Thursday, January 23, 2025
ಸುದ್ದಿ

Big News : ಆತ್ಮಹತ್ಯೆ ಮಾಡಿಕೊಂಡ ಮೂಡಬಿದಿರೆಯ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢ..! – ಕಹಳೆ ನ್ಯೂಸ್

ಮೂಡಬಿದಿರೆ: ಕೊರೊನಾ ಸೋಂಕು ಇದೆ ಎಂಬ ಭಯದಿಂದ ಕ್ವಾರಂಟೈನ್ ನಲ್ಲಿದ್ದಾಗಲೇ ಆತ್ಮಹತ್ಯೆಗೆ ಶರಣಾಗಿದ್ದ ವ್ಯಕ್ತಿಗೆ ಇದೀಗ ಕೊರೊನಾ ಇರುವುದು ದೃಢಪಟ್ಟಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಮೂಡಬಿದಿರೆ ಸಮೀಪದ ಕಡಂದಲೆ ನಿವಾಸಿಯಾಗಿದ್ದರು. ಮುಂಬೈನಿಂದ ಮರಳಿ ಬಂದ ವ್ಯಕ್ತಿಯನ್ನು ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇ 21ರ ಗುರುವಾರ ಮುಂಜಾನೆ 1 ಗಂಟೆ ಸುಮಾರಿಗೆ ಕಡಂದಲೆ ಶಾಲೆಯಲ್ಲಿ ಈತನನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆ ವ್ಯಕ್ತಿ ಬೆಳಗಿನ ಜಾವ 3 ಗಂಟೆಗೆ ಆತ್ಮಹತ್ಯೆಗೆ ಶರಣಾಗಿದ್ದ.

ಮೃತನ ಥ್ರೋಟ್ ಸ್ವ್ಯಾಬ್ ಅನ್ನು ಅದೇ ದಿನ ಪರೀಕ್ಷಿಸಲಾಯಿತು. ಇಂದು (ಮೇ 22) ವರದಿ ಬಂದಿದ್ದು ಸೋಂಕು ದೃಢಪಟ್ಟಿದೆ.

ಮೃತನ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬೋಳೂರು ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ.