ನಾನು ಯಾರನ್ನು ತಬ್ಬಿಕೊಂಡು ಮುತ್ತುಕೊಟ್ಟಿಲ್ಲ : ರಾಜೀನಾಮೆ ಕೊಡಿ ಎಂದ ಸಿದ್ದರಾಮಯ್ಯಗೆ ಮಾಧುಸ್ವಾಮಿ ಟಾಂಗ್ – ಕಹಳೆ ನ್ಯೂಸ್
ತುಮಕೂರು: ನಿನ್ನೆ ಕೋಲಾರದಲ್ಲಿ ನಡೆದ ಪ್ರಕರಣಕ್ಕೆ ಸಂಬಂದಿಸಿದಂತೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಚಿಂತಾಮಣಿಯಲ್ಲಿ ಕೆರೆಗೆ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಆ ಭಾಗಕ್ಕೆ ನೀರು ಸಿಕ್ತಿಲ್ಲ ಎಂಬ ಕಾರಣ ಪರಿಶೀಲನೆಗಾಗಿ ಅಲ್ಲಿಗೆ ತೆರಳಿದ್ವಿ. ಆದರೆ ಆ ಮಹಿಳೆ ರೈತಸಂಘದವರೆಂದು ಗೊತ್ತಿರಲಿಲ್ಲ, ನಾನು ನನ್ನ ಸೆಕ್ರೆಟರಿಯವರಿಗೆ ಉತ್ತರ ಹೇಳಿ ಎಂದು ಹೇಳಿದ್ದೆ ಆಗಲೂ ಹೈ ಟೋನ್‌ನಲ್ಲಿ ಏನ್ರಿ ಮಾಡ್ತಿದ್ದೀರಾ ಏನ್ರಿ ಮಾಡ್ತಿದ್ದೀರಾ ಅಂತ ಹೇಳಿದ್ರು. ಅದ್ಕೆ ಮುಚ್ಚಮ್ಮ ಬಾಯಿ ರಾಸ್ಕಲ್ ಅಂತ ಹೇಳಿದೆ. ಆದೇಶ ಕೊಡಲಿಕ್ಕೆ ಬರಬೇಡ ರಿಕ್ವೆಸ್ಟ್ ಮಾಡಿ ಎಂದೆ ಎಂದು ಸಚಿವರು ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದರು.
ಇನ್ನೂ ನಿನ್ನೆ ಘಟನೆಗೆ ವಿಚಾರವಾಗಿ ಆ ಊರಿಗೆ ನಾವು ಬಾಯಿಗೆ ಬಂದಹಾಗೆ ಬೈಸಿಕೊಳ್ಳಲಿಕ್ಕೆ ಹೋಗಿದ್ದವಾ ಎಂದು ಪ್ರಶ್ನಿಸಿದರು. ಇನ್ನೂ 130 ಎಕರೆ ಒತ್ತುವರಿಯಾಗಿದೆ ಎಂದರು, ಏನಮ್ಮ ಈ ಪ್ರಶ್ನೆ ನನ್ನ ಕೇಳ್ತಿಯ ಅಂತ ನಾನು ಕೇಳ್ದೆ. ಏನ್ರಿ ಮಾಡ್ತಿದಿರಿ ಅಂತ ನನ್ನನ್ನೇ ಏರು ಧ್ವನಿಯಲ್ಲಿ ಕೇಳಿದ್ರು. ನನಗೂ ಸ್ವಾಭಿಮಾನವಿದೆ. ನೋಡಮ್ಮ ನಾನು ಕೆಟ್ಟವನ್ನು ನೀನು ಸ್ವಲ್ಪ ರಿಕ್ವೆಸ್ಟ್ ಮಾಡಿಕೊಬೇಕು. ಈ ರೀತಿ ಆದೇಶ ಕೊಡಲಿ ಅಂತ ಬಂದಿಲ್ಲ. ಅಲ್ಲಿ ಅವರು ಏರುದ್ವನಿಯಲ್ಲಿ ಮಾತನಾಡಿದರು. ಪ್ರತಿ ಸರಿಯೂ ಈ ಯಮ್ಮನದು ಅದೇ ಕೆಲಸವಂತೆ. ಪ್ರತಿಯೊಬ್ಬ ರಾಜಕೀಯ ನಾಯಕರಿಗೂ ಇದೇ ರೀತಿ ಮಾಡ್ತಾರೆ. ಈ ಗಲಾಟೆ ನಡೆಯಬಾರದಿತ್ತು ಎಂದು ಸಚಿವ ಮಾಧು ಸ್ವಾಮಿ ಪ್ರತಿಕ್ರಿಯಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿಎಂ ಸಿದ್ದರಾಮಯ್ಯರ ಹೆಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಸಿದ್ದರಾಮಯ್ಯ ಹೇಳಿದಂತೆ ರಾಜೀನಾಮೆ ಕೊಡಲು ನಾನು ಸಿದ್ಧನಿಲ್ಲ, ನನ್ನನ್ನ ಯಾರೂ ತಬ್ಬಿಕೊಂಡು ಮುತ್ತು ಕೊಟ್ಟಿಲ್ಲ, ನಾನು ರಾಜೀನಾಮೆ ಕೊಡುವ ಸ್ಥಿತಿ ನಿರ್ಮಾಣ ಆಗಲ್ಲ ಅಂತ ಸಿದ್ದರಾಮಯ್ಯಗೆ ಹೇಳಿ ಎಂದು ಪ್ರತಿಕ್ರಿಯೆ ನೀಡಿದರು. ಒಂದು ಮನುಷ್ಯನಿಗೆ ಹೇಳಿದರೆ ಅಥವಾ ಜಾತಿಗೆ, ಲಿಂಗಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ, ನಾನು ಸ್ವಾಭಿಮಾನಿ, ನನ್ನ ನಾಯಕರು ಕರೆದು ರಾಜೀನಾಮೆ ಕೇಳಿದ್ರೆ ಒಂದು ಕ್ಷಣವೂ ಸುಮ್ಮನಿರೋದಿಲ್ಲ, ಹೆಣ್ಣುಮಕ್ಕಳ ಮನಸ್ಸಿಗೆ ನೋವಾಗಿದ್ರೆ ಅಪಾಲಜಿ ಕೇಳುತ್ತೇನೆ, ಅಲ್ಲಿನ ಸ್ಥಳೀಯರು ಹೇಳುವ ಹಾಗೆ ಆಯಮ್ಮನ ನೇಚರ್ ಅಂತಹದ್ದು, ನನಗೇನು ಅದು ಕೆಟ್ಟಪದ ಎಂದು ತಿಳಿದುಕೊಂಡಿಲ್ಲ ಎಂದು ತುಮಕೂರಿನಲ್ಲಿ ಸಚಿವ ಮಾಧುಸ್ವಾಮಿ ನಿನ್ನೆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದರು.