Thursday, January 23, 2025
ಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಕೊರೊನಾ ಪಾಸಿಟಿವ್ ; ಬೆಳ್ತಂಗಡಿ ಮಹಿಳೆಗೆ ಸೋಂಕು ದೃಢ – ರಾಜ್ಯದಲ್ಲಿ 105 ಮಂದಿಗೆ ಸೋಂಕು – ಕಹಳೆ ನ್ಯೂಸ್

ಬೆಂಗಳೂರು : ಕರ್ನಾಟಕದ ಪಾಲಿಗೆ ಇಂದು ಕರಾಳ ಶುಕ್ರವಾರ. ಇಂದು ಬರೋಬ್ಬರಿ 105 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದೆ.

ನಿನ್ನೆ ರಾಜ್ಯದಲ್ಲಿ ನಿನ್ನೆ ರಾಜ್ಯದಲ್ಲಿ ಬರೋಬ್ಬರಿ 143 ಮಂದಿಗೆ ಕೊರೊನಾ ಸೋಂಕು ದಾಖಲಾಗಿದ್ದರೆ, ಇಂದು ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಶತಕದ ಗಡಿದಾಟಿದೆ. ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರ ಕ್ಷೇತ್ರಕ್ಕೆ ಕೊರೊನಾ ಬಿಗ್ ಶಾಕ್ ಕೊಟ್ಟಿದೆ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಇಂದು ಬರೋಬ್ಬರಿ 45 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಳಿದಂತೆ ಮಲೆನಾಡಿನ ಹಾಸನ ಜಿಲ್ಲೆಯಲ್ಲಿಯೂ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಿದೆ. ಇಂದು ಹಾಸನದಲ್ಲಿ 14 ಮಂದಿಗೆ ಕೊರೊನಾ ಸೋಂಕಯ ಕಾಣಿಸಿಕೊಂಡಿದೆ. ಉಳಿದಂತೆ ತುಮಕೂರಿನಲ್ಲಿ 8, ಬೀದರ್ ನಲ್ಲಿ 6, ಚಿಕ್ಕಮಗಳೂರು 5, ಬೆಂಗಳೂರು ನಗರ 5, ಬೆಂಗಳೂರು ಗ್ರಾಮಾಂತರ 4, ಮಂಡ್ಯ 3, ದಾವಣಗೆರೆ 3, ಹಾವೇರಿ 3, ಚಿತ್ರದುರ್ಗ 1, ದಕ್ಷಿಣ ಕನ್ನಡ 1 , ಬಾಗಲಕೋಟೆ 1, ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಂಬೈನಿಂದ ಬಂದಿದ್ದವರೇ ಇದೀಗ ಆತಂಕವನ್ನು ತಂದೊಡ್ಡಿದ್ದಾರೆ. ಇಷ್ಟು ದಿನ ಶಾಂತವಾಗಿದ್ದ ಕೊರೊನಾ ಇದೀಗ ಒಂದೇ ದಿನ ಭರ್ಜರಿ ಶಾಕ್ ಕೊಟ್ಟಿದೆ. ಉಡುಪಿ ಜಿಲ್ಲೆಯ ಮಟ್ಟಿಗೆ ಇಂದು ನಿರಾಳ ಸುದ್ದಿ ಹೊರಬಿದ್ದಿದೆ. ಆದರೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.