Monday, January 27, 2025
ಸುದ್ದಿ

ಕ್ವಾರಂಟೈನ್ ಅವಧಿಯಲ್ಲೇ ಗಂಡ – ಮಗವಿಗೆ ಕೈಕೊಟ್ಟು ಪ್ರಿಯಕರನ ಜೊತೆ ಓಡಿಹೋದ ಕೈಕಂಬದ ಮುಬೀನಾ – ಕಹಳೆ ನ್ಯೂಸ್

ಕಾರ್ಕಳ ಮೇ.21 : ಹೋಂ ಕ್ವಾರಂಟೈನ್ ನಲ್ಲಿದ್ದ ವಿವಾಹಿತ ಮಹಿಳೆ ಕ್ವಾರಂಟೈನ್‌ ಅವಧಿ ಮುಗಿಯುತ್ತಾಲೇ ಹಳೇ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ . ಅಜೆಕಾರು ಕೈಕಂಬ ನಿವಾಸಿ ಮುಬೀನಾ (28)‌ಎಂಬುವರು ಪರಾರಿಯಾದ ಮಹಿಳೆ

ನಾಪತ್ತೆಯಾದ ಮುಬೀನಾ 8 ವರ್ಷದ ಹಿಂದೆ ಉದ್ಯಾವರದ ಸಾಜಿದ್‌ ಎಂಬಾತನೊಂದಿಗೆ ವಿವಾಹವಾಗಿದ್ದರು. ಬಳಿಕ ಅವರು ಪುಣೆಯ ಲೋನಾವಲದಲ್ಲಿ ನೆಲೆಸಿದ್ದರು. ದಂಪತಿಗಳಿಗೆ 8 ವರ್ಷದ ಮಗಳು ಇದ್ದಾಳೆ. ಆದರೇ ಕೌಟುಂಬಿಕ ಮನಸ್ತಾಪದಿಂದ ಮುಬೀನಾ ತನ್ನ ಮಗಳ ಜೊತೆ ತವರೂರಾದ ಕಾರ್ಕಳ ತಾಲೂಕಿನ ಮಾರ್ನೆಗೆ ಆಗಮಿಸಿ ವಾಸಿಸುತಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚಿಗೆ ಮಂಗಳೂರಿಗೆ ಮದುವೆಗೆ ಹೋದ ಕಾರಣಕ್ಕೆ ಈ ಮಹಿಳೆ ತಾಯಿ ಮತ್ತು ಸಹೋದರನ ಜೊತೆ ಹೋಂ ಕ್ವಾರಂಟೈನ್ ಆಗಿದ್ದರು. ಹೋಂ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದಂತೆ ತನ್ನ ಹಳೇ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.ಮುಬಿನಾ ಕಾಣೆಯಾದ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದೀಗ ಮೊಬಿನಾ ಪತ್ತೆಯಾಗಿದ್ದಾಳೆ, ಆಕೆಯನ್ನು ಪೋಷಕರ ಜೊತೆಗೆ ಕಳುಹಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು