ಪುತ್ತೂರು: ಅಖಿಲಾ ಪಜಿಮಣ್ಣು. ಈ ಹೆಸರು ಸಂಗೀತ ಲೋಕದಲ್ಲಿ ಚಿರಪರಿಚಿತ ಹೆಸರು. ಪುತ್ತೂರಿನ ಹೆಸರನ್ನು ಹತ್ತೂರಿನಲ್ಲಿ ಪಸರಿಸಿದ ಹಿರಿಮೆಯ ಜೊತೆಗೆ ಕಲರ್ಸ್ ಕನ್ನಡದ ಕನ್ನಡ ಕೋಗಿಲೆ ಯಲ್ಲಿ ಸಂಗೀತ ದಿಗ್ಗಜರಾದ ಸಾಧುಕೋಕಿಲಾ, ಚಂದನ್ ಶೆಟ್ಟಿ, ಅರ್ಚನಾ ಉಡುಪರಿಂದ ಶಹಬ್ಬಾಸ್ ಗಿರಿ ಪಡೆದು, ದೇಶ-ವಿದೇಶದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ಮುತ್ತಿನ ಊರಿನ ಹುಡುಗಿ ಈಕೆ.
ತನ್ನ ಸ್ವರ ಮಾಧುರ್ಯದ ಜೊತೆಗೆ ದೃಶ್ಯ ಚಿತ್ತಾರದ ಸೊಬಗನ್ನೂ ಕಾಣುವಂತಾಗಲು, ಗಾಯನದ ದೃಶ್ಯಗಳನ್ನು ಸೆರೆಹಿಡಿದು ಕವರ್ ಸಾಂಗ್ ಮೂಲಕ ಈಗ ಗಮನ ಸೆಳೆಯುತ್ತಿದ್ದಾರೆ. ಕಳೆದ ಎಪ್ರಿಲ್ ನಲ್ಲಿ ಅವರು ಪ್ರಸ್ತುತ ಪಡಿಸಿದ್ದ ‘ಸಂಗಾತಿ ನಿನ್ನ’ ಕವರ್ ಸಾಂಗ್ ಹಾಡು ಯುಟ್ಯೂಬ್ ಚಾನೆಲ್ನಲ್ಲಿ ಈವರೆಗೆ 6ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಪ್ರಸ್ತುತ ಎರಡನೇ ಕವರ್ ಸಾಂಗ್ ಆಗಿರುವ ‘ಈ ಸುಂದರ ಬೆಳದಿಂಗಳ’ ಹಾಡು ಮೇ 22 ರಂದು ಸಂಜೆ 5 ಗಂಟೆಗೆ ಮೂಡಿಬರಲಿದೆ. ಅಖಿಲಾ ಪಜಿಮಣ್ಣುರವರ ಅಧಿಕೃತ ಯುಟ್ಯೂಬ್ ಚಾನೆಲ್ Akhila pajimannu officialನಲ್ಲಿ ಈ ಕವರ್ ಸಾಂಗ್ ಯಾವತ್ತೂ ನೋಡಬಹುದಾಗಿದೆ.