Saturday, January 25, 2025
ಸುದ್ದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವೇಳೆ ಪುರಾತನ ಕಾಲದ ವಿಗ್ರಹಗಳು ಪತ್ತೆ-ಕಹಳೆ ನ್ಯೂಸ್

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಅಗೆಯುವಾಗ ಶಿವನ ವಿಗ್ರಹ ಸೇರಿದಂತೆ ಹಲವು ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

ಸುಪ್ರೀಂ ಕೋರ್ಟ್ ನೀಡಿದ ಆದೇಶದನ್ವಯ ಕೇಂದ್ರ ಸರಕಾರ ರಚಿಸಿದ ಸಮಿತಿ ನಿರ್ಧಾರದಂತೆ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಕ್‌ಡೌನ್ ಘೋಷಣೆಯಾದುದರಿಂದ ಎಲ್ಲಾ ಕಾರ್ಯಗಳು ಸ್ಥಗಿತಗೊಂಡಿದ್ದವು. ಆದರೀಗ ಲಾಕ್‌ಡೌನ್ ನಡುವೆ 67 ಎಕರೆ ವಿಸ್ತೀರ್ಣದ ಶ್ರೀರಾಮ ಜನ್ಮಭೂಮಿ ಪರಿಸರದಲ್ಲಿ ಉತ್ಖನನ ಹಾಗೂ ಇನ್ನಿತರ ಕಾರ್ಯಗಳು ಆರಂಭವಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶೀಘ್ರದಲ್ಲೇ ಈ ಇಡೀ ಪ್ರದೇಶವನ್ನು ಸಮತಟ್ಟುಗೊಳಿಸಿ ಭೂಮಿ ಪೂಜೆ ಕಾರ್ಯ ನಡೆಯಲಿದೆ. ಆದರೀಗ ಅಗೆಯುವ ಹಾಗೂ ಈ ಭೂಮಿ ಸಮತಟ್ಟು ಮಾಡುವ ಪ್ರಕ್ರಿಯೆ ವೇಳೆ ಅನೇಕ ಪುರಾತನ ಮೂರ್ತಿ ಹಾಗೂ ಮಂದಿರದ ಅವಶೇಷಗಳು ಲಭ್ಯವಾಗಿವೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯಸ್ಥ ಚಂಪತ್ ರಾಯ್ ಪ್ರತಿಕ್ರಿಯಿಸಿದ್ದು ‘ಜಿಲ್ಲಾಧಿಕಾರಿ ಎ.ಕೆ. ಝಾ ಅನುಮತಿ ಮೇರೆಗೆ ರಾಮ ಮಂದಿರ ನಿರ್ಮಾಣ ಕಾರ್ಯದ ಕೆಲಸಗಳು ವೇಗವಾಗಿ ನಡೆಯುತ್ತಿವೆ.

ಈ ಪ್ರದೇಶ ಸಮತಟ್ಟುಗೊಳಿಸುವಾಗ ಹಾಗೂ ಇಲ್ಲಿ ಹಾಕಲಾಗಿರುವ ಬ್ಯಾರಿಕೇಡ್‌ಗಳನ್ನು ತೆಗೆಯುವ ಕಾರ್ಯವೂ ಭರದಿಂದ ಸಾಗಿದೆ. ಇಲ್ಲಿ ಕೆಲಸ ನಿರ್ವಿಸುವವರು ಲಾಕ್‌ಡೌನ್ ಹಾಗೂ ಕೊರೋನಾ ನಿಯಂತ್ರಿಸುವ ಸಲುವಾಗಿ ಹೇರಲಾಗಿರುವ ನಿಯಮಗಳನ್ನು ಪಾಲಿಸುತ್ತಿದ್ದು, ಮಾಸ್ಕ್ ಧರಿಸುವುದರೊಂದಿಗೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಇಷ್ಟೇ ಅಲ್ಲದೇ ಸಮತಟ್ಟುಗೊಳಿಸಲು ಭೂಮಿ ಅಗೆಯುತ್ತಿದ್ದು, ಇದಕ್ಕಾಗಿ ಮೂರು ಜೆಸಿಬಿ, ಒಂದು ಕ್ರೇನ್, ಡೆರಡು ಟ್ರ್ಯಾಕ್ಟರ್ ಹಾಗೂ ಹತ್ತು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇ. 11 ರಿಂದ ಈ ಕಾರ್ಯ ನಡೆಯುತ್ತಿದ್ದು, ಹೈಕೋರ್ಟ್‌ ಆದೇಶದ ಮೇರೆಗೆ ಇಲ್ಲಿ ಎಎಸ್‌ಐ ಉತ್ಖನನ ಕಾರ್ಯ ನಡೆಸಿದ್ದಾರೆ.

ಆ ವೇಳೆ ಅಲ್ಲಿ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಅವಶೇಷಗಳು, ದೇವಿ ದೇವತೆಯ ತುಂಡಾದ ಮೂರ್ತಿಗಳು, ಪುಷ್ಪ ಕಲಶ ಮೊದಲಾದ ಕಲಾಕೃತಿಗಳು ಸಿಕ್ಕಿವೆ. ಈವರೆಗೂ ಏಳು ಬ್ಲ್ಯಾಕ್‌ ಟಚ್‌ ಸ್ಟೋನ್‌ನ ಸ್ಥಂಭ, ಆರು ರೆಡ್‌ ಸ್ಯಾಂಡ್‌ ಸ್ಟೋನ್ ಸ್ಥಂಭ, ಹಾಗೂ ಐದು ಅಡಿ ಎತ್ತರದ ಶಿವಲಿಂಗ ಸೇರಿ ಅನೇಕ ಪುರಾತನ ಅವಶೇಷಗಳು ಸಿಕ್ಕಿವೆ ಎಂದಿದ್ದಾರೆ.

ಇದೇ ವೇಳೆ ಪ್ರತಿಕ್ರಿಯಿಸಿದ ರಾಮಲಲ್ಲಾ ಮಂದಿರದ ಅರ್ಚಕ ಸತ್ಯೇಂದ್ರ ದಾಸ್ ‘ಜೆಸಿಬಿ ಮೂಲಕ ಯಂತ್ರಗಳ ಸಹಾಯದಿಂದ ಮುಖ್ಯ ಗರ್ಭಗುಡಿ ನಿರ್ಮಿಸುವ ಸ್ಥಳ ಹಾಗೂ ಆಸುಪಾಸಿನ ಪ್ರದೇಶ ಸಮತಟ್ಟುಗೊಳಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಬಹಳಷ್ಟು ಸಮಯ ತಗುಲುತ್ತದೆ’ ಎಂದಿದ್ದಾರೆ.