Thursday, January 23, 2025
ಸುದ್ದಿ

ಚಿಕನ್ ಸೆಂಟರ್’ನಲ್ಲಿ ಗೋ ಮಾಂಸ ಮಾರಾಟ : ಆರೋಪಿ ಬೋರಿ ಅಲ್ಲ, ಕೋರಿ ಮಹಮ್ಮದ್ ಬಂಧನ – ಕಹಳೆ ನ್ಯೂಸ್

ರಾಮಕುಂಜ: ಉಪ್ಪಿನಂಗಡಿ ಸಮೀಪದ ರಾಮಕುಂಜ ಗ್ರಾಮದ ಆತೂರುನ ಡಿಲೈಟ್ ಚಿಕನ್ ಸೆಂಟರ್‌ನಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಕಡಬ ಪೋಲಿಸರು, ಮಾಂಸವನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ರಾಮಕುಂಜ ಗ್ರಾಮದ ನೀರಾಜೆ ಎಂಬಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸಿ ನಂತರ ದನದ ಮಾಂಸವನ್ನು ಚಿಕನ್ ಸೆಂಟರ್ ನಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಓರ್ವ ಪರಾರಿಯಗಿದ್ದಾನೆ. ಈ ಸಂದರ್ಭದಲ್ಲಿ 23 ಕೆಜಿ ಮಾಂಸ ವಶಪಡಿಸಿಕೊಂಡ ಪೋಲಿಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಮಕುಂಜ ಗ್ರಾಮದ ಆತೂರು ಡಿಲೈಟ್ ಚಿಕನ್ ಸೆಂಟರ್‌ನಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಕಡಬ ಪೋಲಿಸರು ಚಿಕನ್ ಸೆಂಟರ್‌ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಸೆಂಟರ್ ಮಾಲಕ ರಾಮಕುಂಜ ನಿವಾಸಿ ಮಹಮ್ಮದ್ ಎಂಬವರನ್ನು ವಶಕ್ಕೆ ಪಡೆದು, ಫ್ರಿಜ್ ನಲ್ಲಿರಿಸಿದ್ದ 9 ಕೆ.ಜಿ ಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆಯಲ್ಲಿ ಮಾಂಸ ಮಾರಾಟ:

ರಾಮಕುಂಜ ಗ್ರಾಮದ ಆತೂರು ಡಿಲೈಟ್ ಚಿಕನ್ ಸೆಂಟರ್‌ಗೆ ಮಾಂಸ ಮಾರಾಟ ಮಾಡುತ್ತಿರುವ ನೀರಾಜೆ ಎಂಬಲ್ಲಿರುವ ಸಿರಾಜ್ ಎಂಬಾತನ ಮನೆಗೆ ದಾಳಿ ನಡೆಸಿದ ಪೋಲಿಸರು ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 14 ಕೆ.ಜಿ ಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ, ಈ ಸಂದರ್ಭದಲ್ಲಿ ಆರೋಪಿ ಸಿರಾಜ್ ಪರಾರಿಯಾಗಿದ್ದಾರೆ. ಈ ಬಗ್ಗೆ ಸಿರಾಜ್ ವಿರುದ್ದ ಪ್ರಕರಣ ದಾಖಲಾಗಿದೆ. ಕಾರ್‍ಯಾಚರಣೆಯಲ್ಲಿ ಕಡಬ ಎಸ್.ಐ.ರುಕ್ಮ ನಾಯ್ಕ್, ಸಿಬ್ಬಂದಿಗಳಾದ ಭವಿತ್ ರೈ, ಶ್ರೀ ಶೈಲ, ಮಹೇಶ್, ಸೋಮಯ್ಯ ಭಾಗವಹಿಸಿದ್ದರು.