಕಹಳೆ ನ್ಯೂಸ್

ಶ್ರೀಲಂಕಾ : ಶ್ರೀಲಂಕಾದ ಕ್ಯಾಂಡಿಯಲ್ಲಿ ಬೌದ್ಧರು ಮತ್ತು ಮುಸ್ಲಿಂ ಸಮುದಾಯದ ನಡುವೆ ಹಿಂಸಾಚಾರ ಭುಗಿಲೆದ್ದ ಹಿನ್ನಲೆಯಲ್ಲಿ ಶ್ರೀಲಂಕಾ ಸರಕಾರ ರಾಜ್ಯಾದ್ಯಾಂತ 10 ದಿನಗಳ ತುರ್ತುಪರಿಸ್ಥಿತಿ ಘೋಷಣೆ ಮಾಡಿದೆ. ಮುಸ್ಲಿಮರು ಬಲವಂತದ ಮತಾಂತರ ಹಾಗೂ ಬೌದ್ಧರ ಪ್ರಾಚೀನ ಸ್ಥಳಗಳನ್ನು ಧ್ವಂಸ ಮಾಡುತ್ತಿದ್ದಾರೆಂದು ಆರೋಪಿಸಿದ್ದ ಬೌದ್ಧ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಕೋಮು ಹಿಂಸಾಚಾರದ ಹಿನ್ನಲೆಯಲ್ಲಿ ಮಂಗಳವಾರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ, ದೇಶದ ವಿವಿಧ ಭಾಗದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರವನ್ನು ಮಟ್ಟಹಾಕಲೆಂದು 10 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವಕ್ತಾರ ದಯಾಸಿರಿ ಜಯಸೇಕರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಮತಾಂತರ ಹಾಗೂ ಬೌದ್ದ ಪ್ರಾಚೀನ ಪವಿತ್ರ ಸ್ಥಳಗಳನ್ನು ಮುಸ್ಲಿಂರು ದ್ವಂಸಗೊಳಿಸುತ್ತಿದ್ದಾರೆಂದು ಕಳೆದ ಹಲವು ತಿಂಗಳುಗಳಿಂದ ಬೌದ್ಧ ಮತ್ತು ಮುಸ್ಲಿಂ ಸಮುದಾಯದ ನಡುವೆ ಸಂಘರ್ಷಗಳು ನಡಿತಾ ಇದ್ದು ಇತ್ತೀಚೆಗೆ ಈ ಗಲಭೆಗಳು ಭುಗಿಲೆದ್ದಿದೆ. ಇದರೊಂದಿಗೆ ಮ್ಯಾನ್ಮಾರ್ ನ ರೋಹಿಂಗ್ಯಾ ಮುಸ್ಲಿಮರು ಶ್ರೀಲಂಕಾದಲ್ಲಿ ಠಿಕಾಣಿ ಹೂಡಿರುವುದಕ್ಕೂ ಕೆಲವು ಬೌದ್ಧರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.

ಜಾಹೀರಾತು