ದಕ್ಷಿಣ ಕನ್ನಡ ಜಿಲ್ಲೆಗೆ ಗುಡ್ ನ್ಯೂಸ್ : ಐವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ; ಕೊರೊನಾ ಮುಕ್ತವಾದ ಬಂಟ್ವಾಳ – ಕಹಳೆ ನ್ಯೂಸ್
ಮಂಗಳೂರು, ಮೇ 23 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಕಾರಣದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೫ ಜನ ಬಿಡುಗಡೆಯಾಗಿದ್ದಾರೆ. ಇವರೆಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು ದ.ಕ ಜಿಲ್ಲಾಡಳಿತ ಅವರನ್ನು ಬೀಳ್ಗೊಟ್ಟಿದೆ. ಕೊರೊನಾ ಮುಕ್ತವಾಗಿ ಬಿಡುಗಡೆಗೊಂಡ 4 ಮಂದಿ ಬಂಟ್ವಾಳ,1 ಬೊಳೂರು ನಿವಾಸಿಗಳಾಗಿದ್ದಾರೆ.
ವಿಶೇಷ ಎಂದರೆ ಜಿಲ್ಲೆಯಲ್ಲಿ ಅತೀ ದೊಡ್ಡ ಕೊರೊನಾ ಹಾಟ್ ಸ್ಪಾಟ್ ಆಗಿ ಬದಲಾಗಿದ್ದ ಬಂಟ್ವಾಳದ 4 ಮಂದಿಯೂ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಈ ಮೂಲಕ ಬಂಟ್ವಾಳ ಕೊರೊನಾ ಮುಕ್ತವಾಗಿದೆ. ಇಂದು ಬಿಡುಗಡೆಯಾದವರ ಪೈಕಿ ಓರ್ವರು ದೃಷ್ಟಿ ಕಳೆದುಕೊಂಡ ಹಿರಿಯ ನಾಗರಿಕರಾಗಿದ್ದಾರೆ.
ಇವರನ್ನು ಜಿಲ್ಲಾಡಳಿತದ ವತಿಯಿಂದ ವೆನ್ಲಾಕ್ ಆಯುಷ್ ಬ್ಲಾಕ್ ಮುಂಭಾಗದಲ್ಲಿ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಬೀಳ್ಕೊಟ್ಟರು. ಸದ್ಯ ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 31 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಮೂವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಕೊರೊನಾ ರೋಗಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೆನ್ಲಾಕ್ ಆಸ್ಪತ್ರೆ ಯ ಅಧೀಕ್ಷಕ ಡಾ.ಸದಾಶಿವ ಶಾನುಭೋಗ ಮಾಹಿತಿ ನೀಡಿದ್ದಾರೆ.