Big News : ಸಾಲದ ಕಂತು ಪಾವತಿಸಲು ಮತ್ತೆ ಮೂರೂ ತಿಂಗಳು ವಿನಾಯಿತಿ ; ಸಾಲದ ಮೇಲಿನ ಬಡ್ಡಿ ಇಳಿಕೆ – RBI ಗವರ್ನರ್ ಶಕ್ತಿಕಾಂತ್ ಘೋಷಣೆ – ಕಹಳೆ ನ್ಯೂಸ್
ಸಾಲದ ಮೇಲಿನ ಬಡ್ಡಿ ಇಳಿಕೆ
ನವದೆಹಲಿ: ಕೊರೊನಾ ಲಾಕ್‍ಡೌನ್‍ನಿಂದ ಇಡೀ ದೇಶವೇ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾಲದ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದೆ.
ಇಂದು ಆರ್‌ಬಿಐ ಮುಖ್ಯಸ್ಥ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿ, ಸಾಲದ ಮೇಲಿನ ಕಂತು ಕುಟ್ಟುವ ಅವಧಿ ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ. ಎಲ್ಲಾ ರೀತಿಯ ಸಾಲದ ಇಎಂಐ ಕಟ್ಟಲು ಆಗಸ್ಟ್ 31ರವರೆಗೂ ಅವಧಿಯನ್ನು ವಿಸ್ತರಣೆ ಮಾಡಿದೆ.
ಆರ್‌ಬಿಐ ರೆಪೋ ದರ 40 ಬೇಸಿಸ್ ಅಂಕದಷ್ಟು ಕಡಿತ ಮಾಡಿದೆ. ಈ ಮೂಲಕ ಶೇ. 4.4ರಿಂದ ಶೇ.4ಕ್ಕೆ ಇಳಿಕೆಯಾಗಿದೆ.
ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲಿನ ಬಡ್ಡಿ ಇಳಿಕೆ ಮಾಡಿದೆ. ರಿವರ್ಸ್ ರೆಪೋ ದರ ಶೇ.3.35ಕ್ಕೆ ಇಳಿಕೆ ಮಾಡಿದೆ. ರಿವರ್ಸ್ ರೆಪೋ ದರ ಶೇ. 3.35 ಇಳಿಕೆಯಿಂದ ಬ್ಯಾಂಕುಗಳಿಗೆ ಪ್ರಯೋಜನವಾಗಲಿದೆ.
ಅಷ್ಟೇ ಅಲ್ಲದೇ ಆರ್‌ಬಿಐ ಮತ್ತಷ್ಟು ಹಣಕಾಸು ನೆರವು ನೀಡಿದೆ. ಇನ್ನೂ ಮೂರು ತಿಂಗಳು ಎಸ್‍ಬಿಐ ಸೇರಿ ಅನೇಕ ಸಂಸ್ಥೆಗಳಿಗೆ ನೆರವು ಘೋಷಿಸಿದೆ.
ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ರೂಪಾಯಿ ಮೊತ್ತದ ಆರ್ಥಿಕ ಪ್ಯಾಕೇಜ್ ಫೋಷಿಸಿದ ನಂತರ ಇದೇ ಮೊದಲ ಬಾರಿಗೆ ಆರ್‌ಬಿಐ ಗವರ್ನರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ರೆಪೋ ದರ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು.
ರಿವರ್ಸ್ ರೆಪೋ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್‌ಬಿಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್ ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ