ಲಾಕ್ ಡೌನ್ ವೇಳೆ ಸ್ನೇಹಿತನ ಮನೆಯಲ್ಲಿ ಅಶ್ರಯ ಪಡೆದಿದ್ದ ವ್ಯಕ್ತಿ ಸ್ನೇಹಿತನ ಪತ್ನಿಯೊಂದಿಗೆ ಪರಾರಿ – ಕಹಳೆ ನ್ಯೂಸ್
ಕೊಚ್ಚಿ: ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿರುವ ಕೊರೋನಾ ವೈವಾಹಿಕ ಸಂಬಂಧಗಳಿಗೆ ಕುತ್ತು ತರುತ್ತಿದೆ. ಕೇರಳದಲ್ಲಿ ನಡೆದಿರುವ ಘಟನೆಯೊಂದು ಎಲ್ಲರಿಗೂ ಆಘಾತ ಉಂಟು ಮಾಡಿದೆ. ಲಾಕ್ ಡೌನ್ ವೇಳೆ ಸ್ನೇಹಿತನ ಮನೆಯಲ್ಲಿ ಅಶ್ರಯ ಪಡೆದಿದ್ದ ವ್ಯಕ್ತಿ ಸ್ನೇಹಿತನ ಪತ್ನಿಯೊಂದಿಗೆ ಪರಾರಿಯಾಗಿದ್ದಾನೆ.
ಇಡುಕ್ಕಿ ಜಿಲ್ಲೆಯ 32 ವರ್ಷದ ಲೋಥಾರಿಯೋ ಎರ್ನಾಕುಲಂ ನಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿ, ಮಾರ್ಚ ತಿಂಗಳಲ್ಲಿ ಲಾಕ್ ಡೌನ್ ಆರಂಭವಾದ ವೇಳೆ 20 ವರ್ಷದ ನಂತರ ತನ್ನ ಬಾಲ್ಯ ಸ್ನೇಹಿತನ ಸಂಪರ್ಕ ಸಿಕ್ಕಿತು.
ಸ್ನೇಹಿತನಿಗೆ ಕರೆ ಮಾಡಿ ಮಾತನಾಡಿದ ವ್ಯಕ್ತಿ ಸ್ನೇಹಿತನ ಮನೆಗೆ ಆಗಮಿಸಿದ. ಸ್ನೇಹಿತನಿಗೆ ಏಪ್ರಿಲ್ ಅಂತ್ಯದವರೆಗೂ ಊಟ ವಸತಿ ನೀಡಿದ್ದ. ಆದರೆ ಎಷ್ಚು ದಿನವಾದರೂ ಸ್ನೇಹಿತ ಮನೆ ಬಿಟ್ಟು ತೆರಳದಿದ್ದಾಗ ಆತನಿಗೆ ಸಂಶಯ ಮೂಡಿತ್ತು. ಕಳೆದ ವಾರ ಇಬ್ಬರು ಮಕ್ಕಳ ಜೊತೆ ಸ್ನೇಹಿತ ಮತ್ತು ತನ್ನ ಪತ್ನಿ ಓಡಿಹೋಗಿರುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನೊಂದ ಪತಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು, ಕಳೆದ ವಾರ ಮಕ್ಕಳೊಂದಿಗೆ ಇಬ್ಬರು ಪೊಲೀಸರ ಮುಂದೆ ಹಾಜರಾಗಿದ್ದಾರೆ. ಪೊಲೀಸರ ಮುಂದೆ ಹಾಜರಾದ ಮಹಿಳೆ ತಾನು ಪತಿಯ ಸ್ನೇಹಿತನ ಜೊತೆಯೇ ಇರುವುದಾಗಿ ತಿಳಿಸಿದ್ದಾಳೆ,