Thursday, January 23, 2025
ಸುದ್ದಿ

ಕೆದಿಲ ಗಡಿಯಾರದಲ್ಲಿ 40 KG ಅಕ್ರಮ ಗೋ ಮಾಂಸ ವಶಕ್ಕೆ ಪಡೆದ ಪುತ್ತೂರು ಪೋಲೀಸರು ;‌ ಚಳ್ಳೆ ಹಣ್ಣು ತಿನ್ನಿಸಿ, ಓಡಿ ಹೋದ ಕಂಡು ಅಬುಬ್ಬಕರ್..! – ಅರೇ, 20ಕ್ಕೂ ಅಧಿಕ ಭಾರಿ ಗೋ ಸಾಗಾಟ, ಅಕ್ರಮ ಚಟುವಟಿಕೆಯಲ್ಲಿ ಸಿಕ್ಕಿಬಿದ್ದ ಈ ಬೋರಿಗೆ ಮೂಗುದಾರ ಹಾಕೋರು ಯಾರು..? – ಕಹಳೆ ನ್ಯೂಸ್

ಪುತ್ತೂರು : ಕೆದಿಲ ಗ್ರಾಮದ ಗಡಿಯಾರ ನಿವಾಸಿ ಮರಿಯಮ್ಮ ಅವರ ನಿವಾಸದಲ್ಲಿ ಅಕ್ರಮವಾಗಿ ಮಾರುತ್ತಿದ್ದ ಗೋ ಮಾಂಸವನ್ನು ಪುತ್ತೂರು ನಗರ ಠಾಣಾ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಅಬುಬಕರ್ ಗಡಿಯಾರ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ.

ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ನೀಡಿದ ಖಚಿತ ಮಾಹಿತಿಯ ಮೇರೆಗೆ ಬೆಳಗ್ಗೆ 7-30 ರ ಅಂದಾಜಿಗೆ ಮರಿಯಮ್ಮ ನಿವಾಸಕ್ಕೆ ಪುತ್ತೂರು ನಗರ ಪೋಲೀಸರ ತಂಡ ದಾಳಿ ನಡೆಸಿದಾಗ ನಿವಾಸದಲ್ಲಿ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ 40 kg ಯಷ್ಟು ಗೋ ಮಾಂಸ ಸಿಕ್ಕಿರುತ್ತದೆ. ಆರೋಪಿ ಅಬುಬ್ಬಕರ್ ಗಡಿಯಾರ ಪೋಲೀಸರನ್ನು ಕಂಡ ತಕ್ಷಣ ಓಡಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣ ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಷ್ಟು ಸಾರಿ ಬಂದಿಸಿದರೂ ಬುದ್ದಿ ಬಿಡದ ಅಬುಬ್ಬಕರ್ :

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಅಬುಬ್ಬಕರ್ ಗಡಿಯಾರ ಅನೇಕ ವರುಷಗಳಿಂದ ಅಕ್ರಮ ಗೋಸಾಗಾಟ ಹಾಗು ಅಕ್ರಮ ಕಸಾಯಿಖಾನೆ ನಡೆಸಿತ್ತಾ ಬರುತ್ತಿದ್ದು ಜಿಲ್ಲೆಯಾಧ್ಯಂತ ಅನೇಕ ಠಾಣೆಗಳಲ್ಲಿ ಈತನ ಬಗ್ಗೆ ಪ್ರಖರಣ ದಾಕಲಾಗಿರುತ್ತದೆ.

ಆದರೂ, ಮತ್ತೆ ಮತ್ತೆ ಆತ ಈ ಗೋ ಸಾಗಾಟ ಕೃತ್ಯವನ್ನು ಮುಂದುವರಿಸಿದ್ದು ಆತನ ಈ ಕೃತ್ಯವು ಹಿಂದುಗಳ ನಂಬಿಕೆಗೆ ದಕ್ಕೆ ತರುವಂತಹದ್ದು,ಹಾಗು ಪರೋಕ್ಷವಾಗಿ ಕೋಮುಗಲಬೆಗೆ ನಾಂದಿಹಾಡುವ ಹುನ್ನಾರ ಆಗಿರುತ್ತದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಅಬುಬಕರನನ್ನು ರೌಡಿ ಲೀಸ್ಟಿಗೆ ಸೇರಿಸಬೇಕು ಎಂದು ಹಿಂ.ಜಾ.ವೇ ಒತ್ತಾಯಿಸಿದೆ.

20ಕ್ಕೂ ಅಧಿಕ ಭಾರಿ ಗೋ ಸಾಗಾಟ, ಅಕ್ರಮ ಚಟುವಟಿಕೆಯಲ್ಲಿ ಸಿಕ್ಕಿಬಿದ್ದ ಈ ಬೋರಿಗೆ ಮೂಗುದಾರ ಹಾಕೋರು ಯಾರು..? – ಗಣರಾಜ್ ಭಟ್ ಆಕ್ರೋಶ

ಈ ಕುರಿತು ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಹಿಂ.ಜಾ.ವೇ. ಮುಖಂಡ ಗಣರಾಜ್ ಭಟ್ ಬಡೆಕ್ಕಿಲ, ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕೆದಿಲ ಗಡಿಯಾರದಲ್ಲಿ 40 KG ಅಕ್ರಮ ಗೋ ಮಾಂಸವನ್ನು ಪುತ್ತೂರು ಪೋಲೀಸರು ವಶಕ್ಕೆ ಪಡೆದಿದ್ದು, ಆದರೆ, ಆರೋಪಿ‌ ಓಡಿ ಹೋಗಿದ್ದಾನೆ. ಕಂಡು ಅಬುಬ್ಬಕರ್ ನನ್ನು ತಕ್ಷಣ ಪೋಲೀಸರು ಬಂಧಿಸಬೇಕು, ಮತ್ತು 20ಕ್ಕೂ ಅಧಿಕ ಭಾರಿ ಗೋ ಸಾಗಾಟ, ಅಕ್ರಮ ಚಟುವಟಿಕೆಯಲ್ಲಿ ಸಿಕ್ಕಿಬಿದ್ದ ಈ ಬೋರಿಗೆ ಮೂಗುದಾರ ಹಾಕೋರು ಯಾರು..? ಎಂಬ ಪ್ರಶ್ನೆ ಉದ್ಭವವಾಗಿದೆ, ಆತನ ಮೇಲೆ ರೌಡಿ ಶೀಟ್ ಓಪನ್ ಮಾಡಬೇಕು ಎಂದು ಹೇಳಿದ್ದಾರೆ.